ಸಿಎಂ ಸಿದ್ದರಾಮಯ್ಯಗೂ ಬೆಂಬಿಡದ ‘ಏನಿಲ್ಲ.. ಏನಿಲ್ಲ..’ ಉಪೇಂದ್ರ ಹಾಡಿನ ಒಡನಾಟ!

'ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ' ಹಾಡು ಸೂಪರ್ ಹಿಟ್ ಆಗಿತ್ತು. ಈ ಸಾಂಗ್ ಅದೆಷ್ಟೋ ಪ್ರೇಮಿಗಳ ನಿದ್ದೆಗೆಡಿಸಿ, ಮೋಡಿ ಮಾಡಿತ್ತು. ಆದರೆ ಈ ಆಧುನಿಕ ಜಗತ್ತಿನಲ್ಲೂ ಏನಿಲ್ಲ, ಏನಿಲ್ಲ ಹಾಡಿನ ಸೌಂಡ್ ಜೋರಾಗಿದೆ. ಸೂಪರ್ ಹಿಟ್ ಹಾಡಿನ ಹವಾಗೆ ಸ್ವತಃ, ಸಿಎಂ ಸಿದ್ದರಾಮಯ್ಯ ಅವರು ಕೂಡ ಸಿಲುಕುವಂತಾಗಿದೆ. ಹಾಗಾದರೆ ಈಗ ಆಗಿದ್ದೇನು..? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಅಷ್ಟಕ್ಕೂ 1999ರಲ್ಲಿ ರಿಲೀಸ್ ಆಗಿ ಕನ್ನಡ ಸಿನಿ ರಂಗದಲ್ಲಿ ಹೊಸ ದಾಖಲೆ ಬರೆದಿದ್ದ ಉಪೇಂದ್ರ ಸಿನಿಮಾದ ಸೂಪರ್ ಹಿಟ್ ಹಾಡು 'ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ..' ಸಾಂಗ್ ಕೇಳಿ ಕೋಟ್ಯಂತರ ಫ್ಯಾನ್ಸ್ ಖುಷ್ ಆಗಿದ್ದರು.

Sandalwood Blockbuster Upendra Movie Song Enilla Enilla Remix With Moye Moye

ಹೀಗೆ ಈ ಹಾಡು ಕನ್ನಡಿಗರ ಮನಸ್ಸಿನಲ್ಲಿ, ದೊಡ್ಡ ಮೋಡಿ ಮಾಡಿ ಇದೀಗ 25 ವರ್ಷ ಪೂರೈಸಿದೆ. ಈ ಸಿಹಿ ಸಮಯದಲ್ಲೇ 'ಉಪೇಂದ್ರ' ಸಿನಿಮಾದ ಹಾಡು ವೈರಲ್ ಆಗ್ತಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು & ಪ್ರಧಾನಿ ಮೋದಿ ಅವರ ನಡುವೆ ಹೋಲಿಕೆ ಮಾಡಿ ಟ್ರೋಲ್ ಮಾಡಲು ಇದೇ ಹಾಡು ಬಳಸಿದ್ದಾರೆ ಕೆಲವರು.

ಮೊಯೆ ಮೊಯೆ & ಏನಿಲ್ಲ ಏನಿಲ್ಲ!

ಅಷ್ಟಕ್ಕೂ ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬಂದೇ ಬಿಟ್ಟಿದೆ, ಈ ಸಮಯದಲ್ಲಿಯೆ ರಾಜಕೀಯ ವ್ಯಕ್ತಿಗಳ ವಿರುದ್ಧ ಟ್ರೋಲ್ ಹಾವಳಿ ಕೂಡ ಜೋರಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಹುಟ್ಟಿಕೊಳ್ಳುತ್ತಿವೆ.

ಅದೇ ರೀತಿ ಈಗ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ಅವರ ನಡುವೆ ಹೋಲಿಕೆ ಮಾಡಿದ್ದಾರೆ ಕೆಲವರು. ಮತ್ತೆ ಬಿಜೆಪಿ ಸರ್ಕಾರವೇ ಆಡಳಿತಕ್ಕೆ ಬರುತ್ತೆ ಅಂತಾ ಟ್ರೋಲ್ ಮಾಡಲಾಗಿದೆ. ಇದೇ ಟ್ರೋಲ್ ವೇಳೆ ಏನಿಲ್ಲ ಏನಿಲ್ಲ ಸಾಂಗ್ ಬಳಸಲಾಗಿದೆ. ಹಾಗೆ ಇದರ ಜೊತೆ ರಿಮಿಕ್ಸ್ ಆಗಿರುವ ಮೊಯೆ ಮೊಯೆ ಹಾಡಿನ ಬಿಟ್ ಕೂಡ ಬಳಕೆ ಆಗಿದೆ.

'ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ.. ಏನೇನಿಲ್ಲ.. ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವೂ ಸುಳ್ಳಲ್ಲ ಏನಿಲ್ಲ ಏನಿಲ್ಲ.. ಏನೇನಿಲ್ಲ..' ಅಂತಾ ಇರೋ ಹಾಡನ್ನ ಸೋಷಿಯಲ್ ಮೀಡಿಯಾದಲ್ಲಿ 'ಮೊಯೆ ಮೊಯೆ' ಜೊತೆ ಇದೀಗ ರಿಮಿಕ್ಸ್ ಮಾಡಿದ್ದು ವೈರಲ್ ಆಗುತ್ತಿದೆ.

ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಹಾಡನ್ನು ಹಾಕಿ ಟ್ರೋಲ್ ಮಾಡಿರುವ ಬಗ್ಗೆ ಪರ & ವಿರೋಧ ಚರ್ಚೆ ಕೂಡ ಜೋರಾಗಿದೆ. ಇಷ್ಟೆಲ್ಲದರ ನಡುವೆ ಈ ಟ್ರೋಲ್ ಕೂಡ ವೈರಲ್ ಆಗುತ್ತಿದೆ. ಹಾಗೇ ಏನಿಲ್ಲ.. ಏನಿಲ್ಲ.. ಹಾಡಿನ ಹವಾ ಕೂಡ ಜೋರಾಗುತ್ತಿದೆ.

Sandalwood Blockbuster Upendra Movie Song Enilla Enilla Remix With Moye Moye

SUB HEAD: 'ಏನಿಲ್ಲ ಏನಿಲ್ಲ' ಹಾಡಿನ ಲಿರಿಕ್ಸ್

ಏನಿಲ್ಲ, ಏನಿಲ್ಲ..

ನಿನ್ನ ನನ್ನ ನಡುವೆ ಏನಿಲ್ಲ,

ಏನೇನಿಲ್ಲ,

ಏನಿಲ್ಲ, ಏನಿಲ್ಲ..

ನಿನ್ನ ನನ್ನ ನಡುವೆ ಏನಿಲ್ಲ,

ನಿಜದಂತಿರುವ ಸುಳ್ಳಲ್ಲ,

ಸುಳ್ಳುಗಳೆಲ್ಲ ನಿಜವಲ್ಲ,

ಸುಳ್ಳಿನ ನಿಜವೂ ಸುಳ್ಳಲ್ಲ,

ಏನಿಲ್ಲ, ಏನಿಲ್ಲ..

ಏನೇನಿಲ್ಲ,

ಕಳೆದ ದಿನಗಳಲೇನೂ ಇಲ್ಲ,

ನೆನಪುಗಳಲಿ ಏನೇನಿಲ್ಲ,

ಉತ್ತರ & ದಕ್ಷಿಣ ಸೇರಿಸೋ ದಿಂಬಲಿ ನೀನಿಲ್ಲ,

ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ,

ಕೆದಕಿದರೆ ಏನೇನಿಲ್ಲ,

ಏನಿಲ್ಲ, ಏನಿಲ್ಲ..

ನಿನ್ನ ನನ್ನ ನಡುವೆ ಏನಿಲ್ಲ,

ಏನೇನಿಲ್ಲ,

ಮನಸಿನೊಳಗೆ ಖಾಲಿ ಖಾಲಿ,

ನೀ ಮನದೊಳಗೆ ಇದ್ದರೂ,

ಮಲ್ಲಿಗೆ ಸಂಪಿಗೆ ತರದೇ ಹೋದರೂ ನೀ ನನಗೆ,

ಓ ನಲ್ಲ ನೀನಲ್ಲ,

ಕರಿಮಣಿ ಮಾಲೀಕ ನೀನಲ್ಲ,

ಕರಿಮಣಿ ಮಾಲೀಕ ನೀ ನಲ್ಲ,

ಏನಿಲ್ಲ, ಏನಿಲ್ಲ..

ನಿನ್ನ ನನ್ನ ನಡುವೆ ಏನಿಲ್ಲ,

ನಿಜದಂತಿರುವ ಸುಳ್ಳಲ್ಲ,

ಸುಳ್ಳುಗಳೆಲ್ಲ ನಿಜವಲ್ಲ,

ಏನಿಲ್ಲ, ಏನಿಲ್ಲ..

ನಿನ್ನ ನನ್ನ ನಡುವೆ ಏನಿಲ್ಲ,

ಏನೇನಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+