Pushpa-2: ‘ಪುಷ್ಪ-2’ ಸಿನಿಮಾ ಕಾರಣಕ್ಕೆ ಬೆಂಗಳೂರಿನಲ್ಲಿ ಯುವಕನ ಭೀಕರ ಸಾವು
'ಪುಷ್ಪ-2' ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕನ್ನಡಿಗರ ಸಮೇತ ಇಡೀ ದೇಶದಲ್ಲಿ 'ಪುಷ್ಪ-2' ಸಿನಿಮಾ ನೋಡಲು ಜನರು ಓಡೋಡಿ ಬಂದಿದ್ದರು. ಆದರೆ ಕೇವಲ ಒಂದು ಸಿನಿಮಾಗಾಗಿ ಜೀವ ಕಳೆದುಕೊಂಡ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ 'ಪುಷ್ಪ-2' ಸಿನಿಮಾ ಹೀನಾಯವಾಗಿ ಸೋತಿದೆ & 'ಪುಷ್ಪ-2' ಸಿನಿಮಾ ಮೊದಲ ದಿನವೇ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ ಎಂಬ ಚರ್ಚೆಗಳ ನಡುವೆ ಭೀಕರ ಘಟನೆಯೊಂದು ಸಂಭವಿಸಿದೆ. 'ಪುಷ್ಪ-2' ಸಿನಿಮಾ ಕಾರಣಕ್ಕೆ ಯುವಕನ ಭೀಕರ ಸಾ*...
ಹೌದು, 'ಪುಷ್ಪ-2' ಸಿನಿಮಾ ಮೊದಲ ದಿನವೇ ಮಕಾಡೆ ಮಲಗಿದೆ & ಹಲವು ಥಿಯೇಟರ್ ಸ್ಕ್ರೀನ್‌ಗಳು ಖಾಲಿ ಖಾಲಿ ಹೊಡೆದಿವೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಈ ಎಲ್ಲಾ ಗಲಾಟೆ & ಆರೋಪಗಳ ನಡುವೆ ಹಲವರ ಪ್ರಾಣ ಕೂಡ 'ಪುಷ್ಪ-2' ಸಿನಿಮಾ ಕಾರಣಕ್ಕೆ ಹೋಗಿದೆ ಎಂಬ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಅದರಲ್ಲೂ, 'ಪುಷ್ಪ-2' ಸಿನಿಮಾ ಕಾರಣಕ್ಕೆ ಬೆಂಗಳೂರಿನಲ್ಲಿ ಯುವಕನ ಭೀಕರ ಸಾವು ಎಂಬ ಮತ್ತೊಂದು ಆರೋಪ ಇದೀಗ ಬೆಂಗಳೂರಿನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ! ಹಾಗಾದ್ರೆ ಘಟನೆಯಲ್ಲಿ ಆಗಿದ್ದೇನು?

'ಪುಷ್ಪ-2' ಸಿನಿಮಾ ಕಾರಣಕ್ಕೆ ಯುವಕ ಸಾವು?
ಕನ್ನಡ ಸಿನಿಮಾ ಬಗ್ಗೆ 'ಪುಷ್ಪ-2' ಸಿನಿಮಾ ನಿರ್ದೇಶಕ ಬಾಯಿಗೆ ಬಂದ ರೀತಿಯೇ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇಂತಹ ಆರೋಪಗಳ ನಡುವೆ ಈ ಸಿನಿಮಾ ನೋಡೋಕೆ ಹೋದಾಗ ಹಲವು ದುರಂತಗಳು ಸಂಭವಿಸಿವೆ ಎಂಬ ಆರೋಪ ಈಗ ಹೆಚ್ಚಾಗ್ತಿದೆ. ಇಂತಹ ಸಮಯದಲ್ಲೇ 'ಪುಷ್ಪ-2' ಸಿನ್ಮಾ ನೋಡಲು ಓಡೋಡಿ ಹೋಗ್ತಾ ಇದ್ದ ಯುವಕನಿಗೆ ರೈಲು ಢಿಕ್ಕಿಯಾಗಿ ಭೀಕರವಾಗಿ ಜೀವ ಬಿಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಬಗ್ಗೆ 'ಟೈಮ್ಸ್ ಆಫ್ ಇಂಡಿಯಾ' ವರದಿ ಪ್ರಕಟಿಸಿದೆ.
'ಪುಷ್ಪ-2' ನೋಡಲು ಓಡೋಡಿ ಹೋಗುವಾಗ...
