Rashmika Mandanna Mysaa: ನಟಿ ರಶ್ಮಿಕಾ ಬಿಗ್ ಬಜೆಟ್ ಸಿನಿಮಾ ಘೋಷಣೆ: ಪೋಸ್ಟರ್ ನೋಡಿ ಹೆಚ್ಚಾಯ್ತು ಕುತೂಹಲ
Actress Rashmika Mandanna Mysaa: ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಎರಡು ಮೂರು ಚಿತ್ರರಂಗದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಅವರ ನಟನೆಯ ಹೊಸ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ದ್ವಿಭಾಷೆಯಲ್ಲಿ ಬಿಡುಗಡೆಯಾದ 'ಕುಬೇರ' ಸಿನಿಮಾ ರಿಲೀಸ್ ಬೆನ್ನಲ್ಲೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ನಟಿ ರಶ್ಮಿಕಾ ತಮ್ಮ ಮುಂದಿನ ಹೊಸ ಸಿನಿಮಾದ ಕುತೂಹಲಕಾರಿ ಪೋಸ್ಟರ್ ಹಂಚಿಕೊಂಡಿದ್ದಾರೆ. ನೋಡಿದವರಿಗೆ ವಾರಿಯರ್ ಸಿನಿಮಾ, ಯೋಧ ರಾಜಕುಮಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಅನ್ನಿಸದೇ ಇರದು.
ಹೌದು, ಗುರುವಾರ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುಂದಿನ ಹೊಸ ಸಿನಿಮಾ ಬಗ್ಗೆ ಪೋಸ್ಟರ್ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮುಂದಿನ ಹೊಸ ಸಿನಿಮಾ 'ಹೆಸರು (ಶಿರ್ಷಿಕೆ)' ಯಾವುದೇ ಎಂಬುದನ್ನು ನಾಳೆ ಬಹಿರಂಗಗೊಳ್ಳಲಿದೆ ಎಂದು ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಪೋಸ್ಟರ್ ಸಖತ್ ಕೌತುಕ ಸೃಷ್ಟಿಸಿತ್ತಿದೆ ಅಲ್ಲದೇ, ನಿಗೂಢ ಅಂತಲೂ ಅನ್ನಿಸುತ್ತದೆ. ಬಗೆ ಬಗೆಯ ಹಾರ್ಟ್ ಸಿಂಬಾಲ್, ಸ್ಮೈಲ್, ಎಕ್ಸ್‌ಪ್ರೆಷನ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನ್ಯಾಷನಲ್ ಕ್ರಶ್ ಅಭಿಮಾನಿಗಳು ಹೊಸ ಸಿನಿಮಾ ಹೆಸರು ಯಾವುದು? ಎಂದು ಪೋಸ್ಟರ್ ನೋಡಿದಾಗಿನಿಂದ ತಲೆ ಕೆಡಿಸಿಕೊಂಡಿದ್ದಾರೆ.

ಇಂಟ್ರಸ್ಟಿಂಗ್ ಪೋಸ್ಟರ್‌ನಲ್ಲಿ ಏನೆಲ್ಲಾ ಇದೆ?
ಕತ್ತಲು, ಮಂಜು ಕವಿದ ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡ ಬೃಹತ್ ಮರದ ಮುಂದೆ ನಟಿ ರಶ್ಮಿಕಾ ನಿಂತಿದ್ದಾರೆ. ಹೊಸ ಅವತಾರದಲ್ಲಿ ರಶ್ಮಿಕಾ ಕಾಣುತ್ತಾರೆ. ಯಾವುದೋ ಗುಂಪು ಅವರನ್ನು ಬೆನ್ನಟ್ಟಿ ಬರುತ್ತಿರುವುದು, ಕೈಯಲ್ಲಿ ಆಯುಧ ಹಿಡಿದು, ಬಿಚ್ಚು ಕೂದಲಿನ ಯೋಧ ರಾಜಕುಮಾರಿಯಂತೆ ಕಾಣಿಸುತ್ತಾರೆ. ಪೋಸ್ಟರ್‌ನಲ್ಲಿ 'Hunted, wounded, unbroken' ('ಬೇಟೆಯಾಡಿದ, ಗಾಯಗೊಂಡ, ಮುರಿಯದ') ಎಂಬ ಸಾಲುಗಳು ಕಾಣಿಸುತ್ತವೆ. ಒಟ್ಟಾರೆ ಈ ಸಿನಿಮಾ ರಶ್ಮಿಕಾ ಸಿನಿ ಜೀವನದಲ್ಲಿ ಹೊಸ ಮೈಲಿಗಲ್ಲಾಗುವ ಹಾಗೂ ಕೋಟಿ ಕೋಟಿ ಗಳಿಕೆ ಮಾಡಲ್ಲ ಸಿನಿಮಾ ಆಗಲಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಬೆಳಗ್ಗೆ 10:08 ಶಿರ್ಷಿಕೆ ಬಿಡುಗಡೆ: ಫ್ಯಾನ್ಸ್ ತಲೆಗೆ ಹುಳ..
