ಬೆದರಿಕೆ ಹಾಕಿದವನು ಪೊಲೀಸ್ ಸ್ಟೇಷನ್‌ನಲ್ಲಿದ್ದಾನೆ! ನಾಲಿಗೆ ಮೇಲೆ ಹಿಡಿತವಿರಲಿ ಎಂದ ಪ್ರಥಮ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ದರ್ಶನ್ ಬಂಧನವಾದ ಬಳಿಕ, ಚಿತ್ರರಂಗದ ಅನೇಕರು ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ.
ನಿರ್ಮಾಪಕ ಉಮಾಪತಿ ಗೌಡ ಮತ್ತು ನಟ ಪ್ರಥಮ್ ದರ್ಶನ್ ಪ್ರಕರಣದಲ್ಲಿ ನೀಡಿರುವ ಹೇಳಿಕೆಗಳು ಅಭಿಮಾನಿಗಳು ಕೋಪಕ್ಕೆ ಕಾರಣವಾಗಿದೆ. ದರ್ಶನ್ ಅಭಿಮಾನಿಗಳ ಬಗ್ಗೆ ಕೂಡ ಇವರಿಬ್ಬರೂ ಹೇಳಿಕೆಗಳನ್ನು ನೀಡಿದ್ದು, ಅಭಿಮಾನಿಗಳನ್ನು ಕೆರಳಿಸಿತ್ತು.

ಹಲವು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಉಮಾಪತಿ ಗೌಡ ಮತ್ತು ಪ್ರಥಮ್‌ಗೆ ನಿಂದಿಸಿದ್ದರು ಇನ್ನೂ ಕೆಲವರು ದರ್ಶನ್ ಬಿಡುಗಡೆಯಾದ ಮೇಲೆ ನಿಮ್ಮನ್ನು ವಿಚಾರಿಸಿಕೊಳ್ತೀವಿ ಎನ್ನುವ ರೀತಿ ಬೆದರಿಕೆಗಳನ್ನು ಹಾಕಿದ್ದರು.
ಜೈಲು ಪಾಲಾದ ದರ್ಶನ್ ಅಭಿಮಾನಿ
ದರ್ಶನ್ ಬಂಧಿಸಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಬಳಿ ಜಮಾಯಿಸಿದ್ದ ದರ್ಶನ್ ಅಭಿಮಾನಿಗಳಲ್ಲಿ ಒಬ್ಬ ಮಾಧ್ಯಮದ ಜೊತೆ ಮಾತನಾಡುವಾಗ, ಉಮಾಪತಿ ಗೌಡ ಮತ್ತು ಪ್ರಥಮ್‌ಗೆ ನಿಂದಿಸಿ, ಬಹಿರಂಗವಾಗಿ ಬೆದರಿಕೆ ಹಾಕಿದ್ದ.
ನಮ್ಮ ಬಾಸ್ ಒಳಗಡೆ ಇದ್ದಾರೆ ಎಂದು ಉಮಾಪತಿ ಗೌಡ ಮತ್ತು ಪ್ರಥಮ್ ಮಾತಾಡ್ತಿದ್ದಾರೆ. ಅವರು ಆಚೆ ಬರಲಿ ಇವರಿಗೆಲ್ಲಾ ಒಂದು ಗತಿ ಕಾಣಿಸ್ತೀವಿ ಎಂದಿದ್ದ. ಆತನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿಸುತ್ತಿದ್ದಂತೆ ಬುದ್ದಿ ಕಲಿತಿರುವ ಆತ, ಉಮಾಪತಿ ಗೌಡ ಮತ್ತು ಪ್ರಥಮ್ ಬಗ್ಗೆ ಮಾತನಾಡಿದ್ದು ತಪ್ಪು ಅದಕ್ಕೆ ಕ್ಷಮೆ ಕೇಳಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Kindly share.ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ.ನಮ್ಮ phn police ವಶಪಡಿಸಿಕೊಂಡು ಎಲ್ಲಾ comments,msgsನ ಗಮನಿಸುತ್ತಿದ್ದಾರೆ.ಯಾರಿಗೋಸ್ಕರವೋ ದಯವಿಟ್ಟು ನಿಮ್ಮlifeನ ಹಾಳುಮಾಡಿಕೊಳ್ಳಬೇಡಿ;ಕನ್ನಡಕ್ಕಾಗಿ,ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ.#ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ.ನನ್ನ ಬಗ್ಗೆ ಮಾತಾಡುವಾಗಎಚ್ಚರಿಕೆ pic.twitter.com/w8GtFs26tU
— Olle Hudga Pratham (@OPratham) June 24, 2024
ನಾಲಿಗೆ ಮೇಲೆ ಹಿಡಿತವಿರಲಿ
ದರ್ಶನ್ ಅಭಿಮಾನಿ ಕ್ಷಮೆ ಕೇಳಿರುವ ವಿಡಿಯೋವನ್ನು ನಟ ಪ್ರಥಮ್ ಹಂಚಿಕೊಂಡಿದ್ದು, ನಾಲಿಗೆ ಹರಿಬಿಡುವ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ನಮ್ಮ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡು ಎಲ್ಲಾ ಕಮೆಂಟ್ಸ್, ಮೆಸೇಜ್‌ಗಳನ್ನು ಗಮನಿಸುತ್ತಿದ್ದಾರೆ. ಯಾರಿಗೋಸ್ಕರವೋ ದಯವಿಟ್ಟು ಜೀವನ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ. ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಎಂದು ಸಂದೇಶ ರವಾನಿಸಿದ್ದಾರೆ.
ದರ್ಶನ್ ಜುಲೈ 4ರವರೆಗೂ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. ಬಳಿಕ ಮತ್ತೊಮ್ಮೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, ನ್ಯಾಯಾಂಗ ಬಂಧನ ಮುಂದುವರೆಯುವ ಸಾಧ್ಯತೆ ಇದೆ.












Click it and Unblock the Notifications