ರಶ್ಮಿಕಾ ಮಂದಣ್ಣ & ರಕ್ಷಿತ್ ಶೆಟ್ಟಿ ಮದುವೆ ದಿಢೀರ್ ಮುರಿದು ಬಿದ್ದಿದ್ದು ಏಕೆ? Rashmika Mandanna
ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಡಿವೋರ್ಸ್, ಸಂಬಂಧ ಮುರಿದುಕೊಂಡ ಪ್ರಕರಣಗಳು ಸದ್ದು ಮಾಡುತ್ತಲೇ ಬಂದಿವೆ. ದೊಡ್ಡ ದೊಡ್ಡ ಸ್ಟಾರ್ ನಟ & ನಟಿಯರ ಬಾಳಲ್ಲಿ ಬಿರುಗಾಳಿ ಎದ್ದು ಸಂಬಂಧ ಕಡಿದುಕೊಂಡು ಹೊರಗೆ ಬಂದಿದ್ದ ಉದಾಹರಣೆಗಳು ಇವೆ. ಹೀಗೆಲ್ಲಾ ಆಗುವುದು ಕನ್ನಡದ ನಟ & ನಟಿಯರನ್ನು ಅಭಿಮಾನಿಸುವ ಅಭಿಮಾನಿಗಳಿಗೆ ಸಹಜವಾಗಿ ಬೇಸರ ತರಿಸುತ್ತಾ ಬಂದಿದೆ. ಎಲ್ಲವನ್ನೂ ಮೀರಿ ಹಲವು ಜೋಡಿಗಳು ಮದುವೆ ಆಗುವ ಮೊದಲೇ, ದಿಢೀರ್ ಅಂತಾ ದೂರ ಆದ ಘಟನೆಗಳು ಇವೆ. ಅದರಲ್ಲೂ ರಶ್ಮಿಕಾ ಮಂದಣ್ಣ & ರಕ್ಷಿತ್ ಶೆಟ್ಟಿ ಮದುವೆ ದಿಢೀರ್ ಮುರಿದು ಬಿದ್ದಿದ್ದು ದೊಡ್ಡ ಸೌಂಡ್ ಮಾಡಿತ್ತು. ಈಗಲೂ ಈ ವಿಚಾರ ಕಿಡಿ ಹೊತ್ತಿಸುತ್ತಲೇ ಇದೆ.
ರಶ್ಮಿಕಾ ಮಂದಣ್ಣ & ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಬಳಿಕ ಮದುವೆ ಬಂಧನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಇದೇ ಕಾರಣಕ್ಕೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದರು, ಅಲ್ಲದೆ ರಶ್ಮಿಕಾ ಮಂದಣ್ಣ & ರಕ್ಷಿತ್ ಶೆಟ್ಟಿ ಎಂಗೇಜ್‌ಮೆಂಟ್ ಇಡೀ ಇಂಡಿಯಾದಲ್ಲಿ ಸೌಂಡ್ ಮಾಡಿ ಗಮನ ಸೆಳೆದಿತ್ತು. ಆದರೆ ಎಲ್ಲವೂ ಸರಿಯಾಗಿದೆ ಅನ್ನುವಾಗಲೇ ದಿಢೀರ್ ಮದುವೆ ಮುರಿದುಬಿದ್ದು ಇಬ್ಬರೂ ದೂರ ದೂರವಾಗಿ ಹೋಗದರು. ಇದೀಗ ಈ ವಿಚಾರವಾಗಿ ಸ್ಫೋಟಕ ವಿಚಾರ ಒಂದನ್ನ ಸ್ವತಃ ರಕ್ಷಿತ್ ಶೆಟ್ಟಿ ಅವರ ಪ್ರಾಣ ಸ್ನೇಹಿತ ಬಿಚ್ಚಿಟ್ಟಿದ್ದಾರೆ.

ರಶ್ಮಿಕಾ & ರಕ್ಷಿತ್ ಶೆಟ್ಟಿ ಮದುವೆ ನಿಂತಿದ್ದೇಕೆ?
