ದರ್ಶನ್ ಫ್ಯಾನ್ಸ್ ಮಾಡಿದ ಆ ಕೆಲಸದಿಂದ ದೊಡ್ಡ ಅವಾಂತರ, ಏನದು?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರು ಜೈಲು ಸೇರಿದ ನಂತರವೂ ಅವರ ಕೆಲ ಅಭಿಮಾನಿಗಳು ಮಿತಿಮೀರಿದ ಹೇಳಿಕೆಗಳನ್ನು ನೀಡುತ್ತಿದ್ದರು. ಕೆಲವರು ಮನಬಂದಂತೆ ಅವಾಚ್ಯವಾಗಿಯೂ, ಅತಿರೇಕವಾಗಿಯೂ ವರ್ತಿಸಿದ್ದರು. ಇನ್ನು ದರ್ಶನ್ ಅಭಿಮಾನಿಗಳು ಮಾಡಿರುವ ಒಂದು ಕೆಲಸದಿಂದ ದೊಡ್ಡ ಅವಾಂತರವೇ ನಡೆದು ಹೋಗಿದೆ.
ದರ್ಶನ್ ಫ್ಯಾನ್ಸ್‌ನ ಎಡವಟ್ಟಿಗೆ ರಾಜ್ಯದ ಪ್ರಮುಖ ಸಾಹಿತಿಯೊಬ್ಬರು ಶ್ರವಣ ಶಕ್ತಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ನಾಡಿನ ಹೆಸರಾಂತ ಸಾಹಿತಿಯಾಗಿರುವ ಗೊ.ರು.ಚನ್ನಬಸಪ್ಪ ಅವರೇ ಈ ದರ್ಶನ್ ಅಭಿಮಾನಿಗಳ ವಿರುದ್ಧ ಈ ಆರೋಪ ಮಾಡಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಸಮೀಪದಲ್ಲೇ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಮನೆ ಕೂಡ ಇದೆ. ದರ್ಶನ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಜೋಶ್‌ನಲ್ಲಿ ಪಟಾಕಿಗಳನ್ನು ಸಿಡಿಸಿದ್ದರು. ಈ ಶಬ್ಧಕ್ಕೆ ಇವರ ಶ್ರವಣ ಶಕ್ತಿ ಕುಂದಿದ್ದು, ಸರಿಯಾಗಿ ಕಿವಿ ಕೇಳದಂತಾಗಿದೆ ಎಂದು ಸಾಹಿತಿ ಬೇಸರ ತೋಡಿಕೊಂಡಿದ್ದಾರೆ.
ಗದಗ ಜಿಲ್ಲೆಯಲ್ಲಿ ನಡೆದ ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿರುವ ನನ್ನ ಮನೆ ಪಕ್ಕದಲ್ಲೇ ನಟ ದರ್ಶನ್ ಅವರ ಮನೆ ಇದೆ. ದರ್ಶನ್ ಹುಟ್ಟುಹಬ್ಬಕ್ಕೆ ಬರೋ ಅಭಿಮಾನಿಗಳು ನಮ್ಮ ಮನೆ ಮುಂದೆಯೂ ಹೆಚ್ಚಾಗಿ ಸೇರುತ್ತಾರೆ. ದರ್ಶನ್ ಅವರ ಹುಟ್ಟುಹಬ್ಬದಂದು ಭಾರಿ ಪ್ರಮಾಣದ ಪಟಾಕಿ ಸಿಡಿಸಿದ್ದರು. ಈ ಶಬ್ಧದಿಂದ ನನ್ನ ಶ್ರವಣ ಶಕ್ತಿ ಕಳೆದುಕೊಂಡೆ. ಇದರಿಂದ ನನಗೆ ಇಂದು ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಎಂದು ಹೇಳಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಅವರಿಗೆ ನಿನ್ನೆ ಕೋರ್ಟ್‌ನಲ್ಲಿ ಜಾಮೀನು ನಿರಾಕರಣೆಯಾಗಿದೆ. ಮತ್ತೆ ಅವರಿಗೆ ಜೈಲುವಾಸ ಮುಂದುವರಿದಿದೆ. ಈಗಾಗಲೇ ಐದು ತಿಂಗಳಿನಿಂದ ದರ್ಶನ್ ಜೈಲಿನಲ್ಲಿ ದಿನಗಳನ್ನು ಕಳೆದಿದ್ದಾರೆ. ನಿನ್ನೆ ಇನ್ನೇನು ಜಾಮೀನು ಸಿಕ್ಕೇ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲೇ ದರ್ಶನ್ ಇದ್ದರು. ಆದರೆ, ಕೋರ್ಟ್ ಜಾಮೀನು ನಿರಾಕರಿಸಿದೆ. ಪವಿತ್ರಾ ಗೌಡ ಅವರಿಗೂ ಜಾಮೀನು ಸಿಗಲಿಲ್ಲ. ಇದು ದರ್ಶನ್ ಅಭಿಮಾನಿಗಳ ಬೇಸರವನ್ನು ಮತ್ತಷ್ಟು ಹೆಚ್ಚಿಸಿದೆ.
ನಾಡ ಹಬ್ಬ ದಸರಾದೊಳಗೆ ನಟ ದರ್ಶನ್‌ಗೆ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಹಿರಿಯ ವಕೀಲರಾದ ಸಿ ವಿ ನಾಗೇಶ್ ಅವರು ಪ್ರಬಲವಾಗಿ ವಾದ ಮಂಡಿಸಿದರೂ ದರ್ಶನ್‌ಗೆ ಜಾಮೀನು ಭಾಗ್ಯ ಸಿಗಲಿಲ್ಲ. ದರ್ಶನ್ ವಿರುದ್ಧ ಪೊಲೀಸರಿಗೆ ಪ್ರಬಲ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ. ತಾಂತ್ರಿಕ ಸಾಕ್ಷಿಗಳನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿರುವ ಕಾರಣ ಜಾಮೀನು ನೀಡಲು ನಿರಾಕರಿಸಿದೆ ಎನ್ನಲಾಗಿದೆ.
ನಿನ್ನೆ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್, ರೇಣುಕಾಸ್ವಾಮಿ ಕೊಲೆ ಆರೋಪಿಗಾಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ಬಳ್ಳಾರಿ ಜೈಲೇ ಗತಿಯಾಗಿದೆ. ಮತ್ತೊಂದೆಡೆ ಪವಿತ್ರಾ ಗೌಡ ಅವರಿಗೂ ಜೈಲುವಾಸ ಮುಂದುವರಿದಿದೆ.












Click it and Unblock the Notifications