ನನ್ನೊಂದಿಗೆ ಸಂಬಂಧ, ಬೇರೊಬ್ಬನ ಜೊತೆ ಸಂಸಾರ: ನಟಿಯ ಆರೋಪಗಳಿಗೆ ನಿರ್ಮಾಪಕ ಸ್ಪಷ್ಟನೆ
ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯೊಬ್ಬರು ನಿರ್ಮಾಪಕ ಅರವಿಂದ್ ರೆಡ್ಡಿ ಲೈಂಗಿಕ ಕಿರುಕುಳ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಟಿ ದೂರಿನ ಮೇರೆಗೆ ಅರವಿಂದ್ ರೆಡ್ಡಿ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಬಳಿಕ ಜಾಮೀನಿನ ಮೇಲೆ ಅವರು ಹೊರಬಂದಿದ್ದು, ಅಸಲಿ ವಿಚಾರವೇನು ಎಂದು ರಿವೀಲ್ ಮಾಡಿದ್ದಾರೆ. ಅಲ್ಲದೆ ನಟಿಯ ಆರೋಪಗಳಿಗೆ ಸ್ಪಷ್ಟನೆಯೂ ನೀಡಿದ್ದಾರೆ. ನಟಿ ಹಾಗೂ ನಾನು ಲಿವ್-ಇನ್-ರಿಲೇಷನ್‌ಶಿಪ್‌ನಲ್ಲಿದ್ದೆವು, ಆದರೂ ಆಕೆ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದರು ಎಂದಿದ್ದಾರೆ. ನನ್ನ ಜೊತೆ ಇದ್ದಾಗಲೇ ಆ ನಟಿಗೆ ಬೇರೆಯವರ ಜೊತೆ ನಂಟು ಬೆಳೆದಿತ್ತು ಎಂದಿದ್ದಾರೆ.
'2023ರಲ್ಲಿ ನನಗೆ ಆ ನಟಿಯ ಪರಿಚಯವಾಗಿತ್ತು. ಬಳಿಕ ನನಗೆ ಹತ್ತಿರವಾದರು. ನಂತರ ಇಬ್ಬರೂ ಲಿವ್-ಇನ್-ರಿಲೇಷನ್‌ಶಿಪ್‌ನಲ್ಲಿ ಇದ್ದೆವು. ಇದರ ನಡುವೆ ಬೇರೆ ಹುಡುಗನ ಕಡೆ ಅವರ ಗಮನ ವಾಲಿತ್ತು. ಆತ ಮನೆಗೆ ಬಂದು ಹೋಗುವ ವಿಚಾರ ಕೂಡ ತಿಳಿಯಿತು. ಅದನ್ನು ಕೇಳಿದ್ದಕ್ಕೆ ನಾನು ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ ಎಂದಿದ್ದರು. ಬಳಿಕ ನಾವು ದೂರ ಆದೆವು' ಎಂದು ವಿವರಿಸಿದ್ದಾರೆ.

'ದುಬಾರಿ ಪೊರ್ಶೆ ಕಾರು ಕೊಡಿಸಿದ್ದೆ'
'ಆಕೆ ಆರೋಪ ಮಾಡಿದಂತೆ ತಪ್ಪಾಗಿ ಬಿಂಬಿಸುವ ಯಾವುದೇ ಫೋಟೋ ನನ್ನ ಬಳಿ ಇಲ್ಲ. ನಾವು ರಿಲೇಷನ್ಶಿಪ್ನಲ್ಲಿದ್ದಾಗ ತೆಗೆದುಕೊಂಡ ಫೋಟೋಗಳಷ್ಟೇ. ಇದರಲ್ಲಿ ಅಶ್ಲೀಲ ಎನ್ನುವಂತಹ ಫೋಟೋ ಯಾವುದೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 2024ರಲ್ಲೇ ಆಕೆಗೆ ನಾನು ದುಬಾರಿ ಪೊರ್ಶೆ ಕಾರು ಕೊಡಿಸಿದ್ದೆ. ಅಲ್ಲದೆ ಆಕೆಯ ತಮ್ಮನ ಮದುವೆಗೆ, ಮನೆ ಗೃಹಪ್ರವೇಶಕ್ಕೂ ಸಹಾಯ ಮಾಡಿದ್ದೆ. ಈಗ ನೋಡಿದರೆ ನನ್ನ ಮೇಲೆಯೇ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದಿದ್ದಾರೆ.