ಹೌದು, ರಶ್ಮಿಕಾ ಮಂದಣ್ಣ & ರಕ್ಷಿತ್ ಶೆಟ್ಟಿ ಅವರ ಮದುವೆ ಮುರಿದು ಬೀಳಲು ಅದು ಕಾರಣ... ಇದು ಕಾರಣ... ಅಂತೆಲ್ಲಾ ಸುಳ್ಳು ಸುಳ್ಳು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡಿ ಇಬ್ಬರ ಮನಸ್ಸಿಗೂ ನೋವು ಮಾಡಿದ್ದವು. ಅಲ್ಲದೆ ಹಲವು ವರ್ಷಗಳೇ ಕಳೆದರು ಆ ವಿಚಾರವನ್ನ ಕೆಲವರು ಬೇಕು ಅಂತಲೇ ಇಂದಿಗೂ ಚರ್ಚೆ ಮಾಡುತ್ತಾರೆ. ಹಾಗೇ ಈ ವಿಚಾರ ಚರ್ಚೆಯಲ್ಲಿ ಇರಲಿ ಅಂತಾ ಬಯಸುವ ವಿಕೃತ ಮನಸ್ಸುಗಳು ಕೂಡ ಇವೆ ಅನ್ನೋದು ಅಭಿಮಾನಿಗಳ ಆರೋಪ ಆಗಿದೆ. ಇಷ್ಟೆಲ್ಲದರ ನಡುವೆ ರಶ್ಮಿಕಾ ಮಂದಣ್ಣ & ರಕ್ಷಿತ್ ಶೆಟ್ಟಿ ಮದುವೆ ದಿಢೀರ್ ಮುರಿದು ಬಿದ್ದಿದ್ದು ಏಕೆ? ಎಂಬುದನ್ನ ಸ್ವತಃ ರಕ್ಷಿತ್ ಶೆಟ್ಟಿ ಅವರ ಪ್ರಾಣ ಸ್ನೇಹಿತ ಪ್ರಮೋದ್ ಶೆಟ್ಟಿ ಅವರು ವಿವರಿಸಿದ್ದಾರೆ.
ರಕ್ಷಿತ್ ಪ್ರಾಣ ಸ್ನೇಹಿತನ ಉತ್ತರ ಹೀಗಿತ್ತು
ರಶ್ಮಿಕಾ ಮಂದಣ್ಣ ಅವರ ಜೊತೆ ಬ್ರೇಕಪ್ ಆದ ನಂತರ ರಕ್ಷಿತ್ ಶೆಟ್ಟಿ ತುಂಬಾ ನೋವಲ್ಲಿ ಇದ್ದರು. ಅಲ್ಲದೆ ಅದರಿಂದ ಹೊರಗೆ ಬರೋದಕ್ಕೆ ರಕ್ಷಿತ್ ಶೆಟ್ಟಿ ಒಂದಷ್ಟು ಸಮಯ ಕೂಡ ತೆಗೆದುಕೊಂಡು ನೋವು ತಿಂದಿದ್ದರು ಎಂಬುದನ್ನು ಪ್ರಮೋದ್ ಶೆಟ್ಟಿ ಅವರು ವಿವರಿಸಿದ್ದಾರೆ. ಆದರೆ ಇಲ್ಲಿ ರಶ್ಮಿಕಾ ಮಂದಣ್ಣ & ರಕ್ಷಿತ್ ಶೆಟ್ಟಿ ಅವರ ಮದುವೆ ಮುರಿದು ಬೀಳಲು ಕಾರಣ ಏನು? ಎಂಬ ಪ್ರಶ್ನೆ ವೇಳೆ ಉತ್ತರ ಕೊಟ್ಟಿರುವ ಪ್ರಮೋದ್ ಶೆಟ್ಟಿ ಅವರು, ಆಗ ಅವರದ್ದು ಚಿಕ್ಕ ವಯಸ್ಸು. ಏನೋ ಚೈಲ್ಡಿಶ್ ಬುದ್ಧಿ ಇದ್ದಾಗ ಹೀಗೆ ಏನೇನೋ ನಡೆದು ಹೋಗುತ್ತದೆ... ಎಂದು ಹೇಳಿದ್ದಾರೆ. ಈ ಮೂಲಕ ಚಿಕ್ಕ ವಯಸ್ಸಲ್ಲಿ ನಡೆದಿರುವ ವಿಚಾರವನ್ನು ಮತ್ತೆ ಎಳೆದು ತರುವುದು ಬೇಡ ಎಂದು ಪ್ರಮೋದ್ ಶೆಟ್ಟಿ ಅವರು ಚರ್ಚೆಗಳಿಗೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ. ಖಾಸಗಿ ಸಂದರ್ಶನ ಒಂದರಲ್ಲಿ ಪ್ರಮೋದ್ ಶೆಟ್ಟಿ ಅವರು ಈ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಅತಿ ಶೀಘ್ರದಲ್ಲೇ ಸೆಲ್ಫಿ ಗ್ಯಾರಂಟಿ?