ಈ ಬಾರಿ ಮಹಿಳಾ ಪ್ರಧಾನ ಸಿನಿಮಾವನ್ನು ನಟಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಶಿರ್ಷಿಕೆ ಶುಕ್ರವಾರ ಜೂನ್ 27 ರಂದು ಶುಕ್ರವಾರ ಬೆಳಗ್ಗೆ 10:08 ಕ್ಕೆ ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಜೊತೆಗೆ ನಟಿ ರಶ್ಮಿಕಾ ಬದರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ''ಯಾರಾದ್ರು ಸಿನಿಮಾ ಶಿರ್ಷಿಕೆ ಊಹಿಸಿ ಸರಿಯಾಗಿ ಹೇಳಿದ್ರೆ ಮೀಟ್ ಆಗುತ್ತೇನೆ'' ಎಂದು ಫ್ಯಾನ್ಸ್ ತಲೆಗೆ ಹುಳ ಬಿಟ್ಟಿದ್ದಾರೆ.
Can you guess what the title of my next could be? 😉
— Rashmika Mandanna (@iamRashmika) June 26, 2025
I don’t think anyone can actually guess.. but if at all you can guess it then i promise to come meet you.. 🐒😎 pic.twitter.com/7KPl6UyVJN
"ನನ್ನ ಮುಂದಿನ ಸಿನಿಮಾದ ಶೀರ್ಷಿಕೆ ಏನೆಂದು ನೀವು ಊಹಿಸಬಲ್ಲಿರಾ? ಯಾರೂ ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ ... ಒಂದು ವೇಳೆ ನೀವು ಸರಿಯಾದ ಶಿರ್ಷಿಕೆ ಹೇಳಿದರೆ ನಾನು ನಿಮ್ಮ ಭೇಟಿ ಮಾಡಲು ಬರುತ್ತೇನೆ'' ಎಂದು ರಶ್ಮಿಕಾ ಭರವಸೆ ನೀಡಿದ್ದಾರೆ ಪೋಸ್ಟರ್ ಜೊತೆಗೆ ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ರಶ್ಮಿಕಾ 'ಕುಬೇರ' ಸಿನಿಮಾ ಭರ್ಜರಿ ಕಲೆಕ್ಷನ್
ನಟಿ ರಶ್ಮಿಕಾ ಹಾಗೂ ನಟ ಧನುಷ್ ಅಭಿನಯದ ಕುಬೇರ ಸಿನಿಮಾ ಬಿಡುಗಡೆಯಾಗಿದೆ. ಇದಕ್ಕು ಮೊದಲು ನಟ ಸಲ್ಮಾನ್ ಜೊತೆಗೆ ನಟಿಸಿದ್ದ 'ಸಿಕಂದರ್' ಚಿತ್ರವು ಸಿನಿಮಾ ಬಿಡುಗಡೆ ಆಗಿತ್ತು. ಆದರೆ ನಿರೀಕ್ಷಿತ ಗಳಿಕೆ ಮಾಡದೇ ಫ್ಲಾಪ್ ಆಯಿತು. 'ಛಾವಾ' ಬಿಡುಗಡೆಯಾಗಿ ವಿಶ್ವಾದ್ಯಂತ ಒಟ್ಟು 797.34 ಕೋಟಿ ರೂ.ಗಳಿಸಿತು. ಈ ವರ್ಷ ರಶ್ಮಿಕಾಗೆ ಅದು ದಾಖಲೆಯ ಸಿನಿಮಾ ಸಾಲಿಗೆ ಸೇರಿತು.
ಇನ್ನೂ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ನಾಳೆ ಘೋಷಣೆ ಆಗಲಿದೆ. 'ಥಾಮಾ', 'ದಿ ಗರ್ಲ್ ಫ್ರೆಂಡ್' ಮತ್ತು 'ರೈನ್‌ಬೋ' ಸಿನಿಮಾಗಳಲ್ಲೂ ರಶ್ಮಿಕಾ ನಟಿಸಿದ್ದು ಅವು ತೆರೆಗೆ ಬರಲು ಸಜ್ಜಾಗುತ್ತಿವೆ.












Click it and Unblock the Notifications