‘ಡಿ-ಬಾಸ್’ ದರ್ಶನ್ ಎಚ್ಚರಿಕೆಗೆ ನಿರ್ಮಾಪಕ ಉಮಾಪತಿ ಉತ್ತರ ಹೇಗಿತ್ತು?
ದಾಸ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಎಲ್ಲವೂ ಚೆನ್ನಾಗಿಲ್ಲ ಅನ್ನೋದು ಈಗ ಮತ್ತೊಮ್ಮೆ ಪ್ರೂವ್ ಆಗಿದೆ. ನಟ ದರ್ಶನ್ ಅವರು ಇಂದು 'ಕಾಟೇರ' ಸಿನಿಮಾದ 50ನೇ ದಿನದ ಸಂಭ್ರಮದಲ್ಲಿ ಮಾತನಾಡುತ್ತಾ, ನಿರ್ಮಾಪಕ ಉಮಾಪತಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೀಗೆ ತಮ್ಮ ಬಗ್ಗೆ ಮಾತನಾಡಿದ್ದ ನಟ ದರ್ಶನ್ ಅವರ ಹೇಳಿಕೆಯ ಕುರಿತು, ಇದೀಗ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಏನಂದ್ರು 'ರಾಬರ್ಟ್' ನಿರ್ಮಾಪಕ?
ದರ್ಶನ್ ಅವರ ಸಿನಿಮಾ ಕಾಟೇರ ಬರೋಬ್ಬರಿ 50 ದಿನ ಯಶಸ್ವಿಯಾಗಿ ಪೂರೈಸಿದೆ. 'ಕಾಟೇರ' ಸಿನಿಮಾ 50 ದಿನ ಪೂರೈಸಿದ ಕಾರಣ ಇಂದು ಬೆಂಗಳೂರಲ್ಲಿ ಭರ್ಜರಿ ಕಾರ್ಯಕ್ರಮ ನಡೆಯಿತು ಬೆಂಗಳೂರಿನ ಪ್ರಸನ್ನ ಸಿನಿಮಾ ಮಂದಿರದಲ್ಲಿ ಕಾಟೇರ ಸಿನಿಮಾದ 50ನೇ ದಿನ ಸಂಭ್ರಮಾಚರಣೆ ನಡೆಯಿತು. ಸಂಭ್ರಮ ನಡೆಯುವ ವೇಳೆ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ನಿರ್ಮಾಪಕ ಉಮಾಪತಿ ವಿರುದ್ಧ ನಟ ದರ್ಶನ್ ಗರಂ ಆಗಿ, 'ಅಯ್ಯೋ ತಗಡೇ..' ಅಂತಾ ಹೇಳಿ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಈ ಬಗ್ಗೆ ಇದೀಗ ನಿರ್ಮಾಪಕ ಉಮಾಪತಿ ನೀಡಿರುವ ಉತ್ತರ ಏನು ಗೊತ್ತೆ?

ನಾನು ಅವರಷ್ಟು ದೊಡ್ಡವರಲ್ಲ..!
ನಿರ್ಮಾಪಕ ಉಮಾಪತಿ ಈಗ ನಟ ದರ್ಶನ್ ಅವರ ಹೇಳಿಕೆ ಬಗ್ಗೆ ಕನ್ನಡದ ಖಾಸಗಿ ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ನಟ ದರ್ಶನ್ ಅವರ ಹೇಳಿಕೆ ಬಗ್ಗೆ ಕೂಡ ಮಾತನಾಡಿದ್ದಾರೆ. ಹಾಗೇ ನಟ ದರ್ಶನ್ ಅವರು ಹೇಳಿದ ಮಾತಿನ ಬಗ್ಗೆ ಪ್ರತಿಕ್ರಿಯೆಯನ್ನ ನೀಡುತ್ತಾ, ನಾನು ಅವರಷ್ಟು ದೊಡ್ಡ ನಟನಲ್ಲ. ಅವರಿಗೆ ನಾವು ಉತ್ತರ ಕೊಡುವಷ್ಟು, ದೊಡ್ಡವರು ಕೂಡ ಅಲ್ಲ. ನಿಜ ಏನು ಅನ್ನೋದು ನನಗೆ ಗೊತ್ತು ಎಂದಿದ್ದಾರೆ. ಹೀಗಾಗಿ, ಇದೀಗ ನಟ ದರ್ಶನ್ ಅವರು ಹಾಗೂ ನಿರ್ಮಾಪಕ ಉಮಾಪತಿ ನಡುವೆ ತಿಕ್ಕಾಟ ಮತ್ತಷ್ಟು ಜೋರಾದಂತೆ ಕಾಣುತ್ತಿದೆ. ಹಾಗಾದ್ರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಉಮಾಪತಿ ಬಗ್ಗೆ ಹೇಳಿದ್ದೇನು? ಮುಂದೆ ಓದಿ.
