Samantha 2nd Marriage: ಎರಡನೇ ಮದುವೆಯಾಗಿ ಸರ್‌ಪ್ರೈಸ್ ಕೊಟ್ಟ ನಟಿ ಸಮಂತಾ, ಹುಡುಗ ಯಾರು?
ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಕೊನೆಗೂ ಎರಡನೇ ಮದುವೆಯಾಗಿ ಸರ್‌ಪ್ರೈಸ್ ಕೊಟ್ಟಿದ್ದಾರೆ. ತೆಲುಗು ನಟ ನಾಗಚೈತನ್ಯ ಅವರೊಂದಿಗೆ ಡಿವೋರ್ಸ್ ಆದ ಬಳಿಕ ಸಮಂತಾ ಮತ್ತೊಂದು ಮದುವೆಯಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಸಮಂತಾ ಡಿವೋರ್ಸ್ ಬಳಿಕ ಮತ್ತೊಬ್ಬರ ಜೊತೆ ಲವ್‌ನಲ್ಲಿದ್ದಾರೆ, ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಮಂತಾ ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
ಸಮಂತಾ ಖ್ಯಾತ ನಿರ್ದೇಶಕ ರಾಜ್ ನಿಧಿಮೋರು (Raj Nidimoru) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಶನ್‌ನ ಲಿಂಗ ಭೈರವಿ ದೇವಸ್ಥಾನದಲ್ಲಿ ಇವರ ವಿವಾಹ ನೆರವೇರಿದೆ. ವಿವಾಹ ಸಮಾರಂಭಕ್ಕಾಗಿ ಅವರು ಭಾನುವಾರ ಸಂಜೆಯೇ ಕೊಯಮತ್ತೂರಿಗೆ ಆಗಮಿಸಿದ್ದರು. ಸಮಂತಾ ತಮ್ಮ ಎರಡನೇ ಮದುವೆ ವಿಚಾರವನ್ನು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಸಮಂತಾ ಮೊದಲಿಗೆ ತೆಲುಗು ನಟ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ದಿಢೀರನೆ ಈ ಜೋಡಿ ವಿಚ್ಛೇದನ ಪಡೆಯಿತು. ಬಳಿಕ ನಾಗಚೈತನ್ಯ ಅವರು ನಟಿ ಶೋಭಿತಾ ಅವರನ್ನು ಎರಡನೇ ಮದುವೆಯಾದರು. ಬಳಿಕ ಸಮಂತಾ ಕೂಡ 2024ರಿಂದಲೇ ಬೇರೊಬ್ಬರನ್ನು ಪ್ರೀತಿಸುತ್ತಿದ್ದಾರೆ ಸದ್ಯದಲ್ಲೇ ಮದುವೆ ವಿಚಾರ ಘೋಷಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಹಲವೆಡೆ ಕಾಣಿಸಿಕೊಂಡಿದ್ದ ಸಮಂತಾ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಂಡರು ತಮ್ಮಿಬ್ಬರ ನಡುವಿನ ಪ್ರೀತಿ ಹಾಗೂ ಮದುವೆ ಪ್ಲ್ಯಾನಿಂಗ್ ವಿಚಾರಗಳ ಬಗ್ಗೆ ಎಂದಿಗೂ ಅವರು ಮಾತನಾಡಿರಲಿಲ್ಲ. ಈಗ ಗುಟ್ಟಾಗಿ ಇಬ್ಬರೂ ಮದುವೆಯಾಗಿ ನಂತರ ಇದನ್ನು ಬಹಿರಂಗಪಡಿಸಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಪ್ರೈಮ್ ವಿಡಿಯೋ ಸರಣಿಯಾದ ದಿ ಫ್ಯಾಮಿಲಿ ಮ್ಯಾನ್ ಎರಡನೇ ಸೀಸನ್ ಮತ್ತು ಸಿಟಾಡೆಲ್: ಹನಿ ಬನ್ನಿ ವೇಳೆ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿ ಇದೀಗ ಅಧಿಕೃತವಾಗಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಇಬ್ಬರಿಗೂ ಎರಡನೇ ಮದುವೆ
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಇಬ್ಬರಿಗೂ ಇದು ಎರಡನೇ ಮದುವೆ. ಸಮಂತಾ ರುತ್ ಪ್ರಭು ಅವರು ತಮ್ಮ ಸಹನಟ ನಾಗಚೈತನ್ಯ ಅವರನ್ನು ಮೊದಲ ವಿವಾಹವಾಗಿ ಡಿವೋರ್ಸ್ ಪಡೆದಿದ್ದರು. ನಿರ್ದೇಶಕ ರಾಜ್ ನಿಧಿಮೋರು ಕೂಡ ಶ್ಯಾಮಲಿ ದೇ ಅವರನ್ನು ಮೊದಲ ವಿವಾಹವಾಗಿದ್ದರು. ಇದೀಗ ಇಬ್ಬರೂ ಎರಡನೇ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಸಮಂತಾ ಅಭಿಮಾನಿಗಳು ಕೊನೆಗೂ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀರಿ. ನಿಮ್ಮ ಹೊಸ ಜೀವನ ಸುಖಕರವಾಗಿರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.












Click it and Unblock the Notifications