Darshan Thoogudeepa: ಕೋರ್ಟ್‌ನಲ್ಲಿ ಪವಿತ್ರಾ ಭಾವುಕ: ದರ್ಶನ್ ಪವಿತ್ರಾ ಮುಖಾಮುಖಿ ವೇಳೆ ಆಗಿದ್ದೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳು ಇಂದು ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ದರ್ಶನ್ ತೂಗುದೀಪ ಕೋರ್ಟ್‌ನಲ್ಲಿ ಮುಖಾಮುಖಿಯಾಗಿದ್ದಾರೆ. ಸತತ ಆರು ತಿಂಗಳ ಬಳಿಕ ಇಬ್ಬರು ನೇರವಾಗಿ ಭೇಟಿ ಮಾಡಿದ್ದು ಕೋರ್ಟ್‌ನಲ್ಲೇ. ಇದರಿಂದ ಪವಿತ್ರಾ ಗೌಡ ಭಾವುಕರಾಗಿದ್ದು ಕಂಡು ಬಂದಿದೆ.

ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ತೂಗುದೀಪ ಜೈಲುವಾಸ ಅನುಭವಿಸಿದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಜೈಲಿಗೆ ಹೋದ ನಂತರ ಇಲ್ಲಿಯವರೆಗೆ ಪವಿತ್ರಾ ಹಾಗೂ ದರ್ಶನ್ ಇಬ್ಬರೂ ಕೂಡ ಮುಖಾಮುಖಿಯಾಗಿರಲಿಲ್ಲ. ಆದರಿಂದು ಕೋರ್ಟ್‌ನಲ್ಲಿ ಇವರಿಬ್ಬರು ಭೇಟಿ ಮಾಡಿದ್ದಾರೆ.

pavithra gowda emotional infront of darshan thoogudeepa in court

ಪವಿತ್ರಾ ಬೆನ್ನು ತಟ್ಟಿ ಸಂತೈಸಿದ ಡಿ-ಬಾಸ್

ಸೂಚಿಸಿದ ಸಮಯಕ್ಕೂ ಮುಂಚಿತವಾಗಿ ಕೋರ್ಟ್‌ಗೆ ಆಗಮಿಸಿದ ಪವಿತ್ರಾ ಗೌಡ ದರ್ಶನ್ ಬರುವಿಕೆಗಾಗಿ ಕಾದು ಕುಳಿತಿದ್ದರು. ದರ್ಶನ್ ಕೋರ್ಟ್‌ಗೆ ಆಗಮಿಸುತ್ತಿದ್ದಂತೆ ಅವರನ್ನು ಮಾತನಾಡಿಸಲು ಪವಿತ್ರಾ ಪ್ರಯತ್ನ ಪಟ್ಟರು. ಆದರೆ ಅದಕ್ಕೆ ದರ್ಶನ್ ಅವಕಾಶ ನೀಡಲಿಲ್ಲ. ಈ ವೇಳೆ ಪವಿತ್ರಾ ಕಣ್ಣಲ್ಲಿ ನೀರು ಕಾಣಿಸಿಕೊಂಡಿದೆ. ಭಾವುಕರಾದ ಪವಿತ್ರಾ ಅವರ ಬೆನ್ನನ್ನು ತಟ್ಟಿ ದರ್ಶನ್ ಅವರನ್ನು ಸಂತೈಸಿದ್ದಾರೆ. ಪವಿತ್ರಾ ದರ್ಶನ್ ಅವರನ್ನು ಮಾತನಾಡಿಸಲು ಮುಂದಾಗಿ ಹತ್ತಿರ ಹೋದರೆ, ದರ್ಶನ್ ಬೆನ್ನು ತಟ್ಟಿ ಮುಂದೆ ಸಾಗಿದ್ದಾರೆ.

