ಜೀವದ ಗೆಳತಿ ಜೊತೆ ಜಗತ್ತಿನ ಅತೀ ಎತ್ತರದ ಕಟ್ಟಡದ ಮೇಲೆ ನಿಂತು ಕೈಎತ್ತಿದ ನಟಿ ಪ್ರೀತಿ ಜಿಂಟಾ: ಅಚ್ಚರಿ ಮೂಡಿಸಿದ ನಡೆ!

ನಟಿ ಪ್ರೀತಿ ಜಿಂಟಾ ಅಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಫೇವರಿಟ್. ಬಾಲಿವುಡ್ ಬ್ಯೂಟಿ ಎಂದು ಕರೆಸಿಕೊಳ್ಳುವ ಪ್ರೀತಿ ಜಿಂಟಾ, ತಮ್ಮ ನಟನೆ ಮೂಲಕ ಪ್ರೇಕ್ಷಕರನ್ನೂ ಸೈಲೆಂಟ್ ಮಾಡುವ ಶಕ್ತಿ ಹೊಂದಿದ್ದಾರೆ. ಇಂತಿಪ್ಪ ನಟಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ಸಾಕಷ್ಟು ಬಾರಿ ಐಪಿಎಲ್ ಕಾರಣಕ್ಕೆ ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಈಗ ಜಗತ್ತಿನ ಅತಿ ಎತ್ತರದ ಕಟ್ಟಡದ ಮೇಲೆ ನಿಂತು ಏನ್ ಹೇಳಿದ್ರು ಗೊತ್ತಾ?

ಪ್ರೀತಿ ಜಿಂಟಾ ಅವರಿಗೆ ಈಗ 48 ವರ್ಷ ವಯಸ್ಸು, ಆದರೆ ನೋಡೋದಕ್ಕೆ ಈಗಲೂ ಅವ್ರು ಯಂಗ್ & ಎನೆರ್ಜೆಟಿಕ್. ಅದರಲ್ಲೂ 1998ರಲ್ಲಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು ಈ ಬ್ಯೂಟಿ. ಇಂದಿಗೂ ಅವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಈ ಮೂಲಕ ಯುವ ನಟ & ನಟಿಯರು ಪ್ರೀತಿ ಜಿಂಟಾ ಅವರನ್ನು ನೋಡಿ ಕಲಿಯಬೇಕಿದೆ ಎಂಬ ಮಾತುಗಳು, ಆಗಾಗ ಕೇಳಿಬರುತ್ತವೆ. ಇಂತಿಪ್ಪ ಬಾಲಿವುಡ್ ಬ್ಯೂಟಿ ಇದೀಗ ಇಡೀ ಜಗತ್ತಿನಲ್ಲೇ ಅತಿ ಎತ್ತರದಲ್ಲಿ ಇರುವ ಜಾಗಕ್ಕೆ ತಲುಪಿದ್ದಾರೆ. ಹೀಗೆ ಅತಿ ಎತ್ತರದ ಕಟ್ಟಡದ ಮೇಲೆ ನಿಂತು ಹೇಳಿದ್ದೇನು ಗೊತ್ತಾ?

Preity Zinta Post About Burj Khalifa Is Getting Viral

ಬಾಲಿವುಡ್ ಬ್ಯೂಟಿ ಫುಲ್ ಖುಷ್!

ಹೌದು ಬುರ್ಜ್ ಖಲೀಫಾ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಈ ಜಾಗಕ್ಕೆ, ತಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿ ಹೋಗಿ ಬರಲೇಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಾಗೇ ದುಡ್ಡು ಇರುವವರಿಗೂ ಈ ರೀತಿಯ ಕ್ರೇಜ್ ಇರುತ್ತೆ. ಅದರಲ್ಲೂ ಬಾಲಿವುಡ್ ನಟ & ನಟಿಯರು ಆಗಾಗ ಬುರ್ಜ್ ಖಲೀಫಾಗೆ ತೆರಳುತ್ತಾರೆ. ಈಗ ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೂಡ ಬುರ್ಜ್ ಖಲೀಫಾ ಮೇಲೆ ಹೋಗಿದ್ದಾರೆ ಇದರಲ್ಲಿ ಏನು ಸ್ಪೆಷಲ್ ಆಂತಾ ಕೇಳುವ ಮೊದಲು, ಮುಂದೆ ಓದಿ. ಯಾಕಂದ್ರೆ ಇಲ್ಲೇ ಪ್ರೀತಿ ಜಿಂಟಾ ಅವರು ಈಗ ಕೊಟ್ಟಿರುವ ಸರ್ಪ್ರೈಸ್ ಏನು ಅಂತಾ ಗೊತ್ತಾಗೋದು.

ಪ್ರೀತಿ ಜಿಂಟಾ ಹೇಳಿದ್ದು ಏನು?

ಜೀವದ ಗೆಳತಿ ಜೊತೆ ಪ್ರೀತಿ ಜಿಂಟಾ ಫುಲ್ ರೌಂಡಿಂಗ್ಸ್ ಹಾಕುತ್ತಿದ್ದಾರೆ. ಹಾಗೇ ಆ ಖುಷಿ, ಖುಷಿ ಕ್ಷಣದ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ನೀವು ನಿಮ್ಮ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆರಿಸಿದಾಗ ಅತಿ ಎತ್ತರದಲ್ಲಿ ಇದ್ದಾಗಲೂ ಏಕಾಂಗಿಯಾಗಿ ಇರುವುದಿಲ್ಲ. 💕 ಇಡೀ ಜಗತ್ತಿನ ಅತಿ ಎತ್ತರದ ಕಟ್ಟಡದ, ಅತಿ ಎತ್ತರದ ಸ್ಥಳದಲ್ಲಿ ನಮ್ಮನ್ನು ನೋಡಿ. ಧನ್ಯವಾದಗಳು ಒಸಾಮಾ, ತುಂಬಾ ಅದ್ಭುತವಾಗಿದ್ದಕ್ಕಾಗಿ ಮತ್ತು ಬುರ್ಜ್ ಖಲೀಫಾಗೆ ನಮ್ಮ ಭೇಟಿಯನ್ನು ತುಂಬಾ ಖುಷಿಗೊಳಿಸಿದ್ದಕ್ಕೆ 🙏 #topoftheworld #pztravel #ting' ಎಂದು ಬರೆದುಕೊಂಡಿದ್ದಾರೆ.

ಒಟ್ನಲ್ಲಿ ನಟಿ ಪ್ರೀತಿ ಜಿಂಟಾ ಫುಲ್ ಖುಷ್ ಆಗಿದ್ದಾರೆ. ತಮ್ಮ ಜೀವದ ಗೆಳತಿ ಜೊತೆಯಲ್ಲಿ ಜಗತ್ತನ್ನು ನೋಡುತ್ತಾ ಖುಷಿ ಹಂಚುತ್ತಿದ್ದಾರೆ. ಹಾಗೇ ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ ಅವರ ಈ ಖುಷಿಯನ್ನ ನೋಡಿ ಅವರ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೇನು ಐಪಿಎಲ್ ಕೂಡ ಶುರುವಾಗಲಿದ್ದು, ಅದಕ್ಕೆ ಮೊದಲು ಪ್ರೀತಿ ಜಿಂಟಾ ಅವರು ಮತ್ತೊಮ್ಮೆ ಗಮನ ಸೆಳೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+