Rachita Ram: ಆ ಎರಡು ಸೀರಿಯಲ್ ಮಿಸ್ ಮಾಡದೆ ನೋಡ್ತೀನಿ: ರಚಿತಾ ರಾಮ್
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ರಚಿತಾ ಹವಾ ಇಟ್ಟಿದ್ದಾರೆ. ಇತ್ತೀಚೆಗೆ ತಮಿಳಿನಿ "ಕೂಲಿ" ಸಿನಿಮಾದಲ್ಲಿ ರಚಿತಾ ಅವರ ಅಭಿನಯ ಕಂಡು ಜನ ಫಿದಾ ಆಗಿದ್ದಾರೆ. ಹೀಗಾಗಿ ಅವರಿಗೆ ಸಿನಿಮಾಗಳಲ್ಲಿ ಬೇಡಿಕೆಯೂ ಹೆಚ್ಚಾಗಿದೆ. ದಿನವಿಡೀ ಸಿನಿಮಾ, ಶೂಟಿಂಗ್ ಎಂದು ಬ್ಯುಸಿಯಾಗಿರುವ ರಚಿತಾ ಅವರಿಗೆ ಸೀರಿಯಲ್ ನೋಡುವ ಹವ್ಯಾಸ ಕೂಡ ಇದೆ. ಅದೇನೇ ಇರಲಿ ಆ ಎರಡು ಸೀರಿಯಲ್‌ಗಳನ್ನು ಮಿಸ್ ಮಾಡದೆ ನೋಡ್ತೀನಿ ಎಂದಿದ್ದಾರೆ ರಚಿತಾ ರಾಮ್. ಇಷ್ಟಕ್ಕೂ ಡಿಂಪಲ್‌ಗೆ ಇಷ್ಟವಾಗಿರೋ ಆ ಎರಡು ಸೀರಿಯಲ್‌ಗಳು ಯಾವುದು ಗೊತ್ತಾ?
ನಟಿ ರಚಿತಾ ರಾಮ್ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಮಿಂಚುತ್ತಿದ್ದಾರೆ. ಇದೇ ವೇಳೆ ಅವರು ತಮ್ಮ ನೆಚ್ಚಿನ ಧಾರಾವಾಹಿಗಳ ಬಗ್ಗೆ ಮಾತನಾಡಿದ್ದಾರೆ. ಅದನ್ನು ತಪ್ಪದೇ ನೋಡುತ್ತೇನೆ ಎಂದು ರಚಿತಾ ಹೇಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ "ಡಾನ್ಸ್ ಕರ್ನಾಟಕ ಡಾನ್ಸ್" ಹೊಸ ಸೀಸನ್‌ನಲ್ಲೂ ರಚಿತಾ ರಾಮ್ ಇದ್ದಾರೆ. ಇದೇ ವೇದಿಕೆಯಲ್ಲಿ ರಚಿತಾ ತಮಗೆ ಇಷ್ಟವಾದ ಎರಡು ಧಾರಾವಾಹಿಗಳ ಹೆಸರು ಬಹಿರಂಗಪಡಿಸಿದ್ದಾರೆ.

ಭವ್ಯಾ ಗೌಡ ಡ್ಯಾನ್ಸ್‌ಗೆ ರಚಿತಾ ಫಿದಾ
ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ನಟಿ ಭವ್ಯಾಗೌಡ ಕೂಡ "ಸಾಲುತಿಲ್ಲವೇ ಸಾಲುತಿಲ್ಲವೇ" ಹಾಡಿಗೆ ನೃತ್ಯ ಪ್ರದರ್ಶಿಸಿದರು. ಇದಕ್ಕೆ ನಟ ಶಿವರಾಜ್‌ಕುಮಾರ್, ರಚಿತಾ ರಾಮ್ ಸೇರಿ ಎಲ್ಲರೂ ಮೆಚ್ಚಿ, ಗೋಲ್ಡನ್ ಹ್ಯಾಟ್ ಕೊಟ್ಟಿದ್ದಾರೆ. ಈ ವೇಳೆ ರಚಿತಾ ರಾಮ್ ಭವ್ಯಾ ಗೌಡ ಅವರ ಡ್ಯಾನ್ಸ್‌ಗೆ ಫಿದಾ ಆಗಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಶಿವಣ್ಣ ಕೂಡ ರಚಿತಾ ರಾಮ್ ಅವರನ್ನ ಕನ್ನಡದ ಲೇಡಿ ಸೂಪರ್‌ಸ್ಟಾರ್ ಎಂದು ಹೊಗಳಿದ್ದಾರೆ.
ಈ ವೇಳೆ ಭವ್ಯಾ ಗೌಡ ಅವರ ಪರ್ಫಾರ್ಮೆನ್ಸ್ ಬಗ್ಗೆ ಮಾತನಾಡುತ್ತಾ, ನಾನು ನಿಮ್ಮ ಧಾರಾವಾಹಿ ನೋಡುತ್ತಿರುತ್ತೇನೆ ಎಂದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಎರಡು ಸೀರಿಯಲ್‌ಗಳು ನನ್ನ ಫೇವರೇಟ್. ಆ ಎರಡು ಧಾರಾವಾಹಿಗಳನ್ನು ಮಾತ್ರ ನಾನು ಮಿಸ್ ಮಾಡದೆ ನೋಡುತ್ತೇನೆ ಎಂದು ರಚಿತಾ ಹೇಳಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ "ಕರ್ಣ" ಹಾಗೂ "ಲಕ್ಷ್ಮೀ ನಿವಾಸ" ಸೀರಿಯಲ್‌ಗಳು ನನಗೆ ಇಷ್ಟ. ಇನ್ನು "ಲಕ್ಷ್ಮೀನಿವಾಸ" ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರ ನನಗೆ ಸಿಕ್ಕಾಪಟ್ಟೆ ಇಷ್ಟ ಎಂದಿದ್ದಾರೆ. ರಚಿತಾ ಅವರ ಈ ಮಾತಿಗೆ ಸಿದ್ದೇಗೌಡ ಪಾತ್ರಧಾರಿ ಧನಂಜಯ ಕೂಡ ನಾಚಿ ನೀರಾಗಿದ್ದಾರೆ.












Click it and Unblock the Notifications