Actress Amulya: ನಟಿ ಅಮೂಲ್ಯ ಬಗ್ಗೆ ಅಣ್ಣನಿಗಿದ್ದ ಹೆಮ್ಮೆ ಎಂತಹದ್ದು ಗೊತ್ತಾ?
ಸ್ಯಾಂಡಲ್‌ವುಡ್‌ನ ಯುವ ನಿರ್ದೇಶಕ ಹಾಗೂ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ವಿಧಿವಶರಾಗಿದ್ದಾರೆ. 42 ವರ್ಷದ ದೀಪಕ್ ಅರಸ್ ಬಹುಕಾಲದ ಅನಾರೋಗ್ಯದಿಂದ ಅಕ್ಟೋಬರ್ 18ರಂದು ಮೃತರಾದರು. ತಮ್ಮ ಸಹೋದರಿ ಬಗ್ಗೆ ಅತೀವ ಹೆಮ್ಮೆ-ಖುಷಿ ಇಟ್ಟುಕೊಂಡಿದ್ದ ದೀಪಕ್ ಅರಸ್ ಹಿಂದೊಮ್ಮೆ ಸಂದರ್ಶನದಲ್ಲಿ ಅಮೂಲ್ಯ ಯಶಸ್ಸಿನ ಬಗ್ಗೆ ಮಾತನಾಡಿದ್ದರು.
ಫಿಲ್ಮೀ ಫಸ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ದೀಪಕ್ ಅಸರ್, 'ಅವಳು ಇಷ್ಟು ದೊಡ್ಡ ನಟಿ ಆಗುತ್ತಾಳೆ ಅಂತಾ ಕನಸಿನಲ್ಲಿಯೂ ನಾವು ಅಂದುಕೊಂಡಿರಲಿಲ್ಲ. ಚಿಕ್ಕವಳಿದ್ದಾಗ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಹೋಗುತ್ತಿದ್ದಳು. ನನಗೆ ಬಹಳ ಇಷ್ಟವಾಗಿದ್ದು ಅಂದರೆ, ತಿಮ್ಮ ಅಂತಾ ಒಂದು ಸಿನಿಮಾ ಮಾಡಿದರು. ಅದರಲ್ಲಿ ಉಯ್ಯಾಲೆ ಉಯ್ಯಾಲೆ ಅಂತಾ ಒಂದು ಹಾಡಿದೆ. ಆ ಸಿನಿಮಾ ಆಕೆಗೆ ಒಳ್ಳೆ ಬ್ರೇಕ್ ಕೊಟ್ಟಿತು' ಎಂದು ಹೇಳಿದ್ದರು.

'ತಿಮ್ಮ ಸಿನಿಮಾದಲ್ಲಿ ಅಮೂಲ್ಯ ತುಂಬಾ ಚೆನ್ನಾಗಿ ಮಾಡಿದ್ದರು. ಅದನ್ನು ನೋಡಿದ ಮೇಲೆ ಚೆಲುವಿನ ಚಿತ್ತಾರ ಆಫರ್ ಸಿಕ್ಕಿದ್ದು. ಅವಳಿಗೆ ಆ ಅವಕಾಶ ಬಂದಾಗ ನನಗೆ ನಂಬೋಕೆ ಆಗಲಿಲ್ಲ. ಅದು ರಿಮೇಕ್ ಸಿನಿಮಾ ಅಂತಾ ನೋಡಿ ಆ ಸಿನಿಮಾ ನೋಡಿದ ಮೇಲೆ ಹೇಗೆ ಮಾಡ್ತಾಳೋ ಅನಿಸಿತ್ತು'
'ಅದು ಬೇರೆ ಗಣೇಶ್ ಸರ್ ಜೊತೆ. ಆಗ ಅವರು ಗೋಲ್ಡನ್ ಸ್ಟಾರ್ ಆಗಿದ್ದರು. ಅವರ ಜೊತೆ ಎಸ್.ನಾರಾಯಣ್ ಜೊತೆ ಎಲ್ಲಾ ಹೇಗೆ ಮಾಡ್ತಾಳೋ ಅಂತಾ ಟೆನ್ಷನ್ ಆಗಿತ್ತು. ಆದರೆ ಇಡೀ ಕರ್ನಾಟಕ ಅವಳ ಕೈ ಹಿಡಿಯಿತು. ನನಗೆ ಈಗಲೂ ನೆನಪಿದೆ ಒಂದು ಭಾನುವಾರ ಎಲ್ಲಾ ಕಡೆ ಅಮೂಲ್ಯದ್ದೇ ಸುದ್ದಿ. ಉತ್ತರ ಕರ್ನಾಟಕದಲ್ಲಿಯೂ ಸಹ ಜನಪ್ರಿಯತೆ ಪಡೆದಿದ್ದಳು ಎಂದು ಖುಷಿ ಹಂಚಿಕೊಂಡಿದ್ದರು.

ತುಂಬಾ ಖುಷಿ ಆಯ್ತು. ಇದಕ್ಕಿಂತ ಇನ್ನೇನು ಬೇಕು ಅನಿಸಿತು. ಆ ಕ್ಷಣ ನಮ್ಮ ಅಪ್ಪ-ಅಮ್ಮ ಎಲ್ಲರಿಗೂ ಖುಷಿ ಆಯ್ತು. ಒಂದು ಯಶಸ್ಸಿಗಾಗಿ ಎಲ್ಲರೂ ಕಷ್ಟ ಪಡುತ್ತಿರುತ್ತಾರೆ. ಅವಳಿಗೆ ಅದು ಸಿಕ್ಕಾಗ ಖುಷಿ ಆಯ್ತು. ನನ್ನ ತಾಯಿ ತುಂಬಾ ಶ್ರಮ ಹಾಕಿದ್ದರು. ತುಂಬಾ ಚಿಕ್ಕ ಮಗು ಇದ್ದಾಗ ಧಾರಾವಾಹಿಯಿಂದ ಪಾದಾರ್ಪಣೆ ಮಾಡಿದಳು. ಅಲ್ಲಿಂದ ಒಂದೊಂದೇ ಅವಕಾಶಗಳು ಬಂದವು ಅವಳನ್ನು ತೆರೆ ಮೇಲೆ ನೋಡೋದೆ ನಮಗೆ ಸಂಭ್ರಮ ಆಗಿತ್ತು ಎಂದು ಅಮೂಲ್ಯ ಅಣ್ಣ ದೀಪಕ್ ಅರಸ್ ಹೆಮ್ಮೆ ವ್ಯಕ್ತಪಡಿಸಿದ್ದರು.












Click it and Unblock the Notifications