KGF 3: ಕೆಜಿಎಫ್ 3 ಸ್ಕ್ರಿಪ್ಟ್ ಸಿದ್ಧವಾಗಿದೆ ಎಂದ ಪ್ರಶಾಂತ್ ನೀಲ್

ಕನ್ನಡ ಚಿತ್ರರಂಗದ ಖ್ಯಾತಿಯನ್ನು ವಿಶ್ವದಾದ್ಯಂತ ಹರಡಿದ್ದು ಕೆಜಿಎಫ್ ಸಿನಿಮಾ ಸರಣಿ. ಕನ್ನಡ ಸಿನಿಮಾ ಕೂಡ ನೂರಾರು ಕೋಟಿ ವ್ಯವಹಾರ ಮಾಡಬಹುದು ಎಂದು ಮೇಲ್ಪಂಕ್ತಿ ಹಾಕಿಕೊಟ್ಟ ಸಿನಿಮಾ. ನಾಯಕ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಜನಪ್ರಿಯತೆ ಉತ್ತುಂಗಕ್ಕೇರಿಸಿದ್ದು ಈ ಎರಡು ಸಿನಿಮಾಗಳು.

ಕೆಜಿಎಫ್ 2 ಸಿನಿಮಾ ನಂತರ ಮುಂದುವರೆದ ಭಾಗವಾಗಿ ಕೆಜಿಎಫ್ 3 ಬರುತ್ತಾ ಎನ್ನುವ ಪ್ರಶ್ನೆಗಳು ಇದ್ದವು. ಈ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆದಿತ್ತು. ಆದರೆ, ಪ್ರಶಾಂತ್ ನೀಲ್ ಸಲಾರ್ ಚಿತ್ರದಲ್ಲಿ ತೊಡಗಿಸಿಕೊಂಡರು, ಎರಡು ಭಾಗಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ, ಡಿಸೆಂಬರ್ 22ರಂದು ಮೊದಲ ಭಾಗ ಬಿಡುಗಡೆಯಾಗಲಿದೆ. ನಂತರ ಪ್ರಶಾಂತ್ ನೀಲ್ ಜ್ಯೂನಿಯರ್ ಎನ್‌ಟಿಆರ್ ಜೊತೆಗೆ ಚಿತ್ರ ಮಾಡಲಿದ್ದಾರೆ.

 Prashanth Neel Affirms KGF 3 Collaboration with Yash, Reveals Script is Finalized

ಇತ್ತ ಯಶ್ ಕೂಡ ತಮ್ಮ 19ನೇ ಸಿನಿಮಾ ಟೈಟಲ್ ಘೊಷಣೆ ಮಾಡುವುದಾಗಿ ಹೇಳಿದ್ದಾರೆ. ಡಿಸೆಂಬರ್ 8ರಂದು ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಇದೆಲ್ಲದರ ನಡುವೆ ಅಭಿಮಾನಿಗಳಿಗೆ ಮತ್ತೊಂದು ಅಚ್ಚರಿ ಸುದ್ದಿ ಸಿಕ್ಕಿದೆ. ಹೌದು, ಕೆಜಿಎಫ್‌ 3 ಬರೋದು ಪಕ್ಕಾ ಆಗಿದೆ.

ಚಿತ್ರಕಥೆ ಸಿದ್ದವಾಗಿದೆ ಎಂದ ಪ್ರಶಾಂತ್ ನೀಲ್

ಇತ್ತೀಚೆಗೆ ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಕೆಜಿಎಫ್ 3 ಸಿನಿಮಾ ಬಗ್ಗೆ ಮಾತನಾಡಿದ್ದು, ಸ್ಕ್ರಿಪ್ಟ್ ಸಿದ್ದವಾಗಿದೆ ಎನ್ನುವ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದಾರೆ.

"ಕೆಜಿಎಫ್ 3 ಆಗಲಿದೆ. ನಾನು ನಿರ್ದೇಶಕನೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಯಶ್ ಅದರ ಭಾಗವಾಗಿರುತ್ತಾನೆ. ನಾವು ಅದರ ಸಲುವಾಗಿ ಅದನ್ನು ಘೋಷಿಸಲಿಲ್ಲ" ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

"ಈಗಾಗಲೇ ಸ್ಕ್ರಿಪ್ಟ್ ಸಿದ್ಧವಾಗಿದೆ. ನಾವು ಘೋಷಣೆ ಮಾಡುವ ಮೊದಲು ಸ್ಕ್ರಿಪ್ಟ್ ಅನ್ನು ಮತ್ತೆ ನೋಡುತ್ತೇವೆ. ಯಶ್ ತುಂಬಾ ಜವಾಬ್ದಾರಿಯುತ ವ್ಯಕ್ತಿ ಮತ್ತು ಕೇವಲ ವ್ಯವಹಾರಕ್ಕಾಗಿ ವಿಷಯಗಳನ್ನು ತಿಳಿಸುವುದಿಲ್ಲ, ನಾವು ಅದನ್ನು ಘೋಷಣೆ ಮಾಡುವ ಮೊದಲು ಎಲ್ಲಾ ಸಿದ್ಧತೆ ಮಾಡಿಕೊಂಡಿರಬೇಕು" ಎಂದು ಹೇಳಿದ್ದಾರೆ.

ಎನ್‌ಟಿಆರ್ ಜೊತೆ ನೀಲ್ ಸಿನಿಮಾ

ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್‌ಟಿಆರ್‌ನೊಂದಿಗೆ ತಮ್ಮ ಮೊದಲ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ, ತಾತ್ಕಾಲಿಕವಾಗಿ ಎನ್‌ಟಿಆರ್ 31 ಎಂದು ಹೆಸರಿಸಲಾಗಿದೆ. ಅದರ ಕುರಿತು ಮಾತನಾಡಿದ ಅವರು, 'ಸಲಾರ್' ನಂತರ ಅವರು 2024 ರಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ಹೇಳಿದರು.

ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರ 'ಸಲಾರ್: ಭಾಗ 1 - ಕದನ ವಿರಾಮ' ಡಿಸೆಂಬರ್ 22 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ 'ಸಲಾರ್' ಚಿತ್ರಕ್ಕೆ 400 ಕೋಟಿ ರೂಪಾಯಿ ಬಂಡವಾಳ ಹಾಕಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+