ಆತನಿಂದ ದೈಹಿಕ ಕಿರುಕುಳ, ಆ ಗಾಯ ಈಗಲೂ ಇದೆ: ಕರಾಳ ಸತ್ಯ ಬಾಯ್ಬಿಟ್ಟ 'ನಿನ್ನಿಂದಲೇ' ನಟಿ
ಇಂದು ನಟ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಆದರೆ, ಅಪ್ಪು ಜೊತೆ ತೆರೆ ಹಂಚಿಕೊಂಡಿದ್ದ ಖ್ಯಾತ ನಟಿಯ ಬದುಕಲ್ಲಿ ಘೋರ ದುರಂತವೇ ಸಂಭವಿಸಿದೆ. ಹಲವು ವರ್ಷಗಳಿಂದ ಮುಚ್ಚಿಟ್ಟಿದ್ದ ಈ ಘಟನೆಯನ್ನು ನಟಿ ಈಗ ರಿವೀಲ್ ಮಾಡಿದ್ದಾರೆ. ತಮ್ಮ ಬದುಕಿನಲ್ಲಿ ಕಂಡ ಕರಾಳ ದಿನಗಳ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿರುವುದು ಎಲ್ಲರಿಗೂ ಶಾಕ್ ಕೊಟ್ಟಿದೆ. ಮೂಲತಃ ಕರ್ನಾಟಕದವರೇ ಆದ ಈ ನಟಿಯ ಬದುಕಲ್ಲಿ ಬರಸಿಡಿಲು ಬಡಿದು ಹೋಗಿದೆ. ಇಷ್ಟಕ್ಕೂ ಆ ನಟಿ ಯಾರು ಗೊತ್ತಾ?
ನಟ ಪುನೀತ್ ರಾಜ್‌ಕುಮಾರ್ ಅವರ "ನಿನ್ನಿಂದಲೇ" ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಎರಿಕಾ ಫೆರ್ನಾಂಡಿಸ್ (Erica Fernandes) ಅವರ ಬದುಕಿನಲ್ಲಿ ಕಹಿ ಘಟನೆಯೊಂದು ನಡೆದು ಹೋಗಿದೆ. ನಿನ್ನಿಂದಲೇ ಸಿನಿಮಾ ಬಳಿಕ ಎರಿಕಾ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಬುಗುರಿ ಚಿತ್ರದಲ್ಲೂ ನಟಿಸಿದ್ದರು. ಆದರೆ ಹಲವು ವರ್ಷಗಳಿಂದ ಇವರು ತೆರೆಯಿಂದ ದೂರ ಸರಿದಿದ್ದರು. ಇದಕ್ಕೆ ಕಾರಣವನ್ನೂ ಅವರು ಈಗ ಬಹಿರಂಗಪಡಿಸಿದ್ದಾರೆ.

