Salaar: ಸಲಾರ್ ನೋಡಿ ಬೇಜಾರ್ ಆಯ್ತು... ಪ್ರಶಾಂತ್ ನೀಲ್ ಸ್ಫೋಟಕ ಹೇಳಿಕೆ, ಯಶ್ ಸಿನಿಮಾಗೆ ಜೈ ಎಂದ ನೀಲ್!

ಕನ್ನಡ ಸಿನಿಮಾ ರಂಗದ ಪಾಲಿಗೆ 'ಕೆಜಿಎಫ್ ಚಾಪ್ಟರ್- 1' ಮತ್ತು 'ಕೆಜಿಎಫ್ ಚಾಪ್ಟರ್- 2' ಸಿನಿಮಾಗಳು ಸಿಕ್ಕಾಪಟ್ಟೆ ಮುಖ್ಯ ಎನ್ನಬಹುದು. ಯಾಕಂದ್ರೆ ಕೆಜಿಎಫ್ ಸಿನಿಮಾ ಸರಣಿಯ ಪರಿಣಾಮ, ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಿನಿಮಾ ರಂಗದ ಗತ್ತು ಇಡೀ ಜಗತ್ತಿಗೆ ಈಗ ಗೊತ್ತಾಗಿದೆ. ಕನ್ನಡ ಸಿನಿಮಾಗಳು ಅಂದ್ರೆ ಹೆಂಗೆಂಗೋ ಮಾತನಾಡುತ್ತಿದ್ದ ಪರಭಾಷಿಕರಿಗು ಇದೀಗ ಕನ್ನಡ ಸಿನಿಮಾಗಳ ಗತ್ತು ಗೊತ್ತಾಗಿದೆ. ಆದರೆ ಕೆಜಿಎಫ್ ಸಿನಿಮಾ ಸರಣಿಯ ಡೈರೆಕ್ಟರ್ ಇದೀಗ ತಮ್ಮದೇ ಸಿನಿಮಾ ಬಗ್ಗೆ ಬೇಸರ ಹೊರ ಹಾಕಿದ್ದಾರೆ!

ಹೌದು, ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ & ಪ್ರಶಾಂತ್ ನೀಲ್ ಅವರ ಕಾಂಬಿನೇಷ್ ಜೊತೆ ಬಂದಿದ್ದ ಕೆಜಿಎಫ್ ಸಿನಿಮಾ ಸರಣಿಯಿಂದ ಭಾರತೀಯ ಸಿನಿಮಾ ರಂಗದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿತ್ತು. ಕನ್ನಡ ಸಿನಿಮಾಗಳ ಕಲಾವಿದರು & ತಂತ್ರಜ್ಞರು ಸೇರಿದಂತೆ ಕನ್ನಡ ನಟ & ನಟಿಯರಿಗೆ ಕೂಡ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಭಾರಿ ಡಿಮ್ಯಾಂಡ್ ಬಂದಿದೆ.

Prabhas and Prashanth Neel s Salaar Chapter 2 Set to Break Records

ಹೀಗೆ 'ಕೆಜಿಎಫ್ ಚಾಪ್ಟರ್- 1' ಮತ್ತು 'ಕೆಜಿಎಫ್ ಚಾಪ್ಟರ್- 2' ಭಾರಿ ಭರ್ಜರಿ ಹಿಟ್ ಕಂಡ ನಂತರ ಪ್ರಶಾಂತ್ ನೀಲ್ ಅವರು, ತೆಲುಗು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು, 'ಸಲಾರ್' ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ, ತಮ್ಮದೇ ಸಿನಿಮಾ ಬಗ್ಗೆ ಇದೀಗ ನೀಲ್ ಬೇಸರ ಹೊರ ಹಾಕಿದ್ದಾರೆ! ಹಾಗಾದ್ರೆ ತಮ್ಮದೇ ಸಿನಿಮಾ 'ಸಲಾರ್' ಬಗ್ಗೆ ಪ್ರಶಾಂತ್ ನೀಲ್ ಹೀಗೆ ಬೇಸರ ಹೊರ ಹಾಕಿದ್ದು ಏಕೆ?

'ಸಲಾರ್' ಬಗ್ಗೆ ಪ್ರಶಾಂತ್ ನೀಲ್ ಬೇಸರ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್- 2' ದೊಡ್ಡ ಯಶಸ್ಸನ್ನು ಕಂಡ ನಂತರ, 'ಸಲಾರ್' ಸಿನಿಮಾ ಅದಕ್ಕಿಂತಲೂ ದೊಡ್ಡ ಸಕ್ಸಸ್ ಕಾಣುವ ನಿರೀಕ್ಷೆ ಇತ್ತು. ಆದರೆ ಆಗಿದ್ದೇ ಬೇರೆ, ಬಾಕ್ಸ್ ಆಫಿಸ್‌ನಲ್ಲಿ 'ಸಲಾರ್' ದೊಡ್ಡ ಮಟ್ಟದಲ್ಲಿ ಹಣ ಗಳಿಕೆ ಮಾಡಿ ಒಳ್ಳೆಯ ಕಲೆಕ್ಷನ್ ಮಾಡಿದ್ದರೂ 'ಸಲಾರ್' ಅಂದುಕೊಂಡಷ್ಟು ದೊಡ್ಡದಾಗಿ ಹಿಟ್ ಆಗಲಿಲ್ಲ ಅಂತಾ ನೀಲ್ ಬೇಸರ ಹೊರ ಹಾಕಿದ್ದಾರೆ.

'ಸಲಾರ್-2' ಹವಾ ಜೋರು ಗುರೂ!

ಪ್ರಶಾಂತ್ ನೀಲ್ ಅವರು ಹೀಗೆ 'ಸಲಾರ್' ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗದ ಕಾರಣಕ್ಕೆ 'ಸಲಾರ್-2' ದೊಡ್ಡ ಮಟ್ಟದಲ್ಲಿ ಮಾಡಲು ಸಜ್ಜಾಗಿದ್ದಾರೆಂಬ ಸುದ್ದಿ ಸಂಚಲನ ಸೃಷ್ಟಿಸಿದೆ! ಒಟ್ನಲ್ಲಿ ಪ್ರಶಾಂತ್ ನೀಲ್ ಅವರು ಇದೀಗ ಹೊಸ ಸವಾಲಿಗೆ ಸಜ್ಜಾಗಿದ್ದು, 'ಸಲಾರ್-2'ನ ಮೂಲಕ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಹೀಗಾಗಿಯೇ ಪ್ರಭಾಸ್ ಅಭಿಮಾನಿ ಬಳಗಕ್ಕೂ ಭಾರಿ ಭರ್ಜರಿ ಖುಷಿ ಆಗುತ್ತಿದೆ. ಮುಂದಿನ ದಿನಗಳಲ್ಲಿ 'ಸಲಾರ್-2' ಇನ್ನಷ್ಟು ಹವಾ ಎಬ್ಬಿಸುವ ನಿರೀಕ್ಷೆ ದಟ್ಟವಾಗಿದ್ದು, ಕನ್ನಡಿಗರ ಹೆಮ್ಮೆಯ ಸಂಸ್ಥೆ 'ಹೊಂಬಾಳೆ' ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+