ಹೌದು... ಇಂದು ಕೋರ್ಟ್ ಆವರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಮಾತನಾಡುತ್ತಾರೆ ಎಂದು ಎಲ್ಲರ ಊಹಿಸಿದ್ದರು. ಆದರೆ ದರ್ಶನ್ ಇದಕ್ಕೆ ಅವಕಾಶವನ್ನು ಕೊಟ್ಟಿಲ್ಲ. ಪವಿತ್ರಾ ದರ್ಶನ್ ಅವರ ಬಳಿ ಬರುತ್ತಿದ್ದಂತೆ ಅವರ ಬೆನ್ನು ತಟ್ಟಿ ಸಂತೈಸಿ ಮುಂದೆ ಸಾಗಿದ್ದಾರೆ. ಇದರಿಂದ ದರ್ಶನ್ ಪವಿತ್ರಾ ಅವರನ್ನು ಕಡೆಗಣಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಇಷ್ಟಾದರೂ ಪವಿತ್ರಾ ದರ್ಶನ್ ಕಡೆಗೆ ತಿರುಗಿ ನೋಡುವುದಿಲ್ಲ. ಅವರು ಬದಲಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪವಿತ್ರಾ ಜೈಲಿನಿಂದ ಹೊರ ಬಂದ ದಿನವೇ ದರ್ಶನ್ ಹೆಸರಿನಲ್ಲಿ ಪೂಜೆ ಮಾಡಿಸಿದ್ದರು. ಇನ್ನೂ ದರ್ಶನ್ ಎದುರಿಗೆ ಬಂದರೆ ಮಾತನಾಡಿಸದೇ ಇರುತ್ತಾರಾ? ಖಂಡಿತಾ ಇಲ್ಲ. ಕೋರ್ಟ್‌ನಲ್ಲಿ ಆಗಿದ್ದೂ ಕೂಡ ಇದೆ.

ಕೋರ್ಟ್‌ನಲ್ಲಿ ದರ್ಶನ್ ಅವರನ್ನು ಪವಿತ್ರಾ ಗೌಡ ಮಾತನಾಡಿಸಲು ಮುಂದಾಗುತ್ತಾರೆ. ಆದರೆ ಎದುರಿಗೆ ಬಂದ ಪವಿತ್ರಾಳನ್ನ ದರ್ಶನ್ ಬೆನ್ನು ತಟ್ಟಿ ಸುಮ್ಮನಾಗುತ್ತಾರೆ. ಇಲ್ಲಿ ಇವರಿಬ್ಬರ ನಡುವೆ ಯಾವುದೇ ಮಾತು ಕತೆ ನಡೆಯುವುದಿಲ್ಲ. ಇದರಿಂದ ಪವಿತ್ರಾ ತುಂಬಾ ಬೇಸರಗೊಂಡಿದ್ದಾರೆ.

pavithra gowda emotional infront of darshan thoogudeepa in court

ವಿಜಯಲಕ್ಷ್ಮೀ ಹಾದಿ ಹಿಡಿದ್ರಾ ಪವಿತ್ರಾ?

ಇನ್ನೂ ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಬೆಂಗಳೂರು ಬಿಟ್ಟು ಹೊರ ರಾಜ್ಯಗಳಿಗೆ ತೆರಳದೇ ಇರಲು ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ದರ್ಶನ್ ತಮ್ಮ ತಾಯಿಯನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ಒಪ್ಪಿಗೆ ಕೂಡ ಸೂಚಿಸಿತ್ತು. ಅದರಂತೆ ಜನವರಿ5 ರವರೆಗೆ ದರ್ಶನ್ ಮೈಸೂರಿನಲ್ಲಿ ಇದ್ದು ಬೆಂಗಳೂರಿಗೆ ಬಂದಿದ್ದಾರೆ.

ಅದೇ ರೀತಿ ಪವಿತ್ರಾ ಗೌಡ ಕೂಡ ಒಂದು ತಿಂಗಳ ಕಾಲ ಬೇರೆ ರಾಜ್ಯದ ದೇವಸ್ಥಾನಗಳಿಗೆ ತೆರಳಲು ಅವಕಾಶ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಾವು ಮಾನಸಿಕವಾಗಿ ಕುಗ್ಗಿದ್ದು ಬೇರೆ ರಾಜ್ಯಗಳ ದೇವಸ್ಥಾನಕ್ಕೆ ತೆರಳಲು ಅನುಮತಿ ನೀಡುವಂತೆ ಕೋರ್ಟ್‌ಗೆ ತಮ್ಮ ಪರ ವಕೀಲರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ.

pavithra gowda emotional infront of darshan thoogudeepa in court

ಈ ಹಿಂದೆ ದರ್ಶನ್ ಜೈಲಿನಲ್ಲಿ ಇರುವಾಗ ಪತ್ನಿ ವಿಜಯಲಕ್ಷ್ಮೀ ದೇಶದ ಶಕ್ತಿ ದೇವರುಗಳಿಗೆ ಭೇಟಿ ನೀಡಿ ದರ್ಶನ್ ಬಿಡುಗಡೆಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದರು. ಕೊನೆಗೂ ವಿಜಯಲಕ್ಷ್ಮೀ ಪೂಜಾ ಫಲ ಈಡೇರಿದ್ದು ದರ್ಶನ್ ಜೈಲಿನಿಂದ ಹೊರಬಂದಿದ್ದಾರೆ. ದರ್ಶನ್ ಜೈಲಿನಿಂದ ಹೊರಬಂದ ಬಳಿಕ ತಮ್ಮನ್ನು ಮಾತನಾಡಿಸುತ್ತಾರೆ ಅನ್ನೋ ಆಸೆಯಲ್ಲಿ ಪವಿತ್ರಾ ಗೌಡ ಇದ್ದರು. ತಮ್ಮ ಹುಟ್ಟುಹಬ್ಬದಂದಾದರೂ ದರ್ಶನ್ ಮಾತನಾಡಿಸಬಹುದು ಎಂದು ಕಾದಿದ್ದರು ಪವಿತ್ರಾ. ಆದರೆ ದರ್ಶನ್ ಪವಿತ್ರಾ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿಲ್ಲ.

ಹೀಗಾಗಿ ಇಂದು ಕೋರ್ಟ್‌ನಲ್ಲಾದರೂ ದರ್ಶನ್ ಮಾತನಾಡಿಸುತ್ತಾರೆ ಎನ್ನುವ ಆಸೆಯಲ್ಲಿ ಪವಿತ್ರಾ ಇದ್ದರು. ಆದರೆ ಅದೂ ಕೂಡ ಆಗಿಲ್ಲ. ಆದರೆ ಒಂದು ಆಕೆಗೆ ನೆಮ್ಮದಿಯ ವಿಚಾರ ಅಂದರೆ ದರ್ಶನ್ ಆಕೆಯ ಬೆನ್ನು ತಟ್ಟಿ ಸಂತೈಸಿರುವುದು. ಇದೊಂದು ಕಾರಣಕ್ಕೆ ಪವಿತ್ರಾ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

pavithra gowda emotional infront of darshan thoogudeepa in court

ದರ್ಶನ್ ಆರೋಗ್ಯ ಸುಧಾರಣೆಗೆ ಪವಿತ್ರಾ ಟೆಂಪಲ್ ರನ್

ಮತ್ತೊಂದು ವಿಚಾರ ಅಂದರೆ ಪವಿತ್ರಾ ಗೌಡ ಅವರು ದರ್ಶನ್ ಆರೋಗ್ಯ ಸುಧಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ. ಅವರ ಹೆಸರಲ್ಲಿ ಪೂಜೆ ಹಾಗೂ ಸೇವೆ ಮಾಡಿ ದೇವರ ಅನುಗ್ರಹ ಪಡೆಯಲು ಹೊರ ರಾಜ್ಯದ ಶಕ್ತಿ ದೇವರುಗಳ ದೇವಸ್ಥಾನಕ್ಕೆ ಭೇಟಿ ನೀಡಲು ಪವಿತ್ರಾ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಇಂದು ತಮ್ಮ ಪರ ವಕೀಲರಿಂದ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ. ಈ ಅರ್ಜಿ ವಿಚಾರಣೆ ಇಂದು ಅಥವಾ ನಾಳೆ ನಡೆಯುವ ಸಾಧ್ಯತೆ ಇದ್ದು ಪವಿತ್ರಾ ಗೌಡ ಅವರಿಗೆ ಬೇರೆ ರಾಜ್ಯಗಳಿಗೆ ತೆರಳಲು ಕೋರ್ಟ್ ಅನುಮತಿ ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+