ʼಛತ್ರಪತಿ ಶಿವಾಜಿʼಯಾಗಿ ಘರ್ಜಿಸಲಿದ್ದಾರೆ ರಿಷಬ್ ಶೆಟ್ಟಿ, ಫಸ್ಟ್ ಲುಕ್ ವೈರಲ್
ಕನ್ನಡ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇದೀಗ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ನಟ. ಕನ್ನಡದಿಂದ ಈ ನಟ ಇದೀಗ ತೆಲುಗು ಸೇರಿದಂತೆ ದಕ್ಷಿಣ ಭಾರತದಾದ್ಯಂತ ಬಹುಬೇಡಿಕೆಯ ನಟರಾಗಿದ್ದಾರೆ. ಕಾಂತಾರ ಸಿನಿಮಾದ ನಂತರ ಇವರ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ತೆಲುಗು ಭಾಷೆಯಲ್ಲಿ ರಿಷಬ್ ಅವರ ಹನುಮಾನ್ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾ ಈಗಾಗಲೇ ಭಾರೀ ಸದ್ದು ಮಾಡ್ತಿದೆ. ಇದರ ಹಿಂದೆಯೇ ಅವರ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾ ಹಲವು ಕಾರಣಗಳಿಗೆ ಅಚ್ಚರಿ ಮೂಡಿಸಿದೆ.
ರಿಷಬ್ ಶೆಟ್ಟಿ ಅವರ ಸಿನಿಮಾ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಕರ್ನಾಟಕದಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಈ ಸಿನಿಮಾ ಸೃಷ್ಟಿ ಮಾಡಿತ್ತು. ಇದೀಗ ರಿಷಬ್ ಶೆಟ್ಟಿ ಅವರ ನೂತನ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಘೋಷಣೆಯಾಗಿದ್ದು, ಪೋಸ್ಟರ್ ಸಹ ಬಿಡುಗಡೆಯಾಗಿದೆ.

ಇನ್ನು ಈ ಸಿನಿಮಾವನ್ನು ನಿರ್ದೇಶಕ ಸಂದೀಪ್ ಸಿಂಗ್ ಅವರು ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊಟ್ಟ ಮೊದಲ ಸಿನಿಮಾ ಆಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾವು ಆರು ಭಾಷೆಗಳಲ್ಲಿ ತೆರೆ ಕಾಣಲಿದೆ. ಹಿಂದಿ, ಮರಾಠಿ, ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ಆರು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. 2027ರ ಜನವರಿಯ 21ಕ್ಕೆ ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು
ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಅವರು ಟ್ವಿಟ್ಟರ್‌ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಗೌರವಕ್ಕೆ ಪಾತ್ರರಾಗಿರುವ ಹಾಗೂ ಭಾರತದ ಮಹಾನ್ ಯೋಧ ಛತ್ರಪತಿ ಶಿವಾಜಿ ಮಹಾರಾಜ್ ಅವರ ಬಗ್ಗೆ ಸಿನಿಮಾ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ರಾಜರ ಮಹಾಕಾವ್ಯವನ್ನು ಪ್ರಸ್ತುತಪಡಿಸುವುದು - ಭಾರತದ ಹೆಮ್ಮೆ ಎಂದಿದ್ದಾರೆ.
ಇದು ಕೇವಲ ಸಿನಿಮಾವಲ್ಲ - ಎಲ್ಲಾ ಕಠಿಣ ಸಂದರ್ಭದಲ್ಲಿ ಹೋರಾಡಿದ, ಮೊಘಲ್ ಸಾಮ್ರಾಜ್ಯದ ಶಕ್ತಿಗೆ ಸವಾಲು ಹಾಕಿದ ಹಾಗೂ ಎಂದಿಗೂ ಮರೆಯಲಾಗದ ಪರಂಪರೆಯನ್ನು ಹಾಕಿಕೊಟ್ಟ ಯೋಧರನ್ನು ಗೌರವಿಸುವುದಾಗಿದೆ ಎಂದಿದ್ದಾರೆ. ಅಲ್ಲದೇ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಇಲ್ಲಿಯವರೆಗೆ ಹೇಳಲಾಗದ ಕಥೆ ಇದಾಗಿದೆ ಎಂದು ಹೇಳಿದ್ದಾರೆ.

ಉತ್ತರ ಭಾರತಕ್ಕೆ ರಿಷಬ್: ಇಲ್ಲಿಯ ವರೆಗೂ ದಕ್ಷಿಣ ಭಾರತದಲ್ಲಿ ಮಿಂಚಿದ್ದ ರಿಷಬ್ ಅವರು ಇದೀಗ ಉತ್ತರ ಭಾರತೀಯ ಸಿನಿಮಾ ರಂಗದಲ್ಲೂ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಕಾಂತಾರ ಫ್ಯಾನ್ ಇಂಡಿಯಾ ಸಿನಿಮಾದ ಮೂಲಕ ರಿಷಬ್ ಅವರು ಭಾರತದ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದ್ದಾರೆ. ಇದೀಗ ಮರಾಠಿ ಹಾಗೂ ಹಿಂದಿ ಸಿನಿಮಾರಂಗದಲ್ಲೂ ಮಿಂಚಲು ರಿಷಬ್ ಸಜ್ಜಾಗುತ್ತಿದ್ದಾರೆ. ಕನ್ನಡದ ನಟನೊಬ್ಬ ದೇಶದಾದ್ಯಂತ ಮನ್ನಣೆ ಗಳಿಸುತ್ತಿರುವುದು ಕನ್ನಡಿಗರಲ್ಲಿ ಸಂತೋಷವನ್ನುಂಟು ಮಾಡಿದೆ.
ಸಿನಿಮಾ ನಿರ್ದೇಶಕ ಸಂದೀಪ್ ಸಿಂಗ್ ಮಾತು: ಇನ್ನು ಈ ಸಿನಿಮಾದ ಬಗ್ಗೆ ಸಂದೀಪ್ ಸಿಂಗ್ ಅವರು ನೀವು ನಿಮ್ಮ ಕಥೆಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ನಿಮ್ಮ ಕಥೆಯೇ ನಿಮ್ಮನ್ನು ಆಯ್ಕೆ ಮಾಡುತ್ತದೆ. ಮಹಾರಾಜರ ಭವ್ಯ ದಂತಕಥೆಯು ನನ್ನನ್ನು ಮತ್ತು ನನ್ನ ಇಡೀ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ನಮ್ಮ ರಾಜ ಭವ್ಯ ಪರಂಪರೆಯನ್ನು ಜಗತ್ತಿಗೆ ತಿಳಿಸಲು ಮುಂದಾಗಿದ್ದೇವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications