Pavithra Gowda: ಅಮಾವಾಸ್ಯೆ ದಿನವೇ ಪವಿತ್ರಾ ಗೌಡ ಏನ್‌ ಮಾಡಿದ್ರು ಗೊತ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ತೂಗುದೀಪ ಅವರೊಂದಿಗೆ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಹೊರರಾಜ್ಯಗಳಿಗೆ ಭೇಟಿ ನೀಡಲು ಪವಿತ್ರಾಗೌಡ ಅವರು ಕೋರ್ಟ್‌ನಿಂದ ಅನುಮತಿ ಕೋರಿದ್ದರು. ಇದಕ್ಕೆ ಕೋರ್ಟ್‌ ಕೂಡ ಒಪ್ಪಿಗೆ ನೀಡಿತ್ತು. ಇನ್ನು ಇತ್ತೀಚೆಗೆ ಅಮಾವಾಸ್ಯೆ ದಿನವೇ ಪವಿತ್ರಾಗೌಡ ಅವರು ಮಹತ್ವದ ಕೆಲಸ ಮಾಡಿರುವುದಾಗಿ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಅವರಿಗೆ ಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು. ಈ ವೇಳೆ ತನಗೆ ಹೊರ ರಾಜ್ಯಗಳಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಕೋರ್ಟ್‌ ಕೂಡ ಒಪ್ಪಿತ್ತು. ಈ ಹಿನ್ನೆಲೆ ಪವಿತ್ರಾ ಗೌಡ ಅವರು ಟೆಂಪಲ್‌ ರನ್‌ ಶುರು ಮಾಡಿದ್ದರು. ಇತ್ತೀಚೆಗೆ ಅವರು ಶಿರಡಿಗೆ ತೆರಳಿ ಸಾಯಿಬಾಬಾ ದರ್ಶನ ಪಡೆದು ಬಂದಿದ್ದರು. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಆಕ್ಟಿವ್‌ ಆಗಿರುವ ಅವರು ಇತ್ತೀಚೆಗೆ ಅಮಾವಾಸ್ಯೆ ದಿನ ಪುಣ್ಯದ ಕೆಲಸ ಮಾಡಿದ್ದಾಗಿ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

Renukaswamy Murder Case Accused Pavithra Gowda Visits Maha Kumbh Mela

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳಕ್ಕೆ ನಟಿ ಪವಿತ್ರಾ ಗೌಡ ಕೂಡ ಭೇಟಿ ನೀಡಿದ್ದಾರೆ. ಅದೂ ಇತ್ತೀಚಿನ ಮೌನಿ ಅಮಾವಾಸ್ಯೆಯಂದು. ಈ ಪವಿತ್ರ ದಿನದಂದು ಪವಿತ್ರಾಗೌಡ ಅವರು ಪ್ರಯಾಗ್‌ರಾಜ್‌ಗೆ ತೆರಳಿ ಅಲ್ಲಿನ ಸಂಗಮದಲ್ಲಿ ಮಿಂದೆದ್ದು, ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂಬಂಧ ವಿಡಿಯೋ ಹಂಚಿಕೊಂಡಿರುವ ಪವಿತ್ರಾ ಗೌಡ ಅವರು, "ಕುಂಭ ಮೇಳ 2025 ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯಳು. ನಾನು ಎಲ್ಲ ನೆಗೆಟಿವ್‌ ಎನರ್ಜಿಯಿಂದ ಮುಕ್ತಳಾಗಿದ್ದೇನೆ ಎಂದು ನಂಬಿದ್ದೇನೆ. ಹರ ಹರ ಮಹಾದೇವ" ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಪವಿತ್ರಾಗೌಡ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದೋಣಿ ವಿಹಾರ ಮಾಡಿ, ಜಾಲಿಯಾಗಿ ಸುತ್ತಾಡಿದ್ದಾರೆ. ಬಳಿಕ ಅಲ್ಲಿನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಇನ್ನು ಪವಿತ್ರಾಗೌಡ ಅವರ ವಿಡಿಯೋಗೆ ಕೆಲವರು ಕಾಮೆಂಟ್‌ ಮಾಡುವ ಮೂಲಕ ಅವರ ವೈಯಕ್ತಿಕ ವಿಚಾರಗಳನ್ನು ಕೆಣಕಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಮಾಡುತ್ತಿರುವ ಕಾಮೆಂಟ್‌ಗಳು ಕೂಡ ಒಂದೊಂದಾಗಿ ಹೈಡ್‌ ಆಗುತ್ತಿವೆ. "ಗಂಗಾ ನದಿ ಮಲಿನ ಆಯ್ತು, ದೇವರೆ ನಾವು ಬಂದು ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮುಂಚೆ ನದಿ ಶುದ್ಧಿಕರಣವಾಗಲಿ" ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಪವಿತ್ರಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದು, ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ "ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು, ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು" ಎನ್ನುವ ಭಗವದ್ಗೀತೆಯ ಸಂದೇಶದ ಫೋಟೋ ಪವಿತ್ರಾ ಗೌಡ ಶೇರ್‌ ಮಾಡಿಕೊಂಡಿದ್ದರು.

Renukaswamy Murder Case Accused Pavithra Gowda Visits Maha Kumbh Mela

ಜೈಲಿನಿಂದ ಹೊರ ಬಂದ ನಂತರ ಪವಿತ್ರಾ ಗೌಡ ಅವರು ಸಾಲು ಸಾಲಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಮೊದಲಿಗೆ ಬೆಂಗಳೂರಿನ ಹಲವು ದೇವಸ್ಥಾನಗಳಲ್ಲಿ ಪವಿತ್ರಾ ಗೌಡ ಟೆಂಪಲ್ ರನ್ ಮಾಡಿದ್ದರು. ಹೊರ ರಾಜ್ಯಕ್ಕೆ ಭೇಟಿ ನೀಡಲು ಅನುಮತಿ ಪಡೆದುಕೊಂಡು ಮನೆ ದೇವರಿಗೆ ಪೂಜೆ ಸಲ್ಲಿಸಿದ ನಂತರ ಅವರು ಶಿರಡಿಗೂ ತೆರಳಿ, ಸಾಯಿ ಬಾಬಾ ದರ್ಶನ ಪಡೆದು ಬಂದಿದ್ದರು. ಇದೀಗ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೂ ತೆರಳಿದ್ದಾರೆ. ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪುನೀತಳಾದೆ ಎಂದು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+