ಮದಗಜ ಮಹೇಶ್ ದಾರಿ ತಪ್ಪಿಸಿದ್ರು: ದರ್ಶನ್ ಪರ ಮಾತನಾಡಿದ ನಿರ್ದೇಶಕ ಮಹೇಶ್‌ಗೆ ಸಂಕಷ್ಟ?

ನಟ ದರ್ಶನ್ & ನಿರ್ಮಾಪಕ ಉಮಾಪತಿ ಜಗಳದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯೇ ಫುಲ್ ಶೇಕ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಸಮಯದಲ್ಲಿ ದರ್ಶನ್ ಅವರ ಪರ ನಿಂತಿರುವ ನಿರ್ದೇಶಕರಾದ ತರುಣ್ ಸುಧೀರ್ ಹಾಗೂ ಮದಗಜ ಮಹೇಶ್‌ಗೆ ಸಂಕಷ್ಟ ಎದುರಾಯ್ತಾ? ಈ ಇಬ್ಬರ ಬಗ್ಗೆ ಈಗ ನಿರ್ಮಾಪಕ ಉಮಾಪತಿ ಹೇಳಿದ್ದೇನು?

ನಿರ್ಮಾಪಕ ಉಮಾಪತಿ ವಿರುದ್ಧ ನಿನ್ನೆ ಗರಂ ಆಗಿದ್ದ ದರ್ಶನ್ ನೇರವಾಗಿ ವಾಗ್ದಾಳಿ ನಡೆಸಿದ್ದರು 'ಅಯ್ಯೋ ತಗಡೇ ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂತಹ ಒಳ್ಳೆಯ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?' ಅಂತ ದರ್ಶನ್ ಗುಡುಗಿದ್ರು ಹೀಗೆ ಕಾಟೇರ ಕಥೆ ಬಿಟ್ಟುಕೊಟ್ಟಿದ್ದು ಯಾಕೆ? ಅಂತಾ ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ದರು ದರ್ಶನ್. ಜೊತೆಗೇ, ಮತ್ತಷ್ಟು ವಾಗ್ದಾಳಿ ನಡೆಸಿದ್ದರು ನಟ ದರ್ಶನ್. 'ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಯಾಕೆ ಪದೇ ಪದೇ ನಮ್ಮ ಹತ್ರಾನೆ...' ಹಿಂಗೆಲ್ಲಾ ಮಾತು ಆಡಿದ್ದರು ಚಾಲೆಂಜಿಂಗ್ ಸ್ಟಾರ್. ಇದಕ್ಕೆ ಸೂಕ್ತ ಉತ್ತರ ನೀಡಿರುವ ಉಮಾಪತಿ, ಇದೀಗ ನಿರ್ದೇಶಕ ತರುಣ್ ಸುಧೀರ್ & ಮದಗಜ ಮಹೇಶ್ ವಿರುದ್ಧವೂ ರೊಚ್ಚಿಗೆದ್ದಿದ್ದಾರೆ.

Producer Umapathy Srinivas Gowda Said This About Director Madagaja Mahesh & Tharun Sudhir

ಅವರೆಲ್ಲರೂ ಮಹಾತ್ಮರು ಬಿಡಿ ಸಾರ್!

ಖಾಸಗಿ ಟಿವಿ ಚಾನೆಲ್‌ಗೆ ಸಂದರ್ಶನ ನೀಡುವಾಗ ನಿರ್ಮಾಪಕ ಉಮಾಪತಿ ಅವರು ಸಿಟ್ಟನ್ನ ಹೊರಹಾಕಿದ್ದಾರೆ. ಅದ್ರಲ್ಲೂ ನಿನ್ನೆ 'ಕಾಟೇರ' 50 ದಿನದ ಕಾರ್ಯಕ್ರಮದಲ್ಲಿ ಮಾತನಾಡಿ ದರ್ಶನ್ ಅವರ ಪರ ನಿಂತಿದ್ದ ಮದಗಜ ಮಹೇಶ್ ಹಾಗೂ ತರುಣ್ ಸುಧೀರ್ ವಿರುದ್ಧವೂ ಈಗ ಗರಂ ಆಗಿದ್ದಾರೆ ಉಮಾಪತಿ. ತಮ್ಮ ವಿರುದ್ಧ ಮದಗಜ ಮಹೇಶ್ & ತರುಣ್ ಸುಧೀರ್ ನೀಡಿರುವ ಹೇಳಿಕೆಗೂ ಆಕ್ರೋಶ ಹೊರಹಾಕಿದ್ದಾರೆ ನಿರ್ಮಾಪಕ ಉಮಾಪತಿ.

ಅವರೆಲ್ಲ ದೊಡ್ಡವರು ಬಿಡಿ, ಒಬ್ಬರು ದೊಡ್ಡ ನಿರ್ದೇಶಕ (ತರುಣ್ ಸುಧೀರ್) ಮತ್ತೊಬ್ಬರು ಮಹಾನ್ ಪಿಆರ್‌ಒ (ಮದಗಜ ಮಹೇಶ್) ಎಂದು ಹೇಳಿದ್ದಾರೆ, ನಿರ್ಮಾಪಕ ಉಮಾಪತಿ. ಅಲ್ಲದೆ ಈ ಸಮಯದಲ್ಲೇ ಮದಗಜ ಮಹೇಶ್, ಆಗ ನಮ್ಮನ್ನ ದಾರಿ ತಪ್ಪಿಸಿದ್ದಾರೆ ಅಂತಾ ಕೂಡ ಆರೋಪಿಸಿದರು. ಈ ಮೂಲಕ ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ನಡುವಿನ ಕಿತ್ತಾಟ ದೊಡ್ಡ ತಿರುವು ಪಡೆದಿದೆ.