'ಆಕೆ ಹೆಸರಲ್ಲಿ ಸೈಟ್ ಕೂಡ ರಿಜಿಸ್ಟರ್ ಮಾಡಿಸಿದ್ದೀನಿ. ಆದರೆ ಮತ್ತೆ ಬರ್ತೀನಿ ಅಂತ ಹೋದವಳು ಮತ್ತೆ ಬರಲೇ ಇಲ್ಲ ಎಂದಿದ್ದಾರೆ. 2024ರಲ್ಲೇ ಮದುವೆ ಆಗಬೇಕು ಅಂದುಕೊಂಡಿದ್ವಿ. ಆದರೆ ಆಗಲಿಲ್ಲ, ಬೇರೆಯವನ ಜೊತೆ ಸಂಸಾರ ಮಾಡುತ್ತಿದ್ದ ವಿಚಾರ ತಿಳಿದು ದೂರ ಆದೆ ಎಂದಿದ್ದಾರೆ. ನನಗೆ ಪೊಲೀಸರು ನೋಟಿಸ್ ನೀಡಿದಾಗ ನಾನು ಶ್ರೀಲಂಕಾದಲ್ಲಿದ್ದೆ. ವಾಪಸ್ ಬಂದಾಗ ಅವರು ನನ್ನ ವಶಕ್ಕೆ ಪಡೆದರು. ನಂತರ ಜಾಮೀನು ಸಿಕ್ಕಿದೆ. ಅವರಿಗೆ ಎಲ್ಲವನ್ನೂ ವಿವರಿಸಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ' ಎಂದು ಅರವಿಂದ್ ವೆಂಕಟೇಶ್ ರೆಡ್ಡಿ ಹೇಳಿದ್ದಾರೆ.
ನಟಿ ಹೇಳಿದ್ದೇನು?
ನಟಿ ಹೇಳುವ ಪ್ರಕಾರ, 'ಅರವಿಂದ್ ರೆಡ್ಡಿ ನನ್ನ ಜೊತೆಗೆ ಇರುತ್ತಿರಲಿಲ್ಲ. ಹೇಳದೆ ಕೇಳದೆ ವಿದೇಶಕ್ಕೆ ಹೋಗುತ್ತಿದ್ರು. ತಿಂಗಳಗಟ್ಟಲೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ನಾನು ಬಯಸಿದಾಗ ಅವರು ನನ್ನ ಜೊತೆ ಇರುತ್ತಿರಲಿಲ್ಲ. ಕೊನೆಗೆ ದೂರ ಆಗಬೇಕು ಎಂದು ನಿರ್ಧರಿಸಿದಾಗ ಹತ್ತಿರವಾಗಲು ಬಂದರು. ಆದರೆ ಅವರೊಂದಿಗೆ ಮುಂದುವರಿಯುವುದು ಇಷ್ಟವಿಲ್ಲದೆ ದೂರ ಉಳಿಯಲು ನಿರ್ಧರಿಸಿದಾಗ ನನಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. ಅವರೊಂದಿಗೆ ನೆಮ್ಮದಿ ಅನ್ನೋದೆ ಇರಲಿಲ್ಲ. ಮಾನಸಿಕವಾಗಿ ತುಂಬಾ ನೊಂದು ಅದರಿಂದ ಆಚೆ ಬರಲು ನಿರ್ಧರಿಸಿದೆ' ಎಂದಿದ್ದಾರೆ.
'ನಟಿಗಾಗಿ ಕೋಟಿ ಕೋಟಿ ಖರ್ಚು ಮಾಡದ್ದೇನೆ ಎಂದು ಅರವಿಂದ ರೆಡ್ಡಿ ಹೇಳಿದ್ದು, ಇದಕ್ಕೆ ನಟಿ ಪ್ರತಿಕ್ರಿಯಿಸಿದ್ದಾರೆ. ನನ್ನ ಕೆಪಾಸಿಟಿ ಇದ್ದಿದ್ದು 10 ಸಾವಿರ ರೂಪಾಯಿ, ಅವರ ಕೆಪಾಸಿಟಿ ಇದ್ದಿದ್ದು 1 ಕೋಟಿ ರೂಪಾಯಿ, ನನ್ನ ಸ್ಟೇಟಸ್‌ನಲ್ಲಿ ನಾನೇನು ಮಾಡಬೇಕೋ ಮಾಡಿದ್ದೇನೆ. ಅವರ ಸ್ಟೇಟಸ್‌ನಲ್ಲಿ ಅವರೇನು ಮಾಡಬೇಕೋ ಮಾಡಿದ್ದಾರೆ. ಅವರೊಂದಿಗೆ ಇದ್ದ ಸಮಯದಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ನಟಿ ಹೇಳಿದ್ದಾರೆ. ನಾವಿಬ್ಬರೂ ದೂರಾದ ಮೇಲೆ ಎಲ್ಲ ಗಿಫ್ಟ್‌ಗಳನ್ನ ವಾಪಸ್ ಕೊಟ್ಟಿದ್ದೇನೆ. ಆದ್ರೆ ಜೊತೆಯಲ್ಲಿದ್ದಾಗ ನನಗೆ ಅಂತ ಖರ್ಚು ಮಾಡಿದಷ್ಟೂ ಹಣ ವಾಪಸ್ ಕೊಡುವ ತಾಕತ್ ನನಗಿಲ್ಲ' ಎಂದಿದ್ದಾರೆ.












Click it and Unblock the Notifications