Puneeth Rajkumar: ಪುನೀತ್ ರಾಜ್‌ಕುಮಾರ್ ಸಾಯುವ ಹಿಂದಿನ ರಾತ್ರಿ ನಡೆದಿತ್ತು ಈ ಘಟನೆ!
ಪುನೀತ್ ರಾಜ್‌ಕುಮಾರ್ & ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್ ನಮ್ಮನ್ನು ಅಗಲಿ ಈಗ ಬರೋಬ್ಬರಿ 3 ವರ್ಷ ಕಳೆದು ಹೋಗಿದೆ. ಪುನೀತ್ ರಾಜ್ ಕುಮಾರ್ ಎಷ್ಟು ಜನರನ್ನ ಸಂಪಾದನೆ ಮಾಡಿದ್ದರು ಮತ್ತು ಎಷ್ಟು ಪುಣ್ಯದ ಕೆಲಸ ಮಾಡಿದ್ದರು ಅನ್ನೋದು ಅವರು ಜೀವಬಿಟ್ಟ ನಂತರವೇ ಜಗತ್ತಿಗೆ ಗೊತ್ತಾಗಿದ್ದು. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಪುನೀತ್ ರಾಜ್‌ಕುಮಾರ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗ ಪುನೀತ್ ರಾಜ್‌ಕುಮಾರ್ ಸಾಯುವ ಹಿಂದಿನ ರಾತ್ರಿ ನಡೆದಿತ್ತು ಈ ಘಟನೆ!
ಪವರ್ ಸ್ಟಾರ್ ಪುನೀತ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅಪ್ಪು ಅಂದ್ರೆ ಈಗಿನ್ನು ಹುಟ್ಟಿರುವ ಮಗುವಿನಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಅಪ್ಪು ಇಷ್ಟ. ಯಾಕೆ ಅಂದ್ರೆ ಬೆಟ್ಟದ ಹೂವು ಸಿನಿಮಾದಿಂದ ಹಿಡಿದು ಗಂಧದ ಗುಡಿ ತನಕ ಈ ನಟನ ಸಾಧನೆಗೆ ಈ ಭೂಮಿ ಮೇಲೆ ಯಾರೂ ಸಾಟಿ ಇಲ್ಲ. ಹೀಗಿದ್ದಾಗಲೇ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನ ಅಂದರೆ, ಅವರ ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿ 3 ವರ್ಷ ಕಳೆದಿದೆ. ಇಂತಹ ಸಮಯದಲ್ಲೇ, ಸರಿಯಾಗಿ 3 ವರ್ಷಗಳ ಹಿಂದೆ ಅಂದ್ರೆ ಪುನೀತ್ ರಾಜ್‌ಕುಮಾರ್ ಅವರು ಸಾಯುವ ಹಿಂದಿನ ದಿನದ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಲು ಮುಂದೆ ಓದಿ.

ಪುನೀತ್ ರಾಜ್‌ಕುಮಾರ್ ಕೊನೆಯ ವಿಡಿಯೋ...
ಅಪ್ಪು... ಅಪ್ಪು... ಅಪ್ಪು... ಇದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳ ಬಾಯಲ್ಲಿ ಬರುವ ಏಕೈಕ ಪದ ಎನ್ನಬಹುದು. ಯಾಕಂದ್ರೆ ದಿವಂಗತ ಪುನೀತ್ ಅವರನ್ನು ಫ್ಯಾನ್ಸ್ ಅಷ್ಟು ಪ್ರೀತಿ ಮಾಡ್ತಾರೆ. ಅಪ್ಪು ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಾವನ್ನ ಇಡೀ ಭಾರತ ಆಘಾತದಿಂದ ಸ್ವೀಕಾರ ಮಾಡಿತ್ತು.
ಅದರಲ್ಲೂ ಅಪ್ಪು ಸರ್ ಮೃತಪಟ್ಟ ದಿನ ಇಡೀ ಕನ್ನಡ ನಾಡು ನೋವಿನಲ್ಲಿ ನರಳಿತ್ತು. ಮಹಾತ್ಮ ಗಾಂಧಿಜೀ ಬಳಿಕ ಪವರ್ ಸ್ಟಾರ್ ಪುನೀತ್ ಅವರ ಅಂತಿಮ ದರ್ಶನಕ್ಕೆ ಅತಿ ಹೆಚ್ಚು ಜನ ಬಂದಿದ್ದರು ಎನ್ನುವ ದಾಖಲೆ ಕೂಡ ಸಂಚಲನ ಸೃಷ್ಟಿಸಿತ್ತು. ಹೀಗಿದ್ದಾಗ ಅಪ್ಪು ಅವರ ಕೊನೆಯ ವಿಡಿಯೋ ವೈರಲ್ ಆಗುತ್ತಿದೆ... ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ವಿಡಿಯೋ ನೋಡಿದ ಅಭಿಮಾನಿಗಳು, ಮತ್ತೆ ವಾಪಸ್ ಬಂದು ಬಿಡಿ ಬಾಸ್.. ಅಂತಾ ಕಣ್ಣೀರು ಹಾಕುತ್ತಿದ್ದಾರೆ.
ಅಪ್ಪು ಕಳೆದು ಹೋಗಿ 3 ವರ್ಷ...
ಭಾರತೀಯರಿಗೆಲ್ಲ ರಾಜ್‌ಕುಮಾರ್ ಹೇಗೋ ಅದೇ ರೀತಿ ಪುನೀತ್ ರಾಜ್‌ಕುಮಾರ್ ಕೂಡ ಹೃದಯದ 'ಅಪಧಮನಿ & ಅಭಿಧಮನಿ' ಆಗಿದ್ದಾರೆ. ಇಂದಿಗೂ ಭಾರತದಲ್ಲಿ ಮೂಲೆ ಮೂಲೆಯಲ್ಲೂ ಡಾ. ರಾಜ್ & ಪುನೀತ್ ರಾಜ್ ಇಬ್ಬರೂ ಚಿರಪರಿಚಿತ ಆಗೋಗಿದ್ದಾರೆ. ಹೀಗಿದ್ದಾಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದು, ಪುನೀತ್ ರಾಜ್‌ಕುಮಾರ್ ಅವರು ಸಾಯುವ 12 ಗಂಟೆಗಳ ಹಿಂದೆ ಈ ವಿಡಿಯೋನ ರೆಕಾರ್ಡ್ ಮಾಡಲಾಗಿತ್ತು. ಹೀಗಾಗಿ ಫ್ಯಾನ್ಸ್ ಈ ವಿಡಿಯೋ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇಂದಿಗೆ ಪುನೀತ್ ರಾಜ್‌ಕುಮಾರ್ ಅವರು ಇಹಲೋಕ ತ್ಯಜಿಸಿ 3 ವರ್ಷಗಳೇ ಕಳೆದು ಹೋಗಿದೆ...











Click it and Unblock the Notifications