'ಅಯ್ಯೋ ತಗಡೇ, ರಾಬರ್ಟ್ ಕಥೆ..'
ನಿರ್ಮಾಪಕ ಉಮಾಪತಿ ವಿರುದ್ಧ ಫುಲ್ ಗರಂ ಆಗಿದ್ದ ನಟ ದರ್ಶನ್ ಅವರು ಇಂದು ನೇರವಾಗಿ ವಾಗ್ದಾಳಿ ನಡೆಸಿದ್ರು. ಹೇಗೆ ಅಂದ್ರೆ 'ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದ್ರೆ ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?' ಅಂತಾ ದರ್ಶನ್ ಗುಡುಗಿದ್ದರು. ಹೀಗೆ ಕಾಟೇರ ಕಥೆ ಬಿಟ್ಟುಕೊಟ್ಟಿದ್ದು ಯಾಕೆ? ಅಂತಾ ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ದಾರೆ ನಟ ದರ್ಶನ್. ಹಾಗೇ ಮತ್ತಷ್ಟು ವಾಗ್ದಾಳಿ ಕೂಡ ನಡೆಸಿದ್ದರು ನಟ ದರ್ಶನ್.

'ಕಾಟೇರ್ ಟೈಟಲ್ ಕೊಟ್ಟಿದ್ದೇ ನಾನು'
ತಮ್ಮ ಮಾತನ್ನು ಮುಂದುವರಿಸಿದ ನಟ ದರ್ಶನ್ 'ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಒಂದ್ಸಲ ಆಗಿರೋ ಘಟನೆಯಿಂದ ಬುದ್ದಿ ಕಲಿತಿಲ್ಲ. ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು? ನಿನ್ನ ಜಡ್ಜ್‌ಮೆಂಟ್ ಚೆನ್ನಾಗಿದೆ, ಬಟ್ ಯಾಕೆ ಈ ಕಥೆ ಬಿಟ್ಟಿದ್ದು? ಕಾಟೇರ ಟೈಟಲ್ ಕೊಟ್ಟಿದ್ದೇ ನಾನು' ಅಂತಾ ಇದೀಗ ನಟ ದರ್ಶನ್ ನೇರವಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗೆ ನಟ ದರ್ಶನ್ & ನಿರ್ಮಾಪಕ ಉಮಾಪತಿ ಅವರ ನಡುವೆ ದೊಡ್ಡ ಕದನ ಮತ್ತೊಮ್ಮೆ ಶುರುವಾದಂತೆ ಕಾಣುತ್ತಿದೆ. ಈ ಬಗ್ಗೆ ಇದೀಗ ನಿರ್ಮಾಪಕ ಉಮಾಪತಿ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ತಿಕ್ಕಾಟ ಬಲು ಜೋರಾಗಿದೆ. ಅದರಲ್ಲೂ ಈಗ ನಟ ದರ್ಶನ್ ಅವರು ಹಾಗೂ ನಿರ್ಮಾಪಕರಾದ ಉಮಾಪತಿ ನಡುವೆ ಮತ್ತೊಂದು ರೌಂಡ್ ಮಾತಿನ ಫೈಟ್ ಶುರುವಾದಂತೆ ಕಾಣುತ್ತಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತದೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications