Radhika Pandit: ಹೆಣ್ಮಕ್ಕಳು ನಿಮ್ಮಂತಿರಬೇಕು! 'ಕರ್ನಾಟಕದ ಗೊಂಬೆ' ಎಂದೆಲ್ಲ ಹೊಗಳಿದ ಫ್ಯಾನ್ಸ್..Viral Photos
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರ ಪತ್ನಿಯಾದರೂ ಸಹಿತ ನಟಿ ರಾಧಿಕಾ ಪಂಡಿತ್ (Radhika Pandit) ಅವರು ತಮ್ಮ ಸರಳತೆ, ವ್ಯಕ್ತಿತ್ವ, ನಟನೆ ಮೂಲಕ ಚಿತ್ರರಂಗದಲ್ಲಿ ಛಾಪು ಮೂಡಿಸಿದವರು. ತಮ್ಮದೇ ಆದ ಅಪಾರ ಬಳಗ ಹೊಂದಿರುವವರು. ನಟ ಯಶ್ ಮತ್ತು ರಾಧಿಕಾ ಸೀರಿಯಲ್ ದಿನಗಳಿಂದಲೂ ಒಟ್ಟಿಗೆ ಬೆಳೆದು ಬಂದವರು. ಸದ್ಯ ಚಿತ್ರರಂಗದಿಂದ ದೂರ ಇದ್ದರೂ ಸಹಿತ ನಟಿ ರಾಧಿಕಾ ಪಂಡಿತ್ ಅವರ ಮೇಲಿನ ಕ್ರೇಜ್, ಅಭಿಮಾನ ಕಡಿಮೆ ಆಗಿಲ್ಲ ಎಂಬುದಕ್ಕೆ ವೈರಲ್ ಆಗುತ್ತಿರುವ ಈ ಪೋಸ್ಟ್ ಸಾಕ್ಷಿ.
ಕನ್ನಡ ಚಿತ್ರರಂಗದಲ್ಲಿ ಒಂದೆರಡು ಸಿನಿಮಾ ಮಾಡುತ್ತಿದ್ದಂತೆ ಇಲ್ಲಸಲ್ಲದ ಗಾಸಿಪ್‌ಗಳಿಗೆ ಒಳಗಾಗುವ ನಟ, ಬೇಡದ ವಿಚಾರಗಳಿಗೆ ಮೂಗು ತೂರಿಸುವ ಸೆಲೆಬ್ರೆಟಿಗಳ ಮಧ್ಯೆ ನಟಿ ರಾಧಿಕಾ ಪಂಡಿತ್ ತುಂಬಾ ವಿಶೇಷವಾಗಿ ಕಾಣಿಸುತ್ತಾರೆ. ಸಣ್ಣ ವದಂತಿ, ಗಾಸಿಪ್ ಇಲ್ಲದೇ ಅನೇಕ ಹಿಟ್ ಚಿತ್ರಗಳನ್ನು ನೀಡಿದ ನಟಿ. ಅವರು ಯಶ್ ಮದುವೆ ಬಳಿಕ ಮತ್ತು ಮಕ್ಕಳಾದ ಮೇಲೆ ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ ಅವರ ಮೇಲಿನ ಕ್ರೇಜ್, ಫ್ಯಾನ್ ಫಾಲೋಯಿಂಗ್ ಮಾತ್ರ ಕೊಂಚವು ಕಡಿಮೆ ಆಗಿಲ್ಲ. ನಟಿಯ ಚೆಂದದ ಪೋಸ್ಟ್ ನೋಡಿದ ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ. 'ಕರ್ನಾಟಕದ ಗೊಂಬೆ' ಎಂದು ಬಿರುದು ಕೊಟ್ಟಿದ್ದಾರೆ.

