ಮಸ್ತು ಮಸ್ತು ಹುಡುಗಿ ಮೇಲೆ ಹಲ್ಲೆ ಮಾಡಿದ್ದೇಕೆ ಜನ? ಆಕೆ ಮಾಡಿದ್ದೇನು?

ಬೆಂಗಳೂರು, ಜೂನ್ 2: ಕನ್ನಡದ ಮಸ್ತು ಮಸ್ತು ಹುಡುಗಿ, ಕೆಜಿಎಫ್​ 2 ಸಿನಿಮಾದ ಪವರ್​ಫುಲ್ ಮಹಿಳೆ ರಮಿಕಾ ಪಾತ್ರಗಳಿಂದ ಕನ್ನಡಿಗರ ಮನಗೆದ್ದಿರುವ ಬಾಲಿವುಡ್ ನಟಿ ರವೀನಾ ಟಂಡನ್ ಸದ್ಯ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದೆ.

ಶನಿವಾರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ರವೀನಾ ಟಂಡನ್​ರ ಕಾರು ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೈರಲ್ ವಿಡಿಯೋದಲ್ಲಿ ನನ್ನನ್ನು ತಳ್ಳಬೇಡಿ, ಹಲ್ಲೆ ಮಾಡಬೇಡಿ ಎಂದು ನಟಿ ಮನವಿ ಮಾಡುತ್ತಿದ್ದಾರೆ.

Raveena Tandon attacked in Mumbai over rash driving assaulting women

ನಟಿ ರವೀನಾ ಟಂಡನ್ ಮೇಲೆ ಹಲ್ಲೆ?

ಬಾಲಿವುಡ್ ನಟಿ ರವೀನಾ ಟಂಡನ್ ಅವರ ಚಾಲಕ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ರವೀನಾ ಅವರನ್ನು ಘಟನಾ ಸ್ಥಳದಲ್ಲಿ ನೆರೆದವರು ಸುತ್ತುವರೆದಿದ್ದಾರೆ. ನಟಿ ವಾಹನದಿಂದ ಹೊರಬಂದು ಮೂವರು ಮಹಿಳೆಯರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಗಾಯಗೊಂಡ ವ್ಯಕ್ತಿಗಳ ಕುಟುಂಬ ಆರೋಪಿಸಿದೆ.

ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ನಡೆದ ಘಟನೆಯ ವಿಡಿಯೋ ತುಣುಕುಗಳು ವೈರಲ್ ಆಗಿವೆ. "ನೀವು ಈ ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ನನ್ನ ಮೂಗಿನಿಂದ ರಕ್ತ ಸುರಿಯುತ್ತಿದೆ" ಎಂದು ಹಲ್ಲೆಗೊಳಗಾದ ಸಂತ್ರಸ್ತೆ ಹೇಳಿಕೊಳ್ಳುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. ಇನ್ನು, ಈ ವೇಳೆ ಜನಸಮೂಹ ಕೂಡ ನಟಿ ರವೀನಾ ಟಂಡನ್ ಅವರನ್ನು ಸುತ್ತುವರಿದಿದ್ದು, ನೂಕಾಟ ತಳ್ಳಾಟ ನಡೆಸಿದ್ದಾರೆ.

ನಟಿಯನ್ನು ಸುತ್ತುವರೆದ ಗುಂಪೊಂದು ಅವರ ಫೋಟೋ, ವಿಡಿಯೋಗಳನ್ನು ತೆಗೆಯಲು ಪ್ರಯತ್ನಿಸುತ್ತಿರುವಾಗ, ಬಾಲಿವುಡ್ ನಟಿ ವೀಡಿಯೋವನ್ನು ರೆಕಾರ್ಡ್ ಮಾಡದಂತೆ ವಿನಂತಿಸಿದ್ದಾರೆ. "ತಳ್ಳಬೇಡಿ. ದಯವಿಟ್ಟು ನನ್ನನ್ನು ಹೊಡೆಯಬೇಡಿ" ಎಂದು ಮನವಿ ಮಾಡಿದ್ದಾರೆ.

ಬಾಂದ್ರಾ ನಿವಾಸಿ ಮೊಹಮ್ಮದ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ಇಡೀ ಘಟನೆಯನ್ನು ವಿವರಿಸುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ತನ್ನ ತಾಯಿ, ಸಹೋದರಿ ಮತ್ತು ಸೊಸೆ ರಿಜ್ವಿ ಕಾಲೇಜು ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ರವೀನಾ ಅವರ ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.

" ಚಾಲಕನು ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ, ರವೀನಾ ಕೂಡ ಅಮಲೇರಿದ ಸ್ಥಿತಿಯಲ್ಲಿ ಹೊರಬಂದು ನನ್ನ ತಾಯಿಗೆ ಹೊಡೆದಿದ್ದಾರೆ. ಇದರಿಂದ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ" ಎಂದು ಆರೋಪಿಸಿದ್ದಾರೆ. ಜೊತೆಗೆ ಪೊಲೀಸರು ತನ್ನ ದೂರು ದಾಖಲಿಸದ ಬಗ್ಗೆಯೂ ಹೇಳಿದ್ದಾರೆ.

ಸಂತ್ರಸ್ತರೊಂದಿಗೆ ನಾಲ್ಕು ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದರೂ ಕೂಡ ಅವರ ದೂರು ದಾಖಲಾಗಿಲ್ಲ. ಪೊಲೀಸ್ ಠಾಣೆಯ ಹೊರಗೆ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ನಮಗೆ ಒತ್ತಾಯಿಸಿದರು. ಆದರೆ ನಾವೇಕೆ ರಾಜಿ ಮಾಡಿಕೊಳ್ಳಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ. ನಾನು ನ್ಯಾಯಕ್ಕಾಗಿ ಒತ್ತಾಯಿಸುತ್ತೇನೆ" ಎಂದು ಗಂಭೀಎ ಆರೋಪ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+