'ಪುಷ್ಪ-2' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೊಂದಿದ್ದ 19 ವರ್ಷದ ಆಂಧ್ರ ಪ್ರದೇಶದ ಶ್ರೀಕಾಕುಳಂ ಮೂಲದ ಪ್ರವೀಣ್ ತಮಾಚಲಂ, ಸಿನಿಮಾ ನೋಡಲು ಓಡೋಡಿ ಹೋಗುತ್ತಿದ್ದ ಎನ್ನಲಾಗಿದೆ. ಆದರೆ ಹೀಗೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಮೂಲದ ಪ್ರವೀಣ್ ತಮಾಚಲಂ 'ಪುಷ್ಪ-2' ಸಿನಿಮಾ ನೋಡಲು ಓಡೋಡಿ ಹೋಗುವಾಗಲೇ ವೇಗವಾಗಿ ಬಂದ ರೈಲು ಢಿಕ್ಕಿಯಾಗಿದೆ ಎನ್ನಾಗಿದೆ.
ದೊಡ್ಡಬಳ್ಳಾಪುರ ಬಳಿ ಈ ಘಟನೆಯು ಸಂಭವಿಸಿದೆ ಎಂದು ಆರೋಪಿಸಲಾಗಿದ್ದು. ಐಟಿಐ ಡಿಪ್ಲೊಮಾ ಪಡೆದಿದ್ದ ಮೃತ ಪ್ರವೀಣ್, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದ್ರೆ ಈಗ ಸಿನಿಮಾ ನೋಡಲು ಹೋಗುವಾಗ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಈ ಆರೋಪ ದೊಡ್ಡ ಸಂಚಲನ ಸೃಷ್ಟಿಸಿದ್ದು, ಎಲ್ಲೆಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ.
ಮೃತ ಯುವಕರ ಸ್ನೇಹಿತರು ಎಲ್ಲಿ?
ಯುವಕ ಮೃತಪಟ್ಟಿರುವ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಇದೀಗ ತನಿಖೆ ಆರಂಭ ಮಾಡಿದ್ದಾರೆ. ಇನ್ನು ಮೃತ ಯುವಕ ಇಬ್ಬರು ಸ್ನೇಹಿತರ ಜೊತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಇದೀಗ ಮೃತ ಯುವಕನ ಸ್ನೇಹಿತರಿಗೆ ಹುಡುಕಾಟ ನಡೆದಿದೆ. ಪೊಲೀಸರು ಈ ಘಟನೆ ಬಗ್ಗೆ ಎಲ್ಲಾ ಆಂಗಲ್‌ನಲ್ಲೂ ತನಿಖೆ ನಡೆಸುತ್ತಿದ್ದಾರೆ.
ಅಲ್ಲು ಅರ್ಜುನ್ ನಿವೃತ್ತಿ ಗ್ಯಾರಂಟಿ?
'ಪುಷ್ಪ-2' ಹಂಗಿರುತ್ತೆ... 'ಪುಷ್ಪ-2' ಹಿಂಗಿರುತ್ತೆ... ಅಂತಾ ಬರೀ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ 'ಪುಷ್ಪ-2' ಸಿನಿಮಾ ಮಾತ್ರ ಹೆಂಗೆಂಗೋ ಇದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿ ಒದ್ದಾಡುತ್ತಿದೆ, ಬರೀ ಬಿಲ್ಡಪ್ ತೋರಿಸಿ ಈ ಸಿನಿಮಾ ಮಾಡಲಾಗಿದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. ಹೀಗೆ ಹೀನಾಯ ಸೋಲು ಕಂಡ ನಂತರ ಅಲ್ಲು ಅರ್ಜುನ್ ಒದ್ದಾಡಿ ಹೋಗಿದ್ದು, ಭವಿಷ್ಯದ ಬಗ್ಗೆ ಕೂಡ ನಟ ಅಲ್ಲು ಅರ್ಜುನ್‌ಗೆ ಚಿಂತೆ ಶುರುವಾಗಿದೆ. ಈ ಸಮಯದಲ್ಲೇ, ಅಲ್ಲು ಅರ್ಜುನ್ ತೆಲುಗು ಸಿನಿಮಾ ರಂಗದಿಂದ ನಿವೃತ್ತಿಗಾಗಿ ಮಹತ್ವದ ಒತ್ತಾಯ ಕೂಡ ಕೇಳಿ ಬಂದಿದೆ.












Click it and Unblock the Notifications