ಎಲ್ಲರಿಗೂ ಬೀಳುವ ಟೈಂ ಬರುತ್ತದೆ!

ಹಾಗೇ ದಾಸ ದರ್ಶನ್ ಮಾತಿಗೆ ಉತ್ತರ ನೀಡಿದ್ದ ನಿರ್ಮಾಪಕ ಉಮಾಪತಿ, ಸಿನಿಮಾ ಕ್ಷೇತ್ರದಲ್ಲಿ ಮೆರೆದು ನಿಂತವರು ಮರೆಯಾಗಿದ್ದಾರೆ. ಮೆರೆದವರು ಈಗ ಎಲ್ಲಿದ್ದಾರೆ ಹೇಳಿ ಯಾರೂ ಇಲ್ಲಿಯೇ ಗೂಟ ಹೊಡೆದುಕೊಂಡು ಇರಲ್ಲ, ಎಲ್ಲರಿಗೂ ಬೀಳುವ ಟೈಂ ಬರುತ್ತದೆ ಅಂತಾನು ಹೇಳಿದ್ದಾರೆ ಉಮಾಪತಿ. ಈ ಮೂಲಕ ದರ್ಶನ್ ತಮ್ಮನ್ನು ತಗಡು ಅಂತಾ ಕರೆದು, ಗುಮ್ಮಿದ್ದೀನಿ ಅಂತಲೂ ಹೇಳಿದ್ದಕ್ಕೆ ಉಮಾಪತಿ ಪರೋಕ್ಷ ಉತ್ತರ ನೀಡಿದ್ದಾರೆ. ಈ ಜಗಳ ಮತ್ತಷ್ಟು ದೊಡ್ಡದಾಗುತ್ತಿದ್ದು, ಇಬ್ಬರ ಜಗಳದ ನಡುವೆ ಮದಗಜ ಮಹೇಶ್ ಹಾಗೂ ತರುಣ್ ಸುಧೀರ್ ಕೂಡ ನಲುಗಿದ್ದಾರೆ.

Producer Umapathy Srinivas Gowda Said This About Director Madagaja Mahesh & Tharun Sudhir

ನನ್ನ ಗುಮ್ಮಿದ್ದೀನಿ ಅನ್ನೋರು ಯಾರು?

ಹಾಗೇ ಉಮಾಪತಿ ಶ್ರೀನಿವಾಸ್ ಗೌಡ, ತಮ್ಮ ವಿರುದ್ಧ ಮಾತನಾಡುತ್ತಿರುವವರಿಗೆ ಕೂಡ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನನ್ನ ಗುಮ್ಮಿದ್ದೀನಿ ಅನ್ನೋರು ಯಾರು? ಅವರು ಗುಮ್ಮಿದರೆ ನಾವು ಸುಮ್ಮನೆ ಇರ್ತೀವಾ? ನನ್ನ ಯಾರೂ ಏನೂ ಮಾಡೋಕೆ ಆಗಲ್ಲ, ನಾನು ಒಂದು ಸಮುದಾಯ ನಾಯಕನಾಗಿ ಬೆಳೆದಿದ್ದೀನಿ ಅಂದ್ರೆ ಅದು ನನ್ನ ಸಾಮರ್ಥ್ಯ ಅಂತ ಅವ್ರು ಅರ್ಥ ಮಾಡಿಕೊಂಡ್ರೆ ಒಳ್ಳೆಯದು. ಉಮಾಪತಿ ಗಟ್ಟಿಯಾಗಿ ಇದ್ದಾರೆ ಅನ್ನೋದನ್ನೂ, ಅವರು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ ನಿರ್ಮಾಪಕ ಉಮಾಪತಿ. ಈ ಮೂಲಕ ನಟ ದರ್ಶನ್‌ಗೆ ಪರೋಕ್ಷ ತಿರುಗೇಟನ್ನೂ ನೀಡಿದ್ದಾರೆ ನಿರ್ಮಾಪಕ ಉಮಾಪತಿ.

ಹೀಗೆ ಇಬ್ಬರ ಜಗಳ ದೊಡ್ಡದಾಗುತ್ತಿದ್ದು, ಅದರಲ್ಲೂ ಮದಗಜ ನಿರ್ದೇಶಕ ಮಹೇಶ್ ನಿನ್ನೆ ಉಮಾಪತಿ ಶ್ರೀನಿವಾಸ್ ವಿರುದ್ಧ ನೀಡಿದ್ದ ಹೇಳಿಕೆ ದೊಡ್ಡ ತಿರುವು ಪಡೆದಿದೆ. ಈ ಕುರಿತು ಇದೀಗ ನಿರ್ಮಾಪಕ ಉಮಾಪತಿ ಅವರು ಖಡಕ್ ತಿರುಗೇಟು ನೀಡಿದ್ದು, ನಟ ದರ್ಶನ್ & ಉಮಾಪತಿ ನಡುವಿನ ಟಾಕ್ ಫೈಟ್ ಇನ್ನೂ ಯಾವ ಹಂತಕ್ಕೆ ಹೋಗಲಿದೆ ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+