ಶಿವಣ್ಣನ ಅಭಿಮಾನಿಗಳಿಗೆ ಒಳ್ಳೆ ಹುಡುಗ ಪ್ರಥಮ್‌ ಫುಲ್‌ ಕ್ಲಾಸ್‌, ಕಾರಣವೇನು?

ಅಮೇರಿಕಾದಲ್ಲಿ ಕ್ಯಾನ್ಸರ್‌ ಸರ್ಜರಿ ಯಶಸ್ವಿಯಾದ ಬಳಿಕ ನಟ ಶಿವರಾಜ್‌ಕುಮಾರ್‌ ಅವರು ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ. ಶಿವಣ್ಣನನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಆದರೆ, ನಟ ಒಳ್ಳೆಯ ಹುಡುಗ ಪ್ರಥಮ್‌ ಅವರು ಶಿವಣ್ಣನ ಅಭಿಮಾನಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿರುವ ಅವರು ತಾಯ್ನಾಡಿಗೆ ಮರಳಿ ಬಂದ ಶಿವಣ್ಣ ಸರ್‌ಗೆ ಗೌರವಪೂರ್ವಕ ಶುಭಾಶಯಗಳು. ಇನ್ನೆರಡು ತಿಂಗಳು ಬಿಟ್ಟು ಬನ್ನಿ, ಇಲ್ಲಿ ಬಂದ ಕೂಡಲೇ ಜನ ಬಿಡಲ್ಲ ಅಂತ ಗೀತಾ ಮೇಡಂಗೆ ನೂರುಸಲ‌ ಹೇಳಿದ್ದೆ. ಅಮೇರಿಕಾದಿಂದ 20 ಗಂಟೆಗಳ ಕಾಲ ಟ್ರಾವೆಲ್‌ ಮಾಡಿ ಬಂದಿರ್ತಾರಪ್ಪ, ಶರೀರ ಅಸಾಧ್ಯವಾಗಿ ದಣಿದಿರುತ್ತೆ. ದಯವಿಟ್ಟು ಯಾರು ಹೋಗಿ ತೊಂದರೆ ಕೊಡಬೇಡ್ರಿ ಎಂದು ಪ್ರಥಮ್‌ ಹೇಳಿದ್ದಾರೆ.

Pratham Requests Fans To Avoid Disturbing Actor Shivarajkumar Post-Surgery

ಬಂದ ಕೂಡಲೇ ಶಿವಣ್ಣನನ್ನು ಕಾಣಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದು, ಬೃಹತ್‌ ಕಾರ್ಯಕ್ರಮಗಳ ಮೂಲಕ ಅವರಿಗೆ ಆಯಾಸ ನೀಡುತ್ತಾರೆ. ಈಗಷ್ಟೇ ಅವರ ಸರ್ಜರಿ ಇರುವ ಕಾರಣ ಶಿವಣ್ಣನಿಗೆ ತೊಂದರೆ ಮಾಡಬೇಡಿ ಎಂದು ಪ್ರಥಮ್‌ ಮನವಿ ಮಾಡಿದ್ದಾರೆ.

ಸರ್ಜರಿಗಾಗಿ ಅಮೇರಿಕಾಗೆ ತೆರಳಿದ್ದ ಶಿವಣ್ಣ ಇಂದು ಬೆಂಗಳೂರಿಗೆ ಬಂದಿಳಿದಿದ್ದು, ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಿದರು. ಬಳಿ ಟೋಲ್‌ ಗೇಟ್‌ ಬಳಿ ಬೃಹತ್‌ ಸೇಬಿನ ಹಾರ ಹಾಕಿ ಅಭಿಮಾನಿಗಳು ಬರಮಾಡಿಕೊಂಡರು. ಇನ್ನು ಶಿವಣ್ಣ ಸಖತ್‌ ಎನರ್ಜಿಯಾಗಿಯೇ ಎಲ್ಲರಿಗೂ ತಮ್ಮ ದರ್ಶನ ನೀಡಿ ಖುಷಿಪಡಿಸಿದರು.

ಕಳೆದ ತಿಂಗಳು ಶಿವಣ್ಣ ಸರ್ಜರಿಗಾಗಿ ಅಮೆರಿಕಾಗೆ ಹೋಗಿದ್ದರು. ಅಲ್ಲಿನ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ತಿಂಗಳ ನಂತರ ಇಂದು ಅವರು ತಾಯ್ನಾಡಿಗೆ ವಾಪಸ್‌ ಆಗಿದ್ದಾರೆ.

Pratham Requests Fans To Avoid Disturbing Actor Shivarajkumar Post-Surgery

ಇಂದು ತಮ್ಮ ನಿವಾಸದ ಬಳಿ ಮಾತನಾಡಿದ ಶಿವಣ್ಣ, ಮೊದಲು ನನಗೆ ಅಮೇರಿಕಾಗೆ ಹೋಗಲು ಬಹಳ ಭಯವಾಗಿತ್ತು. ವಿಮಾನದಲ್ಲಿ ಹೋಗುತ್ತಿದ್ದಾಗ ಟೆನ್ಶನ್‌ ಆಗಿತ್ತು. ಕೊನೆಗೆ ಅಲ್ಲಿಗೆ ಹೋದ ಮೇಲೆ ಆತ್ಮವಿಶ್ವಾಸ ಹೆಚ್ಚಾಯಿತು. ಬಳಿಕ ಆಪರೇಷನ್‌ ದಿನವೂ ಭಯ ಶುರುವಾಯಿತು. ಆದರೆ ಜೀವನದಲ್ಲಿ ಎಲ್ಲವನ್ನೂ ಎದುರಿಸಬೇಕು ಎಂದು ಗಟ್ಟಿಯಾಗಿ ನಿಂತೆ ಎಂದು ಶಿವಣ್ಣ ಹೇಳಿದರು.

ಆಪರೇಷನ್‌ ನಂತರ ಮೂರು ದಿನಗಳ ಕಾಲ ನನಗೆ ದ್ರವ ಆಹಾರದೊಂದಿಗೆ ಹಾಸಿಗೆಯಲ್ಲೇ ಇರಬೇಕಾಯಿತು. ಆ ಬಳಿಕ ಆರೋಗ್ಯ ಸುಧಾರಿಸುತ್ತಾ ಬಂತು. ಈ ವೇಳೆ ನನ್ನೊಂದಿಗೆ ಕುಟುಂಬಸ್ಥರು ಕೂಡ ಒಂದು ತಿಂಗಳ ಕಾಲ ಇದ್ದರು. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಕುಟುಂಬಸ್ಥರಿಂದ ನಾನು ಚೇತರಿಸಿಕೊಂಡಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ ಎಂದರು. ಶೀಘ್ರವೇ ಶೂಟಿಂಗ್‌ನಲ್ಲಿ ಭಾಗವಹಿಸುತ್ತೇನೆ ಎಂದೂ ಶಿವಣ್ಣ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+