ಇಷ್ಟೆಲ್ಲದರ ನಡುವೆ ರಕ್ಷಿತ್ ಹಾಗೂ ರಿಷಬ್ ಶೆಟ್ಟಿ ಅವರ ನಡುವೆ ಕೂಡ ಗೊಂದಲ ಉಂಟು ಮಾಡಿ ಲಾಭ ಪಡೆಯಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕೂಡ ಖಡಕ್ ಉತ್ತರ ಕೊಟ್ಟಿರುವ ಪ್ರಮೋದ್ ಶೆಟ್ಟಿ ಅವರು ಸುಳ್ಳುಗಾರರ ಬಾಯಿ ಮುಚ್ಚಿಸಿದ್ದಾರೆ. ಅಂದಹಾಗೆ ಬಿಯಾಂಡ್ ಲಿಮಿಟ್ಸ್ ಯುಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಖಡಕ್ ಆಗಿ ಮಾತನಾಡಿರುವ ನಟ ಪ್ರಮೋದ್ ಶೆಟ್ಟಿ ಅವರು, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಸ್ನೇಹ ಈಗಲೂ ಗಟ್ಟಿಯಾಗೇ ಇದೆ. ಆದರೆ ಕೆಲವರು ಇಲ್ಲಿ ತಂದಿಡುವ ಕೆಲಸ ಮಾಡುತ್ತಾ ಇದ್ದಾರೆ, ರಕ್ಷಿತ್ ಶೆಟ್ಟಿ ಅವರು ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಮಯದಲ್ಲಿ ಇಲ್ಲಸಲ್ಲದ ಸುದ್ದಿ ಹಬ್ಬಿಸುವವರು ಜಾಸ್ತಿ ಆಗಿದ್ದಾರೆ ಎಂಬುದನ್ನ ತಿಳಿಸಿದ್ದಾರೆ ನಟ ಪ್ರಮೋದ್ ಶೆಟ್ಟಿ. ಅಲ್ಲದೆ ಅತಿ ಶೀಘ್ರದಲ್ಲೇ ನಾವೆಲ್ಲಾ ಸ್ನೇಹಿತರು ಒಟ್ಟಿಗೆ ಸೇರಿ ಒಂದು ಸೆಲ್ಫಿಗೆ ಪೋಸ್ ಕೊಡ್ತೀವಿ ಎನ್ನುವ ಮೂಲಕ ವಿರೋಧಿಗಳು ಹಾಗೂ ಸುಳ್ಳು ಸುದ್ದಿ ಹಬ್ಬಿಸುವ ಕಿಡಿಗೇಡಿಗಳ ಬಾಯಿ ಮುಚ್ಚಿಸಿದ್ದಾರೆ.
ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕನ್ನಡ ಸಿನಿಮಾ ರಂಗದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಟ & ನಟಿಯರ ಬೆನ್ನಿಗೆ ನಿಲ್ಲಬೇಕಿದೆ ಎಂಬುದು ಅಭಿಮಾನಿಗಳ ಆಗ್ರಹ. ಇದನ್ನು ಬಿಟ್ಟು ಇಲ್ಲಸಲ್ಲದ ವಿಚಾರ ಎಳೆದು ತಂದು, ಕನ್ನಡ ಸಿನಿಮಾ ಇಂಡಸ್ಟ್ರಿಯ ನಟ & ನಟಿಯರ ನೆಮ್ಮದಿಯನ್ನು ಹಾಳು ಮಾಡಬೇಡಿ ಎಂದು ಕೂಡ ಕನ್ನಡ ಸಿನಿಮಾ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಮೂಲಕ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಅಭಿಮಾನಿಗಳು ಈಗ ಕಾಯುತ್ತಿದ್ದಾರೆ. ಇದೇ ಕಾರಣಕ್ಕೆ ಆದೆಷ್ಟು ಬೇಗ ಸಿಹಿಸುದ್ದಿ ಸಿಗುವ ನಿರೀಕ್ಷೆ ಕೂಡ ದಟ್ಟವಾಗಿದೆ.












Click it and Unblock the Notifications