ಕನ್ನಡದಲ್ಲಿ ನಟಿಸಿದ್ದ ಖ್ಯಾತ ನಟಿಗೆ ರಾಜಕಾರಣಿಯಿಂದ ಮನೆ ಗಿಫ್ಟ್, ರಕುಲ್ ಹೇಳಿದ್ದೇನು?
Rakul Preet Singh: ಕನ್ನಡದ ಗಿಲ್ಲಿ ಸಿನಿಮಾದಲ್ಲಿ ನಟಿಸಿದ್ದ ರಕುಲ್ ಪ್ರೀತ್ ಸಿಂಗ್ ಅವರು ಟಾಲಿವುಡ್‌ನಲ್ಲಿ ಅಬ್ಬರಿಸಿ, ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಸ್ಟಾರ್ ನಟ ಸಿನಿಮಾಗಳಲ್ಲಿ ಮಿಂಚಿರುವ ರಕುಲ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮದುವೆಯೂ ಆಗಿದ್ದರು. ಇದರ ನಡುವೆ ರಾಕುಲ್ ಬಗ್ಗೆ ಸುದ್ದಿಯೊಂದು ಸೌಂಡ್ ಮಾಡ್ತಿದೆ. ಈ ಸುದ್ದಿಯಲ್ಲಿ ಖ್ಯಾತ ರಾಜಕಾರಣಿಯೊಬ್ಬರ ಹೆಸರು ಕೂಡ ಕೇಳಿಬಂದಿದ್ದು, ನಟಿಗೂ ರಾಜಕಾರಣಿಗೂ ಇರುವ ನಂಟಿನ ಬಗ್ಗೆ ಗುಸುಗುಸು ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೊನೆಗೂ ನಟಿ ರಕುಲ್ ಮೌನ ಮುರಿದಿದ್ದಾರೆ.
ದಕ್ಷಿಣದ ಸ್ಟಾರ್ ನಟಿಯರಲ್ಲಿ ಒಬ್ಬರಾದ ರಕುಲ್ ಪ್ರೀತ್ ಸಿಂಗ್ ಪ್ರಸ್ತುತ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಬಳಿಕ ತೆಲುಗು ಸಿನಿಮಾಗಳಿಂದ ದೂರವಾದರೂ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರ ವೃತ್ತಿಜೀವನದಲ್ಲಿ ಕೇಳಿಬಂದ ಶಾಕಿಂಗ್ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ. ರಕುಲ್ ಅವರು ಖ್ಯಾತ ರಾಜಕಾರಣಿ ಜೊತೆ ನಂಟು ಹೊಂದಿದ್ದಾರೆ, ಇದಕ್ಕೆ ಸಾಕ್ಷಿಯಾಗಿ ರಕುಲ್‌ಗೆ ಆ ರಾಜಕಾರಣಿ ದುಬಾರಿ ಮನೆಯನ್ನೇ ಗಿಫ್ಟ್ ಮಾಡಿದ್ದಾರೆ ಎಂಬ ವದಂತಿ ಹಬ್ಬಿರುವ ವಿಚಾರವನ್ನು ಹೇಳಿದ್ದಾರೆ.

ತೆಲಂಗಾಣದ ಮಾಜಿ ಸಚಿವ, ಬಿಆರ್‌ಎಸ್ ಪಕ್ಷದ ನಾಯಕ ಕೆ.ಟಿ.ರಾಮ ರಾವ್ (ಕೆಟಿಆರ್) ನಟಿ ರಕುಲ್‌ಗೆ ಮನೆಯನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂಬ ವೈರಲ್ ಸುದ್ದಿಯ ಬಗ್ಗೆ ಖುದ್ದಾಗಿ ನಟಿಯೇ ಸ್ಪಷ್ಟನೆ ನೀಡಿದ್ದಾರೆ. ಆದರೆ ರಕುಲ್ ಪ್ರೀತ್ ಸಿಂಗ್ ಆ ರಾಜಕಾರಣಿ ಹೆಸರನ್ನು ಹೇಳಲಿಲ್ಲ, ವದಂತಿಯ ಸಂಪೂರ್ಣ ವಿವರಗಳನ್ನೂ ನೀಡಲಿಲ್ಲ. ಆದರೆ ಆ ಸಂದರ್ಭವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಇದನ್ನು ಅವರು ಅತ್ಯಂತ ವಿಚಿತ್ರವಾದ ವದಂತಿ ಎಂದು ಕರೆದಿದ್ದಾರೆ.
ರಾಜಕಾರಣಿಗೆ ಮನೆಯನ್ನು ತಮಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಜನ ಗಾಸಿಪ್ ಮಾಡಿದ್ದಾರೆ ಎಂದು ರಕುಲ್ ಹೇಳಿದ್ದಾರೆ. ವಿಚಿತ್ರವಾದ ವದಂತಿಯೆಂದರೆ ನನ್ನ ಮನೆಯನ್ನು ನನಗೆ ಉಡುಗೊರೆಯಾಗಿ ನೀಡಲಾಯಿತು. ಆದರೆ ವಾಸ್ತವವಾಗಿ ನನ್ನ ತಂದೆಯೇ ನನಗೆ ಎಲ್ಲ ದಾಖಲೆಗಳನ್ನು ಮಾಡಿ ಆ ಮನೆ ನೀಡಿದ್ದಾರೆ. ನಾವು ಎಷ್ಟೆಲ್ಲ ಕಷ್ಟಪಟ್ಟು ಕೆಲಸ ಮಾಡಿದಾಗ ಜನ ನಮ್ಮ ಬಗ್ಗೆ ಹೀಗೆ ಹೇಗೆ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನನಗೆ ಉತ್ತರಿಸಲು ಕೇಳಿದರು, ಆದರೆ ನಾನು ಅದನ್ನು ಯಾವಾಗಲೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ ಎಂದಿದ್ದಾರೆ. ರಾಕುಲ್ ಪ್ರೀತ್ ಅವರ ತಂದೆ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದಾಗ, ಈ ಊಹಾಪೋಹಗಳು ಹರಿದಾಡುತ್ತಿದ್ದವು.
ಈ ಹಿಂದೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಫೋನ್ ಟ್ಯಾಪಿಂಗ್ ವಿಷಯದಲ್ಲಿ ಚಲನಚಿತ್ರ ನಟಿಯರಾದ ರಕುಲ್ ಪ್ರೀತ್ ಸಿಂಗ್ ಮತ್ತು ಸಮಂತಾ ಅವರ ಹೆಸರುಗಳು ಕೇಳಿಬಂದಿದ್ದು, ಅವರ ಫೋನ್‌ಗಳನ್ನು ಸಹ ಕದ್ದಾಲಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಫೋನ್ ಟ್ಯಾಪಿಂಗ್ ಸಮಂತಾ ಅವರ ವೈವಾಹಿಕ ಜೀವನದಲ್ಲಿ ಅಡ್ಡಿಯುಂಟುಮಾಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಆಗ ಫೋನ್ ಟ್ಯಾಪಿಂಗ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನನಗೆ ಯಾವುದೇ ನಾಯಕಿಯ ಜೊತೆ ಸಂಬಂಧವಿಲ್ಲ ಎಂದು ಕೆಟಿಆರ್ ಹೇಳಿದ್ದರು.












Click it and Unblock the Notifications