Actor Darshan: ದರ್ಶನ್‌ಗೆ ಶಾಕ್ ಕೊಟ್ಟ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಒಂದರ ಹಿಂದೆ ಒಂದು ಸಂಕಷ್ಟ ಎದುರಾಗುತ್ತಿವೆ. ಒಂದು ಕಡೆ ಪೊಲೀಸರಿಗೆ ದರ್ಶನ್ ವಿರುದ್ಧ ಮಹತ್ವದ ಸಾಕ್ಷಿಗಳು ಸಿಗುತ್ತಿದ್ದರೆ ಮತ್ತೊಂದು ಕಡೆ ದರ್ಶನ್‌ಗೆ ಜೈಲೂಟಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗುತ್ತಿದೆ. ಮನೆ ಊಟಕ್ಕಾಗಿ ಎಷ್ಟು ಬೇಡಿಕೆ ಇಟ್ಟರೂ ಅವರಿಗೆ ನಿರಾಸೆಯಾಗುತ್ತಿದ್ದು, ಜೈಲೂಟವನ್ನೇ ಸೇವಿಸಬೇಕಾಗಿದೆ.

ನಟ ದರ್ಶನ್‌ ಮನೆ ಊಟ ನೀಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು, ಮನೆ ಊಟ ನೀಡುವ ಬಗ್ಗೆ ಜೈಲು ