ಶಿವರಾಜ್‌ಕುಮಾರ್ ಧಮ್ ಹೊಡೆಯೋ ಬಗ್ಗೆ ವರನಟ ಡಾ.ರಾಜ್‌ಕುಮಾರ್ ಏನ್ ಹೇಳ್ತಾ ಇದ್ರು?
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಮನೆ ಅಂದ್ರೆ, ಡಾ. ರಾಜ್‌ಕುಮಾರ್ ಕುಟುಂಬದ ಸೇವೆಯನ್ನ ಎಂದಿಗೂ ಮರೆಯಲು ಆಗುವುದಿಲ್ಲ. ಅದರಲ್ಲೂ ಕನ್ನಡ ಸಿನಿಮಾ ರಂಗವನ್ನು ಬೇರಿಂದ ಗಟ್ಟಿಯಾಗಿ ಬೆಳೆಸಿದ ಕೀರ್ತಿ, ಕನ್ನಡಿಗರ ಪಾಲಿನ ಅಣ್ಣಾವ್ರಿಗೆ ಸಲ್ಲಬೇಕು. ನೂರಾರು ಚಿತ್ರ ಮಾಡಿ, 2-3 ತಲೆಮಾರಿಗೆ ಮಾದರಿ ಆಗಿರುವ ಡಾ.ರಾಜ್‌ಕುಮಾರ್ ಎಂದಿಗೂ ಸಿಗರೇಟ್ & ಮದ್ಯಪಾನದ ಬಗ್ಗೆ ಸಿನಿಮಾದಲ್ಲಿ ತೋರಿಸಲಿಲ್ಲ. ಆದ್ರೆ ನಟ ಶಿವಣ್ಣ ತಮ್ಮ ಸಿನಿಮಾದಲ್ಲಿ ಸಿಗರೇಟ್ ಹಿಡಿದಾಗ ಏನ್ ಹೇಳಿದ್ರಂತೆ ಗೊತ್ತಾ ಅಣ್ಣಾವ್ರು?
ಡಾ. ರಾಜ್‌ಕುಮಾರ್ ಕರ್ನಾಟಕ, ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಬಹುದೊಡ್ಡ ಹೆಸರನ್ನು ಗಳಿಸಿದ್ದ ನಟ. ಈ ನಟ ನಮ್ಮ ನೆಲದವರು ಎನ್ನುವ ಹೆಮ್ಮೆ ಕನ್ನಡಿಗರಿಗೆ ಇದೆ. ಇಷ್ಟೆಲ್ಲಾ ಬೆಳೆದು ನಿಂತರೂ ಅಣ್ಣಾವ್ರು ಸಮಾಜಕ್ಕೆ ಮಾರಕ ಆಗುವಂತಹ ದುಶ್ಚಟಗಳನ್ನು ತಮ್ಮ ಸಿನಿಮಾದಲ್ಲಿ & ಜಾಹೀರಾತುಗಳಲ್ಲಿ ತೋರಿಸಲು ಒಪ್ಪಿರಲಿಲ್ಲ. ಹೀಗಿದ್ದಾಗ, ಅವರ ಮುಂದಿನ ಪೀಳಿಗೆ ಅಂದ್ರೆ ಅವರ ಪುತ್ರ ಶಿವರಾಜ್‌ಕುಮಾರ್ ಅವರು ಸಿನಿಮಾದಲ್ಲಿ ಸಿಗರೇಟ್ ಸೇದುವಾಗ ಟೀಕೆಗಳು ಬಂದಿದ್ದವಂತೆ. ಆಗ ವರನಟ ರಾಜ್‌ಕುಮಾರ್ ಏನ್ ಹೇಳಿದ್ರು ಗೊತ್ತೆ?

