Poonam Pandey: ನಾನು ಸತ್ತಿಲ್ಲ: ವಿಡಿಯೋ ಮೂಲಕ ನಟಿ ಪೂನಂ ಪಾಂಡೆ ಸ್ಪಷ್ಟನೆ
ಬಾಲಿವುಡ್ ನಟಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ ಎನ್ನುವ ಸುದ್ದಿ ಎಲ್ಲಡೆ ಹಬ್ಬಿತ್ತು. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿತ್ತು. ಆದರೆ ಇದೀಗ ಪೂನಂ ಪಾಂಡೆ ಬದುಕಿದ್ದಾರೆ ಎನ್ನುವ ಸ್ಪಷ್ಟನೆ ಸಿಕ್ಕಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇಂದು ಬೆಳಗ್ಗೆ ವಿಡಿಯೋ ಹೇಳಿಕೆ ಮೂಲಕ ಪೂನಂ ಪಾಂಡೆ ಸಾವಿನ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. "ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ನಾನು ಬಯಸುತ್ತಿದ್ದೇನೆ. ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದೇ ತನ್ನ ಸಾವಿನ ಸುದ್ದಿಯ ಉದ್ದೇಶ" ಎಂದು ಪೂನಂ ಪಾಂಡೆ ವಿಡಿಯೋದಲ್ಲಿ ಹೇಳಿದ್ದಾರೆ.

ಮಾಡೆಲ್ ಹಾಗೂ ನಟಿಯಾಗಿದ್ದ ಪೂನಂ ಪಾಂಡೆ ಸದಾ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದರು. ಇದೀಗ ಸಾವಿನ ವಿಚಾರದಲ್ಲೂ ವಿವಾದ ಎದಿದ್ದು, ಪೂನಂ ಪಾಂಡೆ ಸ್ಪಷ್ಟನೆ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ಕೆಟ್ಟ ಪ್ರಚಾರ, ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ಸರಿಯಲ್ಲ, ಕೆಲವು ಅಭಿಮಾನಿಗಳು ಸೂಕ್ಷ್ಮವಾಗಿರುತ್ತಾರೆ. ನಿಮ್ಮ ಪ್ರಚಾರಕ್ಕೆ ಜನರ ಭಾವನೆ ಬಳಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.
ನಿನ್ನೆ ಪೂನಂ ಪಾಂಡೆ ಸಾವಿನ ಸುದ್ದಿ ಹೊರಬಿದ್ದ ಬಳಿಕ ಸತ್ಯಾಸತ್ಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು. ಕೆಲವರು ಪೂನಂ ಪಾಂಡೆ ಸತ್ತಿರುವುದು ಸತ್ಯ ಒಪ್ಪಿಕೊಂಡಿದ್ದರೆ, ಇನ್ನೂ ಕೆಲವರು ಇದು ಆಕೆಯ ಪ್ರಚಾರದ ಸ್ಟಂಟ್ ಎಂದು ಊಹಿಸಿದ್ದರು. ಆದರೆ ಪೂನಂ ಪಾಂಡೆ ಸಾವಿನ ಬಗ್ಗೆ ಆಕೆಯ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಳ್ಳಲಾಗಿತ್ತು ಹೊರತು. ಆಕೆಯ ಕುಟುಂಬಸ್ಥರಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈ ಚರ್ಚೆಗಳು ವಿಪರೀತವಾಗುತ್ತಿದಂತೆ ಇದೀಗ ನಟಿಯಿಂದಲೇ ಸ್ಪಷ್ಟನೆ ಸಿಕ್ಕಿದೆ.












Click it and Unblock the Notifications