Pavithra Gowda: ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರ ಆಸೆಗೆ ನ್ಯಾಯಾಲಯ ತಣ್ಣೀರು ಎರಚಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಪವಿತ್ರಾಗೆ ಕೋರ್ಟ್ ಆದೇಶ ಬೇಸರ ತಂದಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಕೋರ್ಟ್ ಮುಂದೂಡಿದೆ.

ಪವಿತ್ರಾ ಗೌಡ ಹಾಗೂ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ನ್ಯಾಯಾಲಯ ಮುಂದೂಡಿದೆ. ಹೀಗಾಗಿ ದರ್ಶನ್‌ ಹಾಗೂ ಪವಿತ್ರಾ ಗೌಡ ಹೊರಬರುವ ಆಸೆಗೆ ಕೋರ್ಟ್ ತೀರ್ಪು ತಣ್ಣೀರು ಎರಚಿದೆ. ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

Pavithra Gowda s bail application hearing adjourned

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಗೆ ದಿನಾಂಕ ಇಂದು ನಿಗಧಿಯಾಗಿತ್ತು. ಆದರೆ ಕೋರ್ಟ್ ಈ ಅರ್ಜಿ ವಿಚಾರಣೆಯನ್ನೂ ಮುಂದೂಡಿದೆ. ಹೀಗಾಗಿ ಬೆಂಗಳೂರು ಸೆಷನ್ ಕೋರಟ್ ವಿಚಾರಣೆ ನಡೆಸಿದ್ದು ಇಂದು ಜಾಮೀನು ಸಿಗಲಿದೆ ಎಂದು ಭಾವಿಸಿದ್ದ ನಟ ದರ್ಶನ್‌ಗೆ ಮತ್ತೊಮ್ಮೆ ನಿರಾಸೆಯಾಗಿದೆ.

ಕೃತ್ಯದಲ್ಲಿ ಪವಿತ್ರ ಗೌಡ ಪಾತ್ರ ಹೆಚ್ಚು ಇಲ್ಲ ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಪವಿತ್ರಾ ಗೌಡ ಪರ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದರು. ಚಪ್ಪಲಿಯಿಂದ ಹೊಡೆದ ಮಾತ್ರಕ್ಕೆ ಕೊಲೆ ಮಾಡಿದಂತಾಗುತ್ತದಾ? ಕೃತ್ಯದ ವೇಳೆ ಪವಿತ್ರಾಳನ್ನು ಮನೆಗೆ ಕರೆದುಕೊಂಡು ಹೋಗಲಾಗಿದೆ. ಇದರಲ್ಲಿ ಕೊಲೆಗೆ ಒಳಸಂಚು ಏನಿದೆ? ಎಂದು ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ. ಈ ಎಲ್ಲಾ ವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

ಇನ್ನೂ ಇಂದು ದರ್ಶನ್ ಪರ ವಕೀಲ ಇಲ್ಲದೇ ಇದ್ದರಿಂದ ಜಾಮೀನು ವಿಚಾರಣೆ ಮುಂದೂಡಲಾಗಿದೆ. ಪ್ರಕರಣದಲ್ಲಿ ಬಂಧಿತರಾದ 17 ಆರೋಪಿಗಳ ಪೈಕಿ ಮೂರು ಜನರಿಗೆ ಈಗಾಗಲೆ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್‌ಗೂ ಇಂದೇ ಜಾಮೀನು ಸಿಗಲಿದೆ ಎಂಬ ಆಸೆಯಲ್ಲಿದ್ದ ಅಭಿಮಾನಿಗಳಿಗೆ ಇಂದೂ ನಿರಾಸೆಯಾಗಿದೆ. ದರ್ಶನ್ ಸೇರಿ ಮೂವರ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 30ಕ್ಕೆ ಹಾಗೂ ಇನ್ನಿತರ 5 ಆರೋಪಿಗಳ ಜಾಮೀನು ವಿಚಾರಣೆಯನ್ನು ನ್ಯಾಯಾಲಯವು ಅಕ್ಟೋಬರ್ 5ಕ್ಕೆ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+