"ನಟಿಯಾದ ಬಳಿಕ ನಾನು ವ್ಯಕ್ತಿಯೊಬ್ಬರ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದೆ. ಎಲ್ಲವೂ ಮೊದಲಿಗೆ ಚೆನ್ನಾಗಿತ್ತು. ಇಬ್ಬರೂ ಆತ್ಮೀಯವಾಗಿ ಇರುತ್ತಿದ್ದೆವು. ಆದರೆ, ಉದ್ಯಮಿಯಾಗಿದ್ದ ಆತ ನನ್ನ ಮೇಲೆ ಹಿಡಿತ ಸಾಧಿಸಲು ಹೊರಟಿದ್ದ. ನಾನು ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿಯಬೇಕು ಎಂದು ಒತ್ತಡ ಹಾಕುತ್ತಿದ್ದ. ಇದು ಕೊನೆಗೆ ತಾರಕಕ್ಕೇರಿ ನನ್ನ ಮೇಲೆ ದೈಹಿಕವಾಗಿ ನಿಂದಿಸಿ ಕಿರುಕುಳ ನೀಡುವ ಹಂತಕ್ಕೆ ತಲುಪಿತ್ತು. ಆತ ನನಗೆ ದೈಹಿಕ ಹಿಂಸೆಯೂ ನೀಡಿದ್ದ" ಎಂದು ಎರಿಕಾ ಶಾಕಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
"ಬಳಿಕ ಅವನಿಂದ ನಾನು ದೂರವಾದೆ. ಆದರೆ ಈ ಘಟನೆಗಳಿಂದ ಆಗಿರುವ ಗಾಯ ಈಗಲೂ ನನ್ನಲ್ಲಿ ಹಾಗೆಯೇ ಉಳಿದಿದೆ. ಆ ನೋವು, ಆಘಾತದಿಂದ ಹೊರಬರಲು ಕನಿಷ್ಠ ಎರಡು ವರ್ಷ ಬೇಕಾಯಿತು. ಈಗಲೂ ಯಾವುದಾದರೂ ಸಿನಿಮಾಗಳಲ್ಲಿ ದೈಹಿಕ ಕಿರುಕುಳ ನೀಡುವುದು, ಪುರುಷನೊಬ್ಬ ಮಹಿಳೆಯ ಮೇಲೆ ದೌರ್ಜನ್ಯ ಎಸಗುವ ದೃಶ್ಯ ನೋಡಿದರೆ ನನಗೆ ಆ ದಿನಗಳೇ ನೆನಪಾಗುತ್ತೆ. ಆದರೆ ಬಳಿಕ ಅಂತಹ ಸಂಬಂಧದಲ್ಲಿ ಮುಂದುವರಿಯಲು ಸಾಧ್ಯವಾಗದ ಕಾರಣ ನಾನು ಇಷ್ಟು ದಿನ ಸಿಂಗಲ್ ಆಗಿಯೇ ಇದ್ದೇನೆ" ಎಂದಿದ್ದಾರೆ.

"ಈ ವಿಚಾರವನ್ನು ನಾನು ಎಲ್ಲಿಯೂ ಪ್ರಸ್ತಾಪಿಸಲು ಬಯಸಲಿಲ್ಲ. ಏಕೆಂದರೆ, ನೀವು ನಟಿಯಾದಾಗ ಎಲ್ಲವೂ ದೊಡ್ಡ ಸುದ್ದಿಯಾಗಿಬಿಡುತ್ತೆ. ಒಂದು ವೇಳೆ ನಾನು ಪೊಲೀಸರ ಬಳಿಗೆ ಹೋಗಿದ್ದರೆ ಅದು ಮಾಧ್ಯಮಗಳಲ್ಲಿ ಹರಡುತ್ತಿತ್ತು. ಅಲ್ಲದೆ ನನಗೆ ಈ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೂ ಅಷ್ಟಾಗಿ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಮಹಿಳೆಯರು ಮಾತನಾಡುವುದಿಲ್ಲ. ಏಕೆಂದರೆ ಏನಾದರೂ ಅವರನ್ನೇ ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲಾಗುತ್ತೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಜನಿಸಿದ ಎರಿಕಾ ಅವರು ಬಳಿಕ ಮುಂಬೈನಲ್ಲಿ ಸೆಟಲ್ ಆಗಿದ್ದರು. ಮೊದಲಿಗೆ ಕಿರುತೆರೆಯಲ್ಲಿ ಮಿಂಚುತ್ತಾ ಸಿನಿಮಾಗಳಲ್ಲೂ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ, ಸ್ವಲ್ಪ ಬ್ರೇಕ್ ಪಡೆಯಲು ದುಬೈಗೆ ಶಿಫ್ಟ್ ಆಗಿದ್ದರು. ಇದೀಗ ಅವರು ಮತ್ತೆ ನಟನೆ ಹಾಗೂ ಮಾಡಲಿಂಗ್ ಕಡೆಗೆ ಮುಖ ಮಾಡಿದ್ದಾರೆ.












Click it and Unblock the Notifications