Pratham: 'ಯಾವ ಸ್ಟಾರ್ ನಟನಿಗೂ ಬಾಸ್ ಎನ್ನಬೇಡಿ. ನಿಮ್ಮ ತಂದೆ-ತಾಯಿಯೇ ನಿಮಗೆ ಬಾಸ್’ ಎಂದು ಪ್ರಥಮ್
ದರ್ಶನ್ ಅಭಿಮಾನಿಗಳಿಗೂ ಹಾಗೂ ಪ್ರಥಮ್ ಅವರಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಕಳೆದ ದಿನ ಡಾಲಿ ಧನಂಜಯ್ ರಿಸೆಪ್ಶನ್‌ಗೆ ತೆರಳಿದ್ದ ಪ್ರಥಮ್ ಸುದ್ದಿಗಾರರೊಂದಿಗೆ ಮಾತನಾಡುವಾಗ 'ಜೈ ಡಿ-ಬಾಸ್' ಎಂದವರಿಗೆ ತಿರುಗೇಟು ಕೊಟ್ಟಿದ್ದಾರೆ. 'ಜೈ ಡಿ-ಬಾಸ್' ಎಂದು ಕೂಗಿದವರಿಗೆ ಬುದ್ಧಿ ಮಾತು ಹೇಳಿದ್ದಾರೆ ನಟ ಪ್ರಥಮ್.
'ನೀವು ನನ್ನ ಬಾಸ್. ನಿಮಗೆ ನಿಮ್ಮ ಅಪ್ಪ-ಅಮ್ಮ ಬಾಸ್. ಬೇರೆ ಯಾರಿಗೂ ಕೂಡ ಬಾಸ್ ಅನ್ನಬೇಡಿ' ಎಂದಿದ್ದಾರೆ ಒಳ್ಳೆಯ ಹುಡುಗ ಪ್ರಥಮ್. 'ನೀವು ಸಿನಿಮಾ ನೋಡಿದರೆ ಮಾತ್ರ ನಮಗೆ ಅನ್ನ. ನಿಮ್ಮಿಂದ ನಾವು ಅನ್ನ ತಿನ್ನೋರು. ನೀವು ನಮಗೆಲ್ಲಾ ದೇವರು. ಬೇರೆಯವರನ್ನು ದೇವರು ಮಾಡಬೇಡಿ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಯಾರಿಗೂ ಬಾಸ್ ಎನ್ನಬೇಡಿ- ಪ್ರಥಮ್
ಕಳೆದ ದಿನ ಡಾಲಿ ಧನಂಜಯ್ ಅವರ ರಿಸೆಪ್ಶನ್ ಅಲ್ಲಿ ಭಾಗಿಯಾಗಿದ್ದ ನಟ ಪ್ರಥಮ್ ಸುದ್ದಿಗಾರರೊಂದಿಗೆ ಮಾತನಾಡುವಾಗ ಅಲ್ಲಿದ್ದ ಕೆಲವರು ಜೈ ಡಿ-ಬಾಸ್ ಎಂದು ಕೂಗಿದ್ದಾರೆ. ಇದಕ್ಕೆ ಪ್ರಥಮ್ ತಿರುಗೇಟು ಕೊಟ್ಟಿದ್ದಾರೆ. ಪ್ರಥಮ್ ಮಾತಿಗೆ ಡಿ-ಬಾಸ್ ಎಂದು ಕೂಗುವವರು ಸೈಲೆಂಟ್ ಆಗಿದ್ದಾರೆ.
ಹೌದು... ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಥಮ್ ಹೇಳಿದ ಹೇಳಿಕೆಯಿಂದಾಗಿ ದರ್ಶನ್ ಅಭಿಮಾನಿಗಳು ಕೆಂಡವಾಗಿದ್ದರು. ಪ್ರಸ್ತುತ ದರ್ಶನ್ ಅಭಿಮಾನಿಗಳ ನಡುವೆ ಆ ಮುಸುಕಿನ ಗುದ್ದಾಟ ಹಾಗೇ ಮುಂದುವರೆದಿದೆ. ಪ್ರಥಮ್ ಹೋದಲ್ಲಿ ಬಂದಲ್ಲಿ ಜೈ ಡಿ-ಬಾಸ್ ಎಂದು ಕೂಗುವವರೇ ಹೆಚ್ಚಾಗಿದ್ದಾರೆ. ಇದಕ್ಕೆ ಕಳೆದ ದಿನ ಪ್ರಥಮ್ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ.
ಡಾಲಿ ಧನಂಜಯ್ ಮದುವೆಯ ಬಗ್ಗೆ ಮಾತನಾಡಿದ ಪ್ರಥಮ್,'ಡಾಲಿ ಧನಂಜಯ್ ಪತ್ನಿ ಧನ್ಯತಾ ಅವರು. ಅವರು ವೈದ್ಯರಾಗಿದ್ದು 500 ಹೆರಿಗೆ ಮಾಡಿಸಿದ್ದಾರಂತೆ. 500 ಮಕ್ಕಳು ಅವರಿಗೂ ಆಗಲಿ ಎಂದು ನಾನು ಹಾರೈಸುತ್ತೇನೆ' ಎಂದರು.
