ಉಗ್ರಂ ಸಿನಿಮಾ ಮಾಡುವಾಗ ಸ್ನಾನ ಮಾಡ್ತಾ ಇರಲಿಲ್ಲವಂತೆ ಪ್ರಶಾಂತ್ ನೀಲ್: ಕಾರಣ ತಿಳಿಯಿರಿ!
ಪ್ರಶಾಂತ್ ನೀಲ್ ಅಂದ್ರೆ ಈಗ ಭಾರತ ಮಾತ್ರವಲ್ಲ, ವರ್ಲ್ಡ್ ಲೆವೆಲ್ ಕ್ರೇಜ್ ಇದ್ದು. ಏಷ್ಯಾ ಟು ಆಫ್ರಿಕಾ, ಅಮೆರಿಕ ಟು ಆಸ್ಟ್ರೇಲಿಯಾ ಜನರು ಗುರುತು ಹಿಡಿಯುತ್ತಿದ್ದಾರೆ. ಆದ್ರೆ ಇದೇ ಪ್ರಶಾಂತ್ ನೀಲ್ ಸರಿಯಾಗಿ 10 ವರ್ಷಗಳ ಹಿಂದೆ ಮೊದಲ ಸಿನಿಮಾ ರಿಲೀಸ್ ಮಾಡಿದ್ದಾಗ, ಎಷ್ಟೆಲ್ಲಾ ಕಷ್ಟಪಟ್ಟಿದ್ದರು ಗೊತ್ತಾ? ಅಷ್ಟಕ್ಕೂ ಪ್ರಶಾಂತ್ ನೀಲ್ ಸ್ನಾನ ಮಾಡದೇ ಹಲವು ದಿನಗಳ ಕಾಲ ಹಂಗೆ ಇರುತ್ತಿದ್ದಿದ್ದು ಯಾಕೆ ಗೊತ್ತೆ? ಇಂಚಿಂಚು ಮಾಹಿತಿ ಅವರೇ ಹೇಳಿದ್ದಾರೆ ಮುಂದೆ ಓದಿ.
ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಶಾಂತ್ ನೀಲ್ ಹೆಸರು ಎಂದೆಂದಿಗೂ ಅಳಿಸಲಾಗದು ಅಂತಾ ಹೇಳಬಹುದು. ನೀಲ್ ಅವರು ಸದ್ಯಕ್ಕೆ ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಇದೇ ಪ್ರಶಾಂತ್ ನೀಲ್ ತಮ್ಮ ಮೊದಲ ಸಿನಿಮಾ ಮಾಡುವಾಗ, ಅಂದರೆ 'ಉಗ್ರಂ' ಮಾಡುವಾಗ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದರಂತೆ ಗೊತ್ತಾ? ನೀಲ್ ಈ ಸಿನಿಮಾಗಾಗಿ ಮನೆಯನ್ನೇ ಮಾರಿಕೊಂಡರು, ಇದರ ಜೊತೆಗೆ ಎಷ್ಟೋ ದಿನ ಸ್ನಾನ ಮಾಡದೆ ಸಿನಿಮಾಗಾಗಿ ಒಂದೇ ಕೋಣೆಯಲ್ಲಿ ಕೂತಿರುತ್ತಿದ್ದರಂತೆ! ಅದು ಯಾರ ಜೊತೆ ಗೊತ್ತಾ?