'ಅವರು ಶಿವರಾಜ್‌ಕುಮಾರ್, ರಾಜ್‌ಕುಮಾರ್ ಅಲ್ಲ'
ಹೌದು, ರಾಜ್‌ಕುಮಾರ್ ಅವರು ಹೇಗೆ ಸಾರ್ವಕಾಲಿಕ ಶ್ರೇಷ್ಠ ನಟ? ಎನ್ನುವ ಪ್ರಶ್ನೆಗೆ ಇಲ್ಲಿ ಒಂದೇ ವಾಕ್ಯದ ಉತ್ತರ ಇದೆ. ತಮ್ಮ ಪುತ್ರ ಸಿನಿಮಾದಲ್ಲಿ ಸಿಗರೇಟ್ ಸೇದುವ ಸೀನ್‌ನಲ್ಲಿ ನಟಿಸುವಾಗ, ಟೀಕೆ ಮಾಡಿದವರಿಗೆ ಸರಿಯಾದ ಉತ್ತರ ನೀಡಿದ್ದರಂತೆ. ಡಾ.ರಾಜ್‌ಕುಮಾರ್ ಅವರ ಕಾಲಘಟ್ಟದ ಸಿನಿಮಾಗಳು ಬೇರೆ ರೀತಿ ಇದ್ದವು. ಆದರೆ ಶಿವರಾಜ್‌ಕುಮಾರ್ ಅವರು ಸಿನಿಮಾ ಇಂಡಸ್ಟ್ರಿಗೆ ಬಂದಾಗ ಪರಿಸ್ಥಿತಿ ಬದಲಾಗಿತ್ತು. ಹೀಗಿದ್ದಾಗ ಅವರ ನಿರ್ಧಾರವನ್ನು ನಾವು ಪ್ರಶ್ನೆ ಮಾಡಲು ಆಗಲ್ಲ. ನಾನು ಮಾಡಿಲ್ಲ ಅಂದ್ರೆ ಅವರು ಮಾಡಬಾರದು ಅಂತ ನಿಯಮ ಇಲ್ಲ. ಸಿನಿಮಾವನ್ನ ಸಿನಿಮಾ ರೀತಿ ನೋಡಿ ಎನ್ನುವ ಸಂದೇಶ ಕೊಟ್ಟಿದ್ದರಂತೆ, ಕನ್ನಡಿಗರ ಪ್ರೀತಿಯ ವರನಟ ಡಾ. ರಾಜ್‌ಕುಮಾರ್.
ಹ್ಯಾಟ್ರಿಕ್ ಹೀರೋ ಶಿವಣ್ಣ ಹೇಳಿದ್ದೇನು?
ಹೀಗೆ ಡಾ.ರಾಜ್‌ಕುಮಾರ್ ಅವರು ಕನ್ನಡಿಗರಿಗೆ ಸಾಲು ಸಾಲು ಸಿನಿಮಾಗಳನ್ನು ನೀಡಿದ್ರು. ಅಲ್ಲದೆ ತಮ್ಮ ಜೀವನದಲ್ಲೂ ಕನ್ನಡ ತನವನ್ನ ಮೈಗೂಡಿಸಿಕೊಂಡು ಜೀವನ ಸಾಗಿಸಿದರು ಈ ನಟ. ಈ ಕುರಿತು ನಟ ಶಿವರಾಜ್‌ಕುಮಾರ್ ಅವರು ತಮಿಳು ಭಾಷೆಗೆ ನೀಡಿದ ಖಾಸಗಿ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ತಂದೆಯ ಗುಣವನ್ನ ಶಿವಣ್ಣ ಹೀಗೆ ಹಾಡಿ ಹೊಗಳಿದ್ದಾರೆ. ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಶಿವಣ್ಣ ಅವರು ಇದೀಗ ರಜನಿಕಾಂತ್ ಅಳಿಯ ಧನುಷ್ ಜೊತೆಗೆ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡಿಗರ ಗತ್ತು ನೆರೆಯ ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ.
ಶಿವಣ್ಣ ಅಬ್ಬರ ಬಲು ಜೋರು
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ ಆಗಿದ್ದು ಕನ್ನಡ, ತಮಿಳು, ತೆಲುಗು & ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಅರುಣ್ ಮಾಥೇಶ್ವರನ್ ಸಿನಿಮಾ ನಿರ್ದೇಶಿಸಿದ್ದರೆ, ಧನುಷ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಥೆ ಆಗಿದೆ ಈ 'ಕ್ಯಾಪ್ಟನ್ ಮಿಲ್ಲರ್'. ಹೀಗೆ ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಹವಾ ಜೋರಾಗಿದೆ. ಟ್ರೇಲರ್ ಬಗ್ಗೆ ಕೂಡ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ.

ಕನ್ನಡಿಗರು ಕೂಡ ಕಾಯುತ್ತಿದ್ದಾರೆ
ಒಟ್ನಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಹಲವು ದಶಕಗಳಿಂದ ಕಲಾ ಸೇವೆ ಸಲ್ಲಿಸುತ್ತಿರುವ ನಟ ಶಿವಣ್ಣ, ಸಿನಿಮಾ ಮಂದಿಗೆ ಮಾದರಿ ಆಗಿದ್ದಾರೆ. ಅದರಲ್ಲೂ ತಮಿಳು ಭಾಷೆಯ ಜೈಲರ್ ಸಿನಿಮಾ ಮೂಲಕ ಬೇರೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಅಬ್ಬರಿಸಿದ್ದಾರೆ. ಈಗ, ಮತ್ತೊಂದು ಸಿನಿಮಾ ಮೂಲಕ ತಮಿಳು ಸಿನಿಮಾ ಪ್ರೇಕ್ಷಕರನ್ನ ಫಿದಾ ಮಾಡಲು ಸಿದ್ಧವಾಗಿದ್ದಾರೆ. ಇತ್ತ ಕನ್ನಡಿಗರು ಕೂಡ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಸಿನಿಮಾಗೆ ಕಾಯುತ್ತಿದ್ದಾರೆ. ಕಳೆದ ವರ್ಷ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ್ದ ಕೀರ್ತಿ ನಟ ಶಿವಣ್ಣ ಅವರಿಗೆ ಸಲ್ಲುತ್ತದೆ.
ಇನ್ನೇನು ಕೆಲವೇ ದಿನದಲ್ಲಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ರಿಲೀಸ್ ಆಗಲಿದ್ದು, ಫ್ಯಾನ್ಸ್ ಈ ಸಿನಿಮಾಗೆ ಕಾಯುತ್ತಿದ್ದಾರೆ. ಅದರಲ್ಲೂ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೇ, ಈ ಕಥೆ ತೆರೆದುಕೊಳ್ಳುತ್ತದೆ ಎಂಬುದು ಕುತೂಹಲವನ್ನು ಡಬಲ್ ಮಾಡಿದೆ. ಹೀಗಾಗಿ, ಸಿನಿಮಾ ರಿಲೀಸ್‌ಗೆ ಭಾರಿ ತಯಾರಿ ನಡೆಸಲಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಈ ಸಿನಿಮಾ ರಿಲೀಸ್ ಆಗಲಿದ್ದು, ವಿಶ್ವದ ವಿವಿಧ ದೇಶಗಳಿಗೂ ಲಗ್ಗೆ ಇಡಲಿದೆ ಸಿನಿಮಾ.












Click it and Unblock the Notifications