Ramya: ಡೇಟಿಂಗ್, ಮದುವೆ ಬಗ್ಗೆ ರಮ್ಯಾ ಮಾತು: ಸಂಕುಚಿತ ಆಲೋಚನೆ ಬಿಡಿ ಎಂದು ಮನವಿ
Actress Ramya: ಮೋಹಕ ತಾರೆ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ನಟ ವಿನಯ್ ರಾಜ್ ಕುಮಾರ್ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡುತ್ತಿದ್ದಂತೆ ನೆಟ್ಟಿಗರು, ಫ್ಯಾನ್ಸ್ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ನಟಿ ರಮ್ಯಾ ಅವರು ಇದೀಗ ಮತ್ತೊಂದು ಪೋಸ್ಟ್ ಹಂಚಿಕೊಂಡು ಜನರಲ್ಲಿ ಮನವಿ ಮಾಡಿದ್ದಾರೆ.
ಅಮರಿಕೆದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ನಟ ವಿನಯ್ ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ರ ವಂದಿತಾ ಸಹಿ ಜೊತೆಗಿದ್ದರು. ಆಗ ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಅನ್ನು ನಟಿ ರಮ್ಯಾ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಪೋಟೋ ವೈರಲ್ ಆಗುತ್ತಿದ್ದಂತೆ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ಇದೀಗ ಗುರುವಾರ ಮತ್ತೊಂದು ಪೋಸ್ಟ್ ಮಾಡಿ ತಮ್ಮ ಸ್ವಾತಂತ್ರ್ಯದ ಬಗ್ಗೆ, ಜನರ ಸಂಕುಚಿತ ಆಲೋಚನೆಗಳ ಬಗ್ಗೆ ಮಾತನಾಡಿದ್ದಾರೆ.

ನಾನು ಮತ್ತು ನನ್ನ ಬೆಸ್ಟ್ ಕಂಪನಿ ಎಂದು ಫೋಟೋಗಳನ್ನು ಹಂಚಿಕೊಂಡ ಬಳಿಕ ಬಂದ ಕಾಮೆಂಟ್, ಟ್ರೋಲ್‌ಗಳಿಗೆ ಉತ್ತರಿಸಿದ್ದ ರಮ್ಯಾ ಅವರು, ನೀವು ತುಂಬಾ ತಮಾಷೆ ಮಾಡುತ್ತಿದ್ದೀರಿ. ವಿನಯ್ ರಾಜಕುಮಾರ್ ನನಗೆ ತಮ್ಮ ರೀತಿ. ನಿಮ್ಮೆಲ್ಲರ ಕಲ್ಪನೆಗೂ ಒಂದು ಮಿತಿ ಇರಲಿ' ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಇನ್ಸ್‌ಟಾಗ್ರಾಮ್ ಸ್ಟೋರಿ ಮೂಲಕ ಒಂದಷ್ಟು ಮನವಿ ಮಾಡಿದ್ದಾರೆ.
ಡೇಟಿಂಗ್, ಮ್ಯಾರೇಜ್ ಬಗ್ಗೆ ನಾನೇ ಹೇಳ್ತಿನಿ..
ರಮ್ಯಾ ಅವರು ''ದಯವಿಟ್ಟು ನಿರ್ಣಯಿಸುವುದನ್ನು ನಿಲ್ಲಿಸಿ. ಅದರಲ್ಲೂ ವಿಶೇಷವಾಗಿ ಮಹಿಳೆಯರ ನಿರ್ಧರಿಸುವುದನ್ನು ನಿಲ್ಲಿಸಿ. ನಾನು ನನ್ನ ಪುರುಷ ಸ್ನೇಹಿತರೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದಾಗಲೆಲ್ಲಾ ನಾನು ಅವರೊಂದಿಗೆ ಮದುವೆಯಾಗುತ್ತೇನೆ. ಅಥವಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಮಾತನಾಡುವುದು ತಪ್ಪು. ಅವರಿಗೆ ಬೇರೆಯ ವ್ಯಕ್ತಿಗಳು ಇರುತ್ತಾರೆ. ಇಂತಹ ಸಂಕುಚಿತ ಮನಸ್ಸಿನ ಆಲೋಚನೆಯನ್ನು ನಾವು ಬಿಟ್ಟುಕೊಡುವ ಸಮಯ ಇದು'' ಎಂದಿದ್ದಾರೆ.
''ಒಂದು ವೇಳೆ ನಾನು ಡೇಟಿಂಗ್ ಮಾಡುತ್ತಿದ್ದರೆ ಅಥವಾ ಮದುವೆಯಾಗುತ್ತಿದ್ದರೆ ನೀವು ಅದನ್ನು ನನ್ನಿಂದಲೇ ತಿಳಿದುಕೊಳ್ಳುತ್ತೀರಿ. ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಇಷ್ಟವಾದದ್ದನ್ನು ಪೋಸ್ಟ್ ಮಾಡಲು ನನಗೆ ಸ್ವಾತಂತ್ರ್ಯವಿದೆ. ಜನರು ತಮ್ಮ ಸಣ್ಣ ಮನಸ್ಥಿತಿಯನ್ನು ಬದಲಾಯಿಸಲು ಬಯಸುವುದಿಲ್ಲ ಆದರೆ ನಾನು 'ಸೆಲೆಬ್ರಿಟಿ' ಎಂಬ ಕಾರಣಕ್ಕಾಗಿ ಪೋಸ್ಟ್ ಮಾಡುವಾಗ ನಾನು ಹೆಚ್ಚು 'ಜವಾಬ್ದಾರಿಯುತ'ನಾಗಿರಬೇಕೆಂದು ನಿರೀಕ್ಷಿಸುತ್ತಾರೆ ಎಂಬುದು ದುಃಖಕರ ಸಂಗತಿ, ಬೂಟಾಟಿಕೆ ಅನ್ನಿಸುತ್ತದೆ'' ಎಂದು ಅವರು ಹೇಳಿಕೊಂಡು ಸ್ಟೋರಿ ಶೇರ್ ಮಾಡಿಕೊಂಡಿದ್ದಾರೆ.
ರಮ್ಯಾ ಸಿಕ್ಕಿದಾಗಲೆಲ್ಲ ಯಾವಾಗ ಮದುವೆ ಆಗುತ್ತೀರಿ, ಎಂತಹ ಹುಡುಗ ಇಷ್ಟ ಎಂದೆಲ್ಲ ಮಾಧ್ಯಮಗಳು ಕೇಳಿದ್ದರು. ಅದಕ್ಕೆ ಅವರು ನಯವಾಗಿಯೇ ಮಾತನಾಡಿದ್ದರು.ಇತ್ತೀಚೆಗೆ ಅವರು ವಿನಯ್ ರಾಜ್ ಕುಮಾರ್ ಅವರೊಂದಿಗೆ ಒಂದಷ್ಟು ಫೋಟೋ ಗಳನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದ್ದ ಸಾಮಾಜಿಕ ಜಾಲತಾಣ ಬಳಕೆದಾರರು ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದೆಲ್ಲ ಚರ್ಚೆ ಶುರು ಮಾಡಿಕೊಂಡಿದ್ದರು. ಅದಕ್ಕೀಗ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ನಿಮ್ಮ ಆಲೋಚನೆ ಬದಲಾಯಿಸಿ, ಸಂಕುಚಿತವಾಗಿ ನೀರ್ಣಯಿಸುವುದನ್ನು ನಿಲ್ಲಿಸಿ ಎಂದು ಕೋರಿದ್ದಾರೆ.












Click it and Unblock the Notifications