Actress Prema: ಬೆಳ್ಳಿತೆರೆಯಲ್ಲಿ ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದ ಪ್ರೇಮಾ 'ಅದೇ' ವ್ಯಕ್ತಿಯನ್ನು ಮದುವೆಯಾಗಿದ್ದೇಕೆ?

ನಟಿ ಪ್ರೇಮಾ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ರಾಜೇಶ್‌ ಗೌಡ ಯುಟ್ಯೂಬ್‌ ಚಾನೆಲ್‌ನ ಸಂದರ್ಶನಲ್ಲಿ ಮಾತನಾಡಿದ್ದು, ತಾವು ಯಾಕೆ ಅಷ್ಟು ಬೇಗ ಮದುವೆಯಾದೆ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಸಮಯಕ್ಕೆ ಬಹುಬೇಡಿಕೆ ನಟಿಯಾಗಿ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ಕೊಟ್ಟು, ನಟ ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಪ್ರೇಮ ಅದೇ ವ್ಯಕ್ತಿಯನ್ನು ಯಾಕೆ ಮದುವೆಯಾದೆ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ.

ಸಂದರ್ಶನಲ್ಲಿ ಮಾತನಾಡಿದ ನಟಿ ಪ್ರೇಮಾ 'ಆ ಸಮಯದಲ್ಲಿ ನನಗೇನು ಅನಿಸಿತು ಅಂದರೆ, ಪಾತ್ರಗಳು ಸರಿಯಾಗಿ ಸಿಗುತ್ತಿರಲಿಲ್ಲ. ಮನೆಯಲ್ಲಿ ಬೇರೆ ಒತ್ತಡ ಇತ್ತು. ಅಂದರೆ ನಮ್ಮ ತಾಯಿ ನೀನು ಮದುವೆಯಾಗಬೇಕು. ನೀನು ಆಗದಿದ್ದರೆ ನಿನ್ನ ತಂಗಿ ಆಗಲ್ಲ ಎನ್ನುತ್ತಿದ್ದರು. ತಂಗಿದು ಏಳು ವರ್ಷದ ಪ್ರೀತಿ ಇತ್ತು. ಅವಳ ಆಫೀಸ್‌ ಅಲ್ಲೇ. ಇಬ್ಬರೂ ಲವ್‌ ಮಾಡುತ್ತಿದ್ದರು..ಮನೆಯಲ್ಲೂ ಗೊತ್ತಿತ್ತು. ಅಕ್ಕನಿಗೆ ಮದುವೆಯಾಗದೇ ನಾನು ಹೇಗೆ ಮದುವೆ ಆಗಲಿ ಅನ್ನುವ ಆಲೋಚನೆ ಅವಳಿಗಿತ್ತು. ಆ ಎಲ್ಲಾ ಒತ್ತಡ ಇತ್ತು.

Sandalwood Actress Prema Shared About Her Marriage Life

ಸಿನಿಮಾನೂ ಸರಿಯಾದ ಕಥೆಗಳು ಬರುತ್ತಿರಲಿಲ್ಲ. ಒಳ್ಳೆಯ ಕಥೆನು ಇರಲಿಲ್ಲ. ಅಂತಹ ಸಮಯದಲ್ಲಿ ಅಪ್ಪ ಅಮ್ಮನಿಗೆ ಬೇಸರ ಮಾಡಬಾರದು ಅಂತಾ ಮದುವೆಯಾದೆ. ನನ್ನದಾಗಿ ಒಂದೆರಡು ವರ್ಷದಲ್ಲಿ ತಂಗಿ ಮದುವೆಯಾದಳು. ನನ್ನದು ಅರೇಂಜ್‌ ಮ್ಯಾರೇಜ್‌ ಆಗಿತ್ತು' ಎಂದಿದ್ದಾರೆ.

'ಅದೇ ವ್ಯಕ್ತಿಯನ್ನು ಯಾಕೆ ಮದುವೆಯಾದೆ ಎನ್ನುವುದರ ಬಗ್ಗೆ ಮಾತನಾಡಿದ ಪ್ರೇಮಾ, ಅವರು ಮನೆಗೆ ಬರುತ್ತಿದ್ದರು. ನಾನೇ ಮದುವೆಯಾಗುತ್ತೇನೆ ಅಂತೆಲ್ಲಾ ಹೇಳುತ್ತಿದ್ದರು. ನಮ್ಮ ತಂದೆ-ತಾಯಿ ಜೊತೆಗೆಲ್ಲಾ ಅವರ ಬಗ್ಗೆ ಮಾತನಾಡಿದೆ. ಅವರೇ ಕೇಳಿದಾಗ ನೀವ್ಯಾಕೆ ಕೊಡಬಾರದು ಅಂತೆಲ್ಲಾ ಮನೆಯವರ ಜೊತೆ ಮಾತನಾಡಿದೆ. ಆಮೇಲೆ ಇಬ್ಬರ ಮನೆಯೂ ಹತ್ತಿರ ಇತ್ತು. ಹೋಗಿ ಬಂದು ಅಪ್ಪ ಅಮ್ಮನನ್ನು ನೋಡಿಕೊಳ್ಳಬಹುದು ಅಂತಾ ಆ ಉದ್ದೇಶದಿಂದ ನಾನು ಮದುವೆಯಾದೆ' ಎಂದಿದ್ದಾರೆ.

'ಮದುವೆಯಾದ ಹೊಸತರಲ್ಲಿ ನನಗೂ ಎಲ್ಲಾ ಹೆಣ್ಣು ಮಕ್ಕಳಂತೆ ಆಸೆ ನಿರೀಕ್ಷೆಗಳಿತ್ತು. ಅದೆಲ್ಲಾ ಈಡೇರದೆ ಇದ್ದಾಗ ನೋವಾಯ್ತು. ಅದನೆಲ್ಲಾ ದಾಟಿ ಬಂದೆ. ಅವರಿಂದಲೇ ನಾನು ಇವತ್ತು ಇಷ್ಟು ಗಟ್ಟಿಯಾಗಿದ್ದೇನೆ. ಈಗ ಅನಿಸುತ್ತೆ ಅವರಿಗೆ ಥ್ಯಾಂಕ್ಸ್‌ ಹೇಳಬೇಕು ಅಂತಾ..ತುಂಬಾ ಸ್ಟ್ರಾಂಗ್‌ ಆಗಿದ್ದೇನೆ. ಈ ಮೂಲಕ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ' ಎಂದು ಸಂದರ್ಶನಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+