ಜೈ ಡಿ-ಬಾಸ್ ಅಂದವರು ಪ್ರಥಮ್ ಮಾತಿಗೆ ಗಪ್‌ಚಿಪ್
ಈ ವೇಳೆ ಯಾರೋ ಒಬ್ಬ ವ್ಯಕ್ತಿ ಸೈಡ್ ಅಲ್ಲಿ ಬಂದು ಕ್ಯಾಮರಾ ಮುಂದೆ 'ಜೈ ಡಿ-ಬಾಸ್' ಎಂದು ಕೂಗಿ ಜನರ ಮಧ್ಯ ಹೋಗಿ ಅವಿತುಕೊಳ್ಳುತ್ತಾನೆ. ಆಗ ಪ್ರಥಮ್, 'ಅಣ್ಣ ನನಗೆ ನೀನೇ ಬಾಸ್. ಬಾ ಅಣ್ಣ ಇಲ್ಲಿ. ನಿನಗೆ ಮುಖ ತೋರಿಸೋ ಯೋಗ್ಯತೆ ಇಲ್ಲ. ಅವನು ಯಾವನೋ ಕುಡಿದು ಬಿಟ್ಟಿದ್ದಾನೆ. ಅದ್ಕೆ ಮಾತನಾಡುತ್ತಿದ್ದಾನೆ. ಮರೆತುಬಿಡಿ' ಎನ್ನುತ್ತಾರೆ.
'ನನಗೆ ಕನ್ನಡಿಗರು ಬಾಸ್. ನೀವು ಸಿನಿಮಾ ನೋಡಿದರೆ ನಾನು ನಿಮಗೆ ನಟ. ನಿಮಗೆ ನಿಮ್ಮ ಅಪ್ಪ-ಅಮ್ಮ ಬಾಸ್ ಆಗಬೇಕು. ಇಲ್ಲಿ ಯಾವ ಮಗನಿಗೆ ನಿಮ್ಮ ಅಪ್ಪ-ಅಮ್ಮ ಬಾಸ್ ಅಲ್ಲ ಬನ್ನಿ ಮುಂದೆ' ಎಂದು ಕರೆಯುತ್ತಾರೆ. ಇದಕ್ಕೆ ಜೈ ಡಿ-ಬಾಸ್ ಎಂದವರೆಲ್ಲಾ ಗಪ್‌ಚಿಪ್ ಆಗುತ್ತಾರೆ.
'ಕರ್ನಾಟಕದಲ್ಲಿ ಕನ್ನಡ ಬಾಸ್. ಕನ್ನಡಿಗರು ನಮಗೆ ಬಾಸ್. ನಿಮಗೆ ಅಪ್ಪ-ಅಮ್ಮ ಬಾಸ್ ಆಗಬೇಕು. ಇಲ್ಲಿ ಯಾರು ಕನ್ನಡಿಗರು ಅಲ್ಲ ಅವರು ನನಗೆ ಬಾಸ್ ಅಲ್ಲ. ನಿಮಗೆ ಮಾತ್ರ ನಿಮ್ಮ ಅಪ್ಪ-ಅಮ್ಮನೇ ಬಾಸ್ ಆಗಬೇಕು. ಅವರೇ ನಿಮಗೆ ದೇವರು. ಇವರನ್ನು ಬಿಟ್ಟರೆ ಇಲ್ಲಿ ಯಾರೂ ಕೂಡ ಬಾಸ್ ಅಲ್ಲ. ಕಲಾವಿದರು ಬಂದರೆ ಅವರನ್ನು ದೇವರು ಮಾಡಬೇಡಿ. ನಾವೆಲ್ಲಾ ಸೊನ್ನೆಯಿಂದ ಬಂದಿರುತ್ತೇವೆ. ನೀವು ಸಿನಿಮಾ ನೋಡಿದರೆ ಮಾತ್ರ ನಮಗೆ ಅನ್ನ. ನಿಮ್ಮಂದ ನಮಗೆ ಸ್ಟಾರ್ ಪಟ್ಟ ಸಿಗೋದು. ಯಾವ ಮಗನನ್ನು ದೇವರು ಮಾಡಬೇಡಿ' ಎಂದು ಕಿವಿ ಮಾತು ಹೇಳಿದ್ದಾರೆ.
ಏಳು ಕೋಟಿ ಜನರಿದ್ದೀರಾ. ನೀವು ಬಾಸ್ ಆಗೋದು ಯಾವಾಗ? ನೀವು ಹೋಗಿ ಯಾರಿಗೋ ಬಾಸ್ ಅಂದರೆ ಎಲ್ಲಿಗೆ ಬಂತು ನಿಮ್ಮ ಸಂಸ್ಕಾರ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಡಿ-ಬಾಸ್ ಎಂದು ಕೂಗಿದವರು ಗಪ್‌ಚುಪ್ ಆಗಿದ್ದಾರೆ.












Click it and Unblock the Notifications