Darshan Thoogudeepa: ದರ್ಶನ್ ಫ್ಯಾನ್ ಅನ್ನೋ ಕಾರಣಕ್ಕೆ ತಗಲಾಕಿಕೊಂಡರಾ ರಜತ್?
ಮಚ್ಚು ಹಿಡಿದು ರೀಲ್ಸ್ ಮಾಡಿದರು ಅನ್ನೋ ಕಾರಣಕ್ಕೆ ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಬಂಧಿಸಲಾಗಿದೆ. ಮಚ್ಚು ಹಿಡಿದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸಿದ್ದಾರೆ ಎನ್ನುವ ಕಾರಣಕ್ಕೆ ಬಸವೇಶ್ವರನಗರ ಠಾಣೆಯ ಪೊಲೀಸರು ಬಿಗ್‌ಬಾಸ್ ಹಳೆಯ ಸ್ಪರ್ಧಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕಳೆದ ದಿನ (ಮಾರ್ಚ್ 25) ರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ ಇಬ್ಬರು ನಟರು ಜಾಮೀನು ಅರ್ಜಿ ಸಲ್ಲಿಸಿದ್ದು ಇಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರ್ ಆಗಲಿದ್ದಾರೆ.
ರಜತ್ ಕಿಶನ್ ಹಾಗೂ ವಿನಯ್ ಗೌಡ ಧಾರವಾಹಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದವರು. ನಂತರ ಇವರು ಬಿಗ್‌ಬಾಸ್ ಮನೆಗೆ ಹೋದ ಬಳಿಕ ತಮ್ಮದೇ ಆದ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹೀಗಿರುವಾಗ ನಟರು ಮಚ್ಚು ಹಿಡಿದು ರೀಲ್ಸ್ ಮಾಡುವುದು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದು ಸೋಮವಾರ ಪೊಲೀಸರು ಸ್ವತ: ದೂರು ದಾಖಲಿಸಿಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದರು. ದೂರು ದಾಖಲಿಸುವಾಗ ನಿಷೇಧಿತ ಮಚ್ಚು ಬಳಕೆ ಎಂದೇ ದೂರು ದಾಖಲಿಸಿ ಅರೆಸ್ಟ್ ಮಾಡಲಾಗಿತ್ತು.

ಆದರೆ ಬಂಧಿಸಿದ ದಿನವೇ ಅವರಿಬ್ಬರು ಬಳಸಿದ್ದು ಫೈಬರ್ ಮಚ್ಚು ರಿಯಲ್ ಮಚ್ಚು ಅಲ್ಲ ಅನ್ನೋ ಕಾರಣ ನೀಡಿ ಪೊಲೀಸರು ಠಾಣೆಯಿಂದ ಇಬ್ಬರನ್ನು ಬಿಡುಗಡೆ ಮಾಡಿದ್ದರು. ಬಳಿಕ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೆ ಪೊಲೀಸರು ರಜತ್ ಹಾಗೂ ವಿನಯ್ ರನ್ನು ಮಂಗಳವಾರ ವಿಚಾರಣೆಗೆಗಾಗಿ ಠಾಣೆಗೆ ಕರೆಸಿ ಬಂಧಿಸಿದ್ದಾರೆ.
ರೀಲ್ ರಿಯಲ್ 'ಮಚ್ಚು'
ವಿಚಾರಣೆಗೆ ಕರೆಸಿದಾಗ ರೀಲ್ಸ್ ನಲ್ಲಿ ಬಳಕೆ ಮಾಡಿದ ಮಚ್ಚಿಗೂ ಪೊಲೀಸರಿಗೆ ನೀಡಿದ ಮಚ್ಚಿಗೂ ತುಂಬಾ ವ್ಯತ್ಯಾಸ ಕಂಡು ಬಂದಿದೆ. ರೀಲ್ಸ್‌ಗೆ ಬಳಕೆ ಮಾಡಿದ ಮಚ್ಚಿಗೂ ಪೊಲೀಸರಿಗೆ ನೀಡಿದ ಮಚ್ಚಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ರಜತ್ ವಿನಯ್ ಸಾಕ್ಷಿ ನಾಶಕ್ಕೆ ಮುಂದಾಗಿದ್ದಾರೆ ಎನ್ನುವ ಕಾರಣ ನೀಡಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ರಾತ್ರಿಯಿಡೀ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು.
ಇಲ್ಲಿ ಹುಟ್ಟಿಕೊಳ್ಳುವ ಸರಳ ಪ್ರಶ್ನೆ ಅಂದರೆ ಪೊಲೀಸರಿಗೆ ರಿಯಲ್ ಮಚ್ಚು ಯಾವುದು? ಫೈಬರ್ ಮಚ್ಚು ಯಾವುದು ಅನ್ನೋ ವ್ಯತ್ಯಾಸ ಗೊತ್ತಾಗಲ್ವಾ? ವ್ಯತ್ಯಾಸ ಗೊತ್ತಾಗದೇ ರಜತ್ ಹಾಗೂ ವಿನಯ್ ಗೌಡ ಅವರನ್ನು ಬಂಧಿಸಿದ್ರಾ? ಬಂಧಿಸಿ ಬಿಡುಗಡೆ ಮಾಡಿ, ಮತ್ತೆ ಕರೆಸಿ ವಿಚಾರಣೆ ಮಾಡಿ, ಜೈಲಿಗೆ ಕಳುಹಿಸಿದ್ದು ಯಾಕೆ ಅನ್ನೋ ಸಾಕಷ್ಟು ಪ್ರಶ್ನೆಗಳು ಉದ್ಬವಿಸುತ್ತವೆ.

