Darshan Thoogudeepa: ಭರ್ಜರಿ ಶಾಪಿಂಗ್ ಮಾಡಿದ ಪವಿತ್ರಾ ಗೌಡ: ದರ್ಶನ್‌ಗೆ ಖರೀದಿ ಮಾಡಿದ್ದೇನು?
ಜೈಲಿನಿಂದ ಹೊರ ಬಂದ ಮೇಲೆ ಒಬ್ಬೊಂಟಿ ಆಗಿರುವ ಪವಿತ್ರಾ ಗೌಡ ಹೊಸ ಹೆಜ್ಜೆ ಇಡೋದಕ್ಕೆ ಸಜ್ಜಾಗಿದ್ದಾರೆ. ಏಕಾಂಗಿಯಾಗಿ ಕೆಲಸ ಶುರು ಮಾಡಲು ಸರ್ವಸನ್ನದರಾಗಿದ್ದು ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಹಾಗಾದರೆ ಪವಿತ್ರಾ ಗೌಡ ಖರೀದಿ ಮಾಡಿದ್ದು ಏನು? ಪೇಮಿಗಳ ದಿನವೇ ರೆಡ್ ಕಾರ್ಪೆಟ್ ಸ್ಟುಡಿಯೋ ರೀ ಲಾಂಚ್ ಮಾಡ್ತಾರಾ ಪವಿತ್ರಾ? ದರ್ಶನ್ ಗೆ ಗೌಡ್ತಿ ಖರೀದಿ ಮಾಡಿದ ಗಿಫ್ಟ್ ಏನು?
ಶ್ರೀಮಂತನಾದರೂ ಕುಚೇಲನಾದರೂ ಕೂಡ ಟೈಮ್ ಬಂದಾಗ ಎಲ್ಲರೂ ಗಂಟೂಮೂಟೆ ಕಟ್ಟಲೇಬೇಕು. ಭಗವಂತ ಆಡಿಸಿದಂತೆ ಎಲ್ಲರೂ ಕೂಡ ಆಡಲೇಬೇಕು. ಒಂದು ಕಾಲದಲ್ಲಿ ಸುಬ್ಬಾ ಸುಬ್ಬಿ ಅಂದರೆ ಆರ್‌ಆರ್ ನಗರದಲ್ಲಿ ಮೇನ್ ಅಟ್ರ್ಯಾಕ್ಟ್ ಆಗಿದ್ದರು. ಸಾರಥಿಯ ಸಾಮ್ರಾಜ್ಯದಲ್ಲಿ ಇದ್ದ ಗೌಡ್ತಿ ಆಡಿದ್ದೇ ಆಟವಾಗಿ ಹೋಗಿತ್ತು. ಆದರೀಗ ಸುಬ್ಬನೂ ಇಲ್ಲ ಸುಬ್ಬಿಗೆ ಖುಷಿಯೂ ಇಲ್ಲ. ಹೀಗಾಗಿ ತನ್ನ ಬದುಕಿನ ಪಯಣದತ್ತ ಗುರಿ ನೆಟ್ಟಂತೆ ಕಾಣಿಸುತ್ತಿದೆ ಪವಿತ್ರಾ ಗೌಡ. ಟೆಂಪಲ್ ರನ್ ಮಾಡ್ತಾ ರೆಡ್ ಕಾರ್ಪೇಟ್ ಸ್ಟೂಡಿಯೋ ರೀ ಲಾಂಚ್‌ಗೆ ಭರ್ಜರಿ ತಯಾರಿ ಮಾಡುತ್ತಿದ್ದಾರೆ ಪವಿತ್ರಾ ಗೌಡ.

ಭರ್ಜರಿ ಶಾಪಿಂಗ್ ಮಾಡಿದ ಪವಿತ್ರಾ ಗೌಡ
ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರಿಂದ ಪವಿತ್ರಾ ಕನಸಿನ ರೆಡ್ ಕಾರ್ಪೆಟ್ ಸ್ಟೂಡಿಯೋಗೆ ಬೀಗ ಬಿದ್ದಿತ್ತು. ನಾಲ್ಕೈದು ತಿಂಗಳಿನಿಂದ ಎಲ್ಲಾ ಕೆಲಸಗಳು ನಿಂತು ಹೋಗಿದ್ದವು. ಆದರೀಗ ಆ ಕನಸಿಗೆ ಮತ್ತೆ ಮರು ಜೀವ ತಂದಿದ್ದಾರೆ. ರೆಡ್ ಕಾರ್ಪೆಟ್ ರೀ ಲಾಂಚ್ ಮಾಡುವ ಸಲುವಾಗಿ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ.
ಇತ್ತೀಚೆಗೆ ದೆಹಲಿಗೆ ಹೋಗಿ ಶಾಪಿಂಗ್ ಮಾಡಿಕೊಂಡು ಬಂದಿದ್ದ ಪವಿತ್ರಾ ಗೌಡ ಈಗ ಬನಾರಸ್‌ನಲ್ಲೂ ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಪವಿತ್ರಾ ಗೌಡರ ರೆಡ್ ಕಾರ್ಪೆಟ್‌ಗೆ ಬೆನ್ನೆಲುಬಾಗಿ ನಿಂತಿದ್ದೇ ದರ್ಶನ್. ಆದರೀಗ ದರ್ಶನ್ ಅವರ ಸುಳಿವೇ ಇಲ್ಲ. ಸುಬ್ಬಿಯನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ವಿಜಯಲಕ್ಷ್ಮೀಯ ಅಷ್ಟದಿಗ್ಬಂಧನದಲ್ಲಿ ಲಾಕ್ ಆಗಿರುವ ದಾಸ ಏಳು ಸುತ್ತಿನ ಕೋಟೆ ದಾಟಿ ಬರೋ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಪವಿತ್ರಾ ಗೌಡ ತಮ್ಮ ಬದುಕಿನ ಪಯಣಕ್ಕೆ ಹೊಸ ಮುನ್ನುಡಿ ಇಡುತ್ತಿದ್ದಾರೆ. ಅಲ್ಲದೆ ಪ್ರೇಮಿಗಳ ದಿನವೇ ಇದನ್ನು ರೀ ಲಾಂಚ್ ಮಾಡುವ ತಯಾರಿಯಲ್ಲಿದ್ದಾರೆ ಪವಿತ್ರಾ ಎನ್ನಲಾಗುತ್ತಿದೆ.
ದರ್ಶನ್‌ಗೂ ಶಾಪಿಂಗ್ ಮಾಡಿದ ಪವಿತ್ರಾ?
ರೆಡ್ ಕಾರ್ಪೆಟ್ ಸ್ಟೂಡಿಯೋ ರೀ ಲಾಂಚ್ ಮಾಡುವ ತಯಾರಿಯಲ್ಲಿ ಇರುವ ಪವಿತ್ರಾ ಇದಕ್ಕಾಗಿ ಸಾಕಷ್ಟು ತಯಾರಿಯಲ್ಲಿ ಇದ್ದಾರೆ. ಅಲ್ಲದೆ ಇದನ್ನು ರೀ ಲಾಂಚ್ ಮಾಡಲು ದರ್ಶನ್ ಬರಬಹುದು ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ. ಇದಕ್ಕಾಗಿ ದರ್ಶನ್‌ಗೂ ಪವಿತ್ರಾ ಹೊಸ ಬಟ್ಟೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ದಾಸ ಸುಬ್ಬಿಯ ಕರೆಗೆ ಓಗೊಟ್ಟು ಬಂದರೆ ರೆಡ್ ಕಾರ್ಪೆಟ್ ಸ್ಟೂಡಿಯೋ ಖ್ಯಾತಿ ಹೆಚ್ಚಾಗಲಿದೆ. ಹೀಗಾಗಿ ತೆರೆಮರಿಯಲ್ಲಿ ದರ್ಶನ್ ಭೇಟಿ ಮಾಡುವ ಸುಬ್ಬಿಯ ಪ್ರಯತ್ನಗಳು ನಡೆದಿವೆ ಎನ್ನುವ ಮಾತುಗಳು ಕೇಳಿ ಬಂದಿವೆ.
ದರ್ಶನ್ ಮೈಸೂರಿನಲ್ಲಿ ಇರಲು ಮತ್ತೆ ಕೋರ್ಟ್ ಅನುಮತಿ
ಇನ್ನೂ ದರ್ಶನ್ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಗ್ ಅಪ್ಡೇಟ್ ಒಂದು ಬಂದಿದೆ. ದರ್ಶನ್ ಮೈಸೂರಿನಲ್ಲಿ ಇರಲು ಮತ್ತೆ ಕೋರ್ಟ್ ಅನುಮತಿ ನೀಡಿದೆ. ಫೆಬ್ರವರಿ 10ನೇ ತಾರೀಖಿನವರೆಗೂ ಮೈಸೂರಿನಲ್ಲಿ ಇರಲು ಕೋರ್ಟ್ ಅನುಮತಿ ನೀಡಿದೆ. ಜಾಮೀನು ಬಳಿಕ ಮೂರನೇ ಬಾರಿ ದರ್ಶನ್ ಅವರಿಗೆ ಕೋರ್ಟ್ ಮೈಸೂರಿನಲ್ಲಿ ಇರಲು ಅವಕಾಶ ಕೊಟ್ಟಿದೆ. ವೈದ್ಯರ ಸಮಾಲೋಚನೆ, ಫಾರ್ಮ್‌ಹೌಸ್, ತಾಯಿ ಭೇಟಿ ಹೀಗೆ ಮೂರು ಕಾರಣಕ್ಕಾಗಿ 57ನೇ CCH ಕೋರ್ಟ್ ಮೈಸೂರಿನಲ್ಲಿ ಇರಲು ಅನುಮತಿ ಕೊಟ್ಟಿದೆ.
ಒಟ್ಟಿನಲ್ಲಿ ಪವಿತ್ರಾ ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡ, ಯಾವುದೇ ದೇವರನ್ನು ಭೇಟಿ ಮಾಡಿದರೂ ಕೂಡ ಮತ್ತೆ ದರ್ಶನ್ ಪಡೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಹಾಕಿದ ಬೇಲಿಯಿಂದ ಹೊರಬರಲು ಆಗದ ಸ್ಥಿತಿಯಲ್ಲಿ ಇದ್ದಾರೆ. ಈ ಬೇಲಿಯನ್ನು ದಾಟಿ ದರ್ಶನ್ ಅವರನ್ನು ಭೇಟಿ ಮಾಡುವುದು ಪವಿತ್ರಾಗೂ ಕಷ್ಟ ಇದೆ. ಹೀಗಾಗಿ ಸುಬ್ಬಿಗೆ ಇನ್ನುಮುಂದೆ ಸುಬ್ಬ ಬರಿ ನೆನಪು ಮಾತ್ರ.












Click it and Unblock the Notifications