ಸ್ನಾನ ಮಾಡದೆ ಪ್ರಶಾಂತ್ ನೀಲ್...
ಉಗ್ರಂ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 10 ವರ್ಷಗಳೇ ಕಳೆದು ಹೋಗಿದೆ. ಹೀಗಿದ್ದಾಗ, ಆಂಕರ್ ಅನುಶ್ರೀ ಅವರು ವಿಶೇಷ ಕಾರ್ಯಕ್ರಮ ಒಂದನ್ನ ನಡೆಸಿದರು. ಈ ವೇಳೆ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ತಮ್ಮ ಜೀವನದ ಕಷ್ಟಗಳನ್ನ ಹಂಚಿಕೊಂಡಿದ್ದಾರೆ. ಏಳುಬೀಳು ಎದುರಿಸಿ ನಿಂತು ತಾವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಏನು ಅನ್ನೋದನ್ನ ಕೂಡ, ಇದೇ ವೇಳೆ ಬಿಡಿಸಿಟ್ಟಿದ್ದಾರೆ. ಅದ್ರಲ್ಲೂ ಉಗ್ರಂ ಸಿನಿಮಾದ ಮ್ಯೂಸಿಕ್ ಮಾಡಿಸುವ ವೇಳೆ, ರವಿ ಬಸ್ರೂರ್ ಅವರ ಸ್ಟುಡಿಯೋದಲ್ಲಿ ಪ್ರಶಾಂತ್ ನೀಲ್ ಅವರು ಸ್ನಾನ ಮಾಡದೆ ಕೂತು ಕೆಲಸ ಮಾಡಿಸುತ್ತಿದ್ದರಂತೆ. ಎಷ್ಟೋ ದಿನಗಳ ಕಾಲ ಹೀಗೆ ಸ್ನಾನ ಮಾಡದೆ ರವಿ ಬಸ್ರೂರ್ ಜೊತೆ ಪ್ರಶಾಂತ್ ನೀಲ್ & ಭುವನ್ ಗೌಡ ಕೂತಿರುತ್ತಿದ್ದರಂತೆ.
ರವಿ ಬಸ್ರೂರ್ ಸ್ಟುಡಿಯೋದಲ್ಲೇ ವಾಸ
ಪ್ರಶಾಂತ್ ನೀಲ್ ಹಂಚಿಕೊಂಡ ಮಾಹಿತಿಯಂತೆ ಶ್ರೀಮುರಳಿ ಅವರ ಜತೆ ಉಗ್ರಂ ಮಾಡುವಾಗ, ತುಂಬಾ ಕಷ್ಟ ಎದುರಾಗಿತ್ತಂತೆ. ಅದರಲ್ಲೂ ನಟನಾಗಿ ಶ್ರೀಮುರಳಿ ಅವರಿಗೂ ದೊಡ್ಡ ಹಿನ್ನಡೆ ಆಗುತ್ತಿತ್ತು. ಹೀಗಿದ್ದಾಗ ಶ್ರೀಮುರಳಿ ಅಭಿನಯಿಸಿದ್ದ 'ಉಗ್ರಂ' ಸಿನಿಮಾ ರಿಲೀಸ್ ಮಾಡೋದು ಕೂಡ ಕಷ್ಟವಾಗಿತ್ತಂತೆ. ಇಂತಹ ಸಮಯದಲ್ಲಿ, ಸಿನಿಮಾ ಗೆಲ್ಲಿಸಬೇಕು ಅನ್ನೋ ಹಠದಲ್ಲೇ ದುಡಿದ ಪ್ರಶಾಂತ್ ನೀಲ್ ಹಗಲು & ರಾತ್ರಿ ಲೆಕ್ಕ ಮಾಡದೆ ಉಗ್ರಂ ಸಿನಿಮಾಗೆ ಕೆಲಸವನ್ನು ಮಾಡಿದ್ದರಂತೆ. ಅದ್ರಲ್ಲೂ ಮ್ಯೂಸಿಕ್ ಮಾಡಿಸುವಾಗ ಸ್ನಾನ ಮಾಡದೆ, ಮನೆಗೆ ಹೋಗದೆ ರವಿ ಬಸ್ರೂರ್ ಜೊತೆಗೆ ಕೂತಿರುತ್ತಿದ್ದರಂತೆ ಪ್ರಶಾಂತ್ ನೀಲ್.

'ಉಗ್ರಂ'ಗೆ 10 ವರ್ಷಗಳ ಸಂಭ್ರಮ
ಪ್ರಶಾಂತ್ ನೀಲ್ ಅವರ ಕೆಪಾಸಿಟಿ ಈಗ ಇಂಡಿಯನ್ ಸಿನಿಮಾ ಇಂಡಸ್ಟ್ರಿಗೇ ಗೊತ್ತಾಗಿದ್ದು ಇವರ ಜತೆ ಸಿನಿಮಾ ಮಾಡಲು ಸ್ಟಾರ್ ಹೀರೋಗಳು ಸಾಲಾಗಿ ನಿಲ್ಲುತ್ತಿದ್ದಾರೆ. ಇದೇ ಪ್ರಶಾಂತ್ ನೀಲ್, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನಗಳಲ್ಲಿ ಭಾರಿ ಸಂಕಷ್ಟ ಎದುರಿಸಿದ್ದರಂತೆ 'ಉಗ್ರಂ'ನ ನಿರ್ಮಿಸೋದಕ್ಕೆ ಪ್ರಶಾಂತ್ ನೀಲ್ ತಮ್ಮ ಮನೆ ಮಾರಿಕೊಂಡಿದ್ದರು ಎನ್ನುವ ಸುದ್ದಿ ಇತ್ತೀಚೆಗೆ ಅವರಿಂದಲೇ ಹೊರಬಿದ್ದಿತ್ತು. ಈಗ ಉಗ್ರಂ ಸಿನಿಮಾಗೆ 10 ವರ್ಷ ತುಂಬಿದ ಸಮಯದಲ್ಲು ಅನೇಕ ಆಘಾತಕಾರಿ ಸತ್ಯಗಳನ್ನ ಬಯಲು ಮಾಡಿದ್ದಾರೆ.
ಹೀಗೆ ಎಲ್ಲಾ ಕಷ್ಟಗಳನ್ನೂ ಎದುರಿಸಿ ನಿಂತ ಪ್ರಶಾಂತ್ ನೀಲ್ ಅವರು ಇಂದು ಜಾಗತಿಕ & ದೇಶೀಯ ಮಟ್ಟದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಅದ್ರಲ್ಲೂ ಪ್ರಶಾಂತ್ ನೀಲ್ ಈಗ ಒಂದೊಂದು ಸಿನಿಮಾಗೂ, ಕೋಟಿ ಕೋಟಿ ತೆಗೆದುಕೊಳ್ಳುವುದು ಅವರ ಟ್ಯಾಲೆಂಟ್‌ನಿಂದ. ಅಲ್ಲದೆ ಅವರ ಸಿನಿಮಾ ಮೇಕಿಂಗ್ ನೋಡಿ ಪರಭಾಷೆಯ ಹೀರೋಗಳೇ ತಲೆಬಾಗಿದ್ದಾರೆ.












Click it and Unblock the Notifications