ರಜತ್ ಪತ್ನಿ ನೀಡಿದ ಮಚ್ಚಿಗೂ ರೀಲ್ಸ್‌ನಲ್ಲಿ ಬಳಕೆ ಮಾಡಿದ ಮಚ್ಚಿಗೂ ವ್ಯತ್ಯಾಸ ಗೊತ್ತಾಗದಷ್ಟು ದಡ್ಡರಾ ಪೊಲೀಸರು ಅನ್ನೋ ಪ್ರಶ್ನೆಗಳು ಉದ್ಬವಿಸಿವೆ. ಇಲ್ಲಿ ಪೊಲೀಸರು ರಜತ್ ಹಾಗೂ ಕಿಶನ್ ಅವರನ್ನು ಯಾರದ್ದೋ ಒತ್ತಡಕ್ಕೆ ಮಣಿದು ಬಿಟ್ಟು ಕಳುಹಿಸಿರಬೇಕು ಎಂದು ಹೇಳಲಾಗುತ್ತಿದೆ. ದೂರಿನಲ್ಲಿ ದಾಖಲಿಸಿಕೊಳ್ಳುವಾಗ ನಿಷೇಧಿತ ಮಚ್ಚು ಎಂದು ದಾಖಲಿಸಿ ರಾತ್ರಿ ಅವರು ಬಳಸಿದ್ದು ಫೈಬರ್ ಮಚ್ಚು ಎಂದು ಹೇಳಿ ಬಿಟ್ಟು ಕಳುಹಿಸಿ ಪುನ: ಅವರನ್ನು ಬಂಧಿಸಿದ್ದರ ಹಿಂದೆ ಯಾವುದೋ ಸಂಚು ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ.
ದರ್ಶನ್ ಫ್ಯಾನ್ ಅನ್ನೋ ಕಾರಣಕ್ಕೆ ರಜತ್ ಅಂದರ್
ರಜತ್ ಕಿಶನ್ ನಟ ದರ್ಶನ್ ತೂಗುದೀಪ ಅವರ ಅಪ್ಪಟ ಅಭಿಮಾನಿ. ದರ್ಶನ್ ಆಕ್ಟಿಂಗ್, ಡೈಲಾಗ್, ಸಿನಿಮಾ, ಹಾಡು ಅಂದರೆ ಪ್ರಾಣ. ಬಿಗ್‌ಬಾಸ್ ಮನೆಯಲ್ಲಿ ಇರುವಾಗ ರಜತ್ ದರ್ಶನ್ ಅವರನ್ನ ನೆನಪಿಸಿಕೊಂಡು ಕುಣಿದಾಡಿದ್ದು ಇದೆ. ಒಂದಿಷ್ಟು ಒರಟು ಮಾತು, ನೇರ ನುಡಿಯಿಂದಾಗಿ ರಜತ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ದರ್ಶನ್ ಫ್ಯಾನ್ಸ್ ಕೂಡ ರಜತ್ ಅವರ ಆಟವನ್ನು ಮೆಚ್ಚಿಕೊಂಡು ಓಟ್ ಮಾಡಿರುವುದು ಇದೆ.
ಹೀಗಾಗಿ ರಜತ್ ಕಡಿಮೆ ಅವಧಿಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿದ್ದರೂ ಕೂಡ ಬಿಗ್‌ಬಾಸ್ ಮನೆಯಲ್ಲಿ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಬಿಗ್‌ಬಾಸ್ ಇತಿಹಾಸದಲ್ಲೇ ಒಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಈ ಮಟ್ಟಿಗೆ ಜನಪ್ರಿಯತೆ ಪಡೆದಿರುವುದು ಹನುಮಂತ ಲಮಾಣಿ ಬಿಟ್ಟರೆ ನಂತರದ ಸ್ಥಾನ ರಜತ್ ಕಿಶನ್ ಅವರಿಗೇ ಸಲ್ಲಿತ್ತದೆ. ಇದಕ್ಕೆ ಕಾರಣ ದರ್ಶನ್ ಅಭಿಮಾನಿಗಳ ಪ್ರೀತಿ.
ಇದೇ ಕಾರಣಕ್ಕೆ ರಜತ್ ಟಾರ್ಗೇಟ್ ಆಗಿರಬಹುದು ಅಂತಲೂ ಕೆಲ ಜನ ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್ ಹಾಗೂ ದರ್ಶನ್ ಫ್ಯಾನ್ಸ್ ಅಂದರೆ ಲಾಂಗು, ಮಚ್ಚು, ಕೊಲೆ, ದಮ್ಕಿ ಹಾಕೋದರಲ್ಲಿಯೇ ಇರುತ್ತಾರೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ದರ್ಶನ್ ಫ್ಯಾನ್ ಅನ್ನೋ ಕಾರಣಕ್ಕೆ ರಜತ್ ಕಿಶನ್ ಅವರಿಗೆ ಇಷ್ಟೆಲ್ಲಾ ತೊಂದರೆಗಳು ಉಂಟಾಗುತ್ತಿವೆ. ದರ್ಶನ್ ಅವರೊಂದಿಗೆ ಇರುವವರಿಗೆ, ಅವರಿಂದ ಬೆಳೆದವರಿಗೆ ತುಂಬಾ ತೊಂದರೆಗಳಾಗುತ್ತಿವೆ ಅನ್ನೋದು ಕೆಲವರ ವಾದವಾಗಿದೆ.
ಒಟ್ಟಿನಲ್ಲಿ ಏನೇ ಆಗಲಿ ಸಾರ್ವಜನಿಕವಾಗಿ ಗುರುತಿಸಿಕೊಂಡ ನಾಯಕ ನಟರು ಹಾಗೂ ರಾಜಕಾರಣಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಸಮಾಜಕ್ಕೆ ಕೆಟ್ಟ ಸಂದೇಶ ನೀಡುವಂತವರಾಗಬಾರದು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications