ರನ್ಯಾ ರಾವ್ ಚಿನ್ನದ ಕೇಸ್: ಇನ್ನಷ್ಟು ಸ್ಫೋಟಕ ಅಂಶಗಳು ಬಹಿರಂಗ!
ಅಕ್ರಮ ಚಿನ್ನ ಸಾಗಾಣಿಕೆಯಲ್ಲಿ ಸಿಕ್ಕಿ ಬಿದ್ದಿರುವ ನಟಿ ರನ್ಯಾ ರಾವ್ ಅವರ ಕೇಸ್‌ಗೆ ಸಂಬಂಧಿಸಿದಂತೆ ಇನ್ನಷ್ಟು ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ದುಬೈನಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ನಟಿ ರನ್ಯಾ ಅವರು ಸಿಕ್ಕಿ ಬಿದ್ದಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು. ತನಿಖೆಯ ವೇಳೆ ನಟಿ ರನ್ಯಾ ಅವರು ಕೇವಲ ದುಬೈಗೆ ಮಾತ್ರವಲ್ಲ. ಅಮೆರಿಕ, ಯುರೋಪ್ ಮತ್ತು ಮಧ್ಯಪ್ರಾಚ್ಯದಂತಹ ಪ್ರಮುಖ ದೇಶಗಳಿಗೂ ಹೋಗಿ ಬಂದಿದ್ದು. ಈ ವಂಚನೆಯ ಜಾಲ ಇನ್ನಷ್ಟು ದೊಡ್ಡದಿರಬೇಕು ಎನ್ನುವ ಅನುಮಾನ ಶುರುವಾಗಿದೆ. ರನ್ಯಾ ಅವರ ಪ್ರಕರಣದಲ್ಲಿ ಇನ್ನಷ್ಟು ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಅದರ ವಿವರ ಇಲ್ಲಿದೆ.
ಇನ್ನು ರನ್ಯಾ ಅವರು ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ನೀಡಿರುವ ಹೇಳಿಕೆಯಲ್ಲಿ ರನ್ಯಾ ರಾವ್ ಅವರು ಚಿನ್ನವನ್ನು ಕಳ್ಳಸಾಗಣಿಕೆ ಮಾಡುತ್ತಿದ್ದೆ ಎನ್ನುದು ನಿಜ. ಅಲ್ಲದೆ ದುಬೈ ಮಾತ್ರವಲ್ಲದೆ ವಿವಿಧ ದೇಶಗಳಿಗೂ ಹೋಗುತ್ತಿದ್ದೆ ಎಂದು ಹೇಳಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

ಪ್ರಕರಣದಲ್ಲಿ ಸಿಲುಕಿರುವ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದೀಗ ಅವರು ನಿರಂತರ ವಿಚಾರಣೆಯಿಂದ ಸುಸ್ತಾಗಿದ್ದು. ನನಗೆ ಸ್ವಲ್ಪ ಕಾಲ ವಿಶ್ರಾಂತಿ ಬೇಕು ಎಂದು ಕೇಳಿದ್ದಾರೆ ಎನ್ನಲಾಗುತ್ತಿದೆ. ನನ್ನ ಬಳಿ 17 ಚಿನ್ನದ ಗಟ್ಟಿಗಳು ಇದ್ದವು ಎನ್ನುವುದು ನಿಜ. ಆದರೆ, ಈ ತನಿಖೆಯನ್ನು ಸಾಧ್ಯವಾದಷ್ಟು ಖಾಸಗಿಯಾಗಿ ನಡೆಸಿ. ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳಬೇಡಿ ಅಂತ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಮಹಾನಿರ್ದೇಶಕ (ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ) ರನ್ಯಾ ಅವರ ಮಲತಂದೆ ರಾಮಚಂದ್ರ ರಾವ್ ಅವರು ಡಿಆರ್‌ಐ ನಡೆಸುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಸಾಕ್ಷಿಯನ್ನು ಯಾವುದೇ ಬಲವಂತವಿಲ್ಲದೆ ಸ್ವಯಂ ಪ್ರೇರಣೆಯಿಂದ ಕೊಟ್ಟಿರುವುದಾಗಿಯೂ ಅವರು ಹೇಳಿದ್ದಾರೆ.
ರನ್ಯಾ ಅವರು ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನಾನು ಈ ತನಿಖೆಯನ್ನು ನಡೆಸುವುದಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದೂ ಅವರು ಹೇಳಿದ್ದಾರೆ. ನಾನು ಯಾವುದೇ ಹೇಳಿಕೆಗಳನ್ನೂ ಯಾವುದೇ ಬಲವಂತ, ಬೆದರಿಕೆ, ಬಲವಂತ ಅಥವಾ ಪ್ರಚೋದನೆಗೆ ಒಳಪಟ್ಟು ಕೊಡುತ್ತಿಲ್ಲ. ಸ್ವಯಂಪ್ರೇರಣೆಯಿಂದ ಈ ಹೇಳಿಕೆಗಳನ್ನು ಕೊಟ್ಟಿದ್ದೇನೆ ಎಂದೂ ಅವರು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ.
30 ಬಾರಿ ದುಬೈ ಪ್ರವಾಸ ಮಾಡಿದ್ದ ರನ್ಯಾ: ಇನ್ನು ರನ್ಯಾ ಅವರು ಬರೋಬ್ಬರಿ 30ಕ್ಕೂ ಹೆಚ್ಚು ಬಾರಿ ದುಬೈಗೆ ಭೇಟಿ ನೀಡಿದ್ದರು. ಹಲವು ಬಾರಿ ವಿವಿಧ ದೇಶಗಳಿಗೆ ಭೇಟಿ ನೀಡಿದ್ದರು ಎನ್ನುವ ಅಂಶಗಳು ಇದೀಗ ಬೆಳಕಿಗೆ ಬಂದಿವೆ. ಕೇವಲ 15 ದಿನಗಳ ಅಂತರದಲ್ಲಿ ಅವರು ನಾಲ್ಕು ಬಾರಿ ದುಬೈಗೆ ಹೋಗಿದ್ದರು ಎನ್ನುವ ಅಂಶವೂ ಗೊತ್ತಾಗಿದೆ. ಈ ವಿಷಯಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಈ ರೀತಿ ವಿದೇಶಿ ಪ್ರವಾಸ ಮಾಡಿದ ಪ್ರತಿ ಬಾರಿಯೂ ಅವರು ಚಿನ್ನವನ್ನು ಕಳ್ಳಸಾಗಣೆಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.












Click it and Unblock the Notifications