'ಈ 8-10 ವರ್ಷದಲ್ಲಿ ರಚಿತಾ ರಾಮ್‌ಗಿಂತ ಬ್ಯೂಟಿಯನ್ನು ನಾನು ನೋಡಿಲ್ಲ'
ಬೆಂಗಳೂರು, ಆಗಸ್ಟ್ 20: ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ 'ಸಂಜು ವೆಡ್ಸ್ ಗೀತಾ 2' ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದೆ. ನಾಗಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸದ್ಯ ಮುಕ್ತಾಯವಾಗಿದ್ದು, ಮುಂದಿನ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ಚಿತ್ರೀಕರಣ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 'ಸಂಜು ವೆಡ್ಸ್ ಗೀತಾ 2' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ, ದೇಶ-ವಿದೇಶದ ಚಿತ್ರೀಕರಣದ ಅನುಭವ ಹಾಗೂ ಚಿತ್ರ ತೆರೆ ಕಾಣಲು ನಡೆಸುತ್ತಿರುವ ಸಿದ್ಧತೆ ಬಗ್ಗೆ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಸಾಧು ಕೋಕಿಲ ಕೂಡ ಭಾಗಿಯಾಗಿ ಮಾತನಾಡಿದ್ದು, 'ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ನಿರ್ದೇಶಕ ನಾಗಶೇಖರ್ ಅವರ ಪರಿಶ್ರಮ ಇದೆ. ನಿರ್ಮಾಪಕ ಸಾಥ್ ಇದೆ. ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಲಾಗಿದೆ. ಬೇರೆ ದೇಶಕ್ಕೆ ಹೋಗಿ ಶೂಟಿಂಗ್ ಮಾಡುವುದು ಅಂದರೆ ಲಕ್ಷಾಂತರ ರೂಪಾಯಿ ಬೇಕು, ಇಷ್ಟು ದಿನ ಚಿತ್ರೀಕರಣ ಮಾಡಲು ಕೋಟ್ಯಂತರ ರೂಪಾಯಿ ಬೇಕು. ಜೊತೆಗೆ ಅವರ ಹಾರ್ಡ್ ವರ್ಕ್ ಸೇರಿ ಚಿತ್ರ ಚೆನ್ನಾಗಿದೆ' ಎಂದರು.

'ಸಂಜು ವೆಡ್ಸ್ ಗೀತಾ-1 ರಲ್ಲಿ ರಮ್ಯಾ ಅವರನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಿ. ಹೀಗಾಗಿ ಸಂಜು ವೆಡ್ಸ್ ಗೀತಾ 2ದಲ್ಲಿ ರಚಿತಾ ರಾಮ್ ಅವರನ್ನು ಹೇಗೆ ತೋರಿಸಿದ್ದೀರಿ ಅಂತಾ ಎಲ್ಲರೂ ಕೇಳುತ್ತಲೇ ಇರುತ್ತಾರೆ. ರಮ್ಯಾ ಅವರು ಚೆನ್ನಾಗಿದ್ದರು ಹೀಗಾಗಿ ಚೆನ್ನಾಗಿ ತೋರಿಸಲಾಗಿತ್ತು. ಇತ್ತೀಚಿನ ಹತ್ತು ಅಥವಾ ಎಂಟು ವರ್ಷಳಲ್ಲಿ ರಚಿತಾ ರಾಮ್ ಅವರಂತಹ ಬ್ಯೂಟಿ ಹೀರೋಯಿನ್‌ಅನ್ನು ನಾನಂತೂ ನೋಡಿಲ್ಲ. ನೀವು ಯಾರಾದರೂ ನೋಡಿದ್ದೀರಾ' ಎಂದು ಸಾಧು ಕೋಕಿಲ ಪ್ರಶ್ನಿಸಿದರು.

'ಬೇರೆಯವರು ಯಾರಿದ್ದರೂ ಕೂಡ ಹೇಳಿ. ನಾನಂತೂ ನೋಡಿಲ್ಲ ಎಂದು ಮಾತು ಮುಂದುವರಿಸಿದ ಅವರು, ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ರಚಿತಾ ರಾಮ್ ಅವರನ್ನು ಇನ್ನೂ ಚೆನ್ನಾಗಿ ತೋರಿಸಿದ್ದಾರೆ. ಒಂದು ಒಳ್ಳೆ ಬ್ಯೂಟಿ ಹೀರೋಯಿನ್ ಇದ್ದಾಗ, ಅದೇ ರೀತಿ ದೃಶ್ಯಗಳು ಬರುತ್ತದೆ. ಹೀರೋಗಳಿಗೂ ಒಳ್ಳೆ ಸಾಂಗ್ ಬರುತ್ತದೆ. ಒಳ್ಳೆ ಡ್ಯೂಯೆಟ್ ಬರುತ್ತದೆ. ಒಳ್ಳೆ ಸಿನಿಮಾ ಕೂಡ ಆಗುತ್ತದೆ' ಎಂದು ಹೇಳಿದರು.

'ಸಂಜು ವೆಡ್ಸ್ ಗೀತಾ 2 ಬೇರೆ ರೀತಿಯೇ ಆಗಿರುವಂತಹ ಸಿನಿಮಾ. ನನ್ನ ಪ್ರಕಾರ ಮೊದಲ ಪಾರ್ಟ್‌ಗೂ ಇದಕ್ಕೂ ಲಿಂಕ್ ಇರಬಹುದು. ಆದರೆ ಕಥೆ ಅಂತಾ ತೆಗೆದುಕೊಂಡಾಗ ಇದು ತುಂಬಾ ವಿಶಾಲವಾಗಿದೆ. ಹೀಗಾಗಿ ಈ ಸಿನಿಮಾ ಬೇರೆ ರೀತಿಯ ಜಾನರ್‌ನಲ್ಲೇ ಬರುತ್ತಿದೆ. ಸದ್ಯ ಚಿತ್ರೀಕರಣ ಮುಗಿದಿದೆ. ಮುಂದಿನ ದಿನಗಳಲ್ಲಿ ಇಡೀ ತಂಡದ ಪರಿಶ್ರಮದಿಂದ ಸಿನಿಮಾ ಅದ್ಭುತವಾಗಿ ಮೂಡಿ ಬರಲಿದೆ' ಎಂದು ಹೇಳಿದರು.












Click it and Unblock the Notifications