ಅತ್ಯುತ್ತಮ ನಟಿ, ಪತ್ನಿ ಮಾತ್ರವಲ್ಲದೇ ಒಳ್ಳೆಯ ತಾಯಿ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಎಂದರೆ ವಿಶೇಷ ಅಭಿಮಾನ. ಅವರು ಗುರುವಾರ ಗುಲಾಬಿ ಬಣ್ಣದ ಸೀರೆಯಲ್ಲಿ ತೆಗೆಸಿದ ಫೋಟೋಗಳನ್ನು ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ 18 ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್, ಸಾವಿರಾರು ಕಾಮೆಂಟುಗಳು ಬಂದಿವೆ.
ಕೆಟ್ಟ ಹೆಸರಿಲ್ಲ! ಇದ್ರೆ ನಿಮ್ ತರಾ ಇರಬೇಕು ಮೇಡಂ..
ರಾಧಿಕಾ ಪಂಡಿತ್ 'ನಮ್ಮ ಅತ್ತಿಗೆ, ಕರ್ನಾಟಕದ ಗೊಂಬೆ', 'ಇವತ್ತಿಗೂ ನಮ್ಮ ಸ್ಯಾಂಡಲ್‌ವುಡಲ್ಲಿ ಒಂದೇ ಒಂದು ಕೆಟ್ಟ ಹೆಸರು ತಗೊಂಡಿಲ್ಲ ನಮ್ಮ ರಾಧಿಕಾ ಮೇಡಂ ಅವರು ಇವರ ನೋಡಿ ಕಲಿಯೋದು ತುಂಬಾ ಇದೆ ಇವಾಗಿನ ನಟಿಯರಿಗೆ..' ಎಂದು ಫ್ಯಾನ್ಸ್ ಕಾಮೆಂಟ್ ಮೂಲಕ ಹಾಡಿ ಹೊಗಳಿದ್ದಾರೆ.

'ಹೆಣ್ಣು ಮಕ್ಕಳು ಅಂದ್ರೆ ನಿಮ್ ತರ ಇರ್ಬೇಕು ರಾಧಿಕಾ ಮೇಡಂ. ಬದುಕಿದರೆ ನಿಮ್ಮ ಹಾಗೆ ಬದುಕಬೇಕು' ಎಂದು ನೆಚ್ಚಿನ ನಟಿಯನ್ನು ಕೊಂಡಿದ್ದಾರೆ. ಹಾರ್ಟ್ ಎಮೋಜಿ ಹಾಕಿದ್ದಾರೆ. ಮತ್ತೊಬ್ಬರು ''ನಿಮ್ಮನ್ನು ಈ ನೋಟದಲ್ಲಿ ನೋಡಲು ನಾನು ಕಾಯುತ್ತಿದ್ದೆ 'ಎಂದಿದ್ದಾರೆ. 'ನೀವು ಸುಂದರ, ಈ ಫೋಟೋ ನೋಡಿದ ನನ್ನ ತಲೆಯಲ್ಲಿ ಕರೆಂಟ್ ಪಾಸ್ ಆದಂತಾಯಿತು. ಈ ಸೀರೆ ನಿಮಗಾಗಿ ತಯಾರಿಸಲಾಗಿದೆ ಎಂದನಿಸುತ್ತದೆ. ಬೇರೆಯದ್ದೆ ಲೋಕದಿಂದ ಬಂದ ದೇವತೆ'' ಎಂದೆಲ್ಲ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರು ಶೀಘ್ರವೇ ಚಿತ್ರರಂಗಕ್ಕೆ ಬರುವ ಮುನ್ಸೂಚನೆ ಇದೆ. ಈ ಹಿಂದೆ ನಟ ಯಶ್ ಅವರು ತನ್ನ ಪತ್ನಿ ರಾಧಿಕಾರ ಟಾಲೆಂಟ್ ಹಾಳಾಗಲು ಬಿಡುವುದಿಲ್ಲ ಎಂದಿದ್ದರು. ಹೀಗಾಗಿ ನಟಿ ರಾಧಿಕಾ ಅವರು ರಿಎಂಟ್ರಿಗೆ ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ರಾಧಿಕಾ ರೀ ಎಂಟ್ರಿಗೆ ಫ್ಯಾನ್ಸ್ ವೇಟಿಂಗ್
'ಮೊಗ್ಗಿನ ಮನಸ್ಸು, ಡ್ರಾಮಾ, ದೊಡ್ಮನೆ ಹುಡುಗ, ಕೃಷ್ಣನ್ ಲವ್ ಸ್ಟೋರಿ, ಅದ್ಧೂರಿ, ಬಹದ್ಧೂರ್, ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರು ಮರಳ ಇಂಡಸ್ಟ್ರಿಗೆ ಬರುವುದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹೀಗಾಗಿ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಪ್ಡೇಟ್ ಬಗ್ಗೆ ಗಮನಿಸುತ್ತಲೇ ಇರುತ್ತಾರೆ.












Click it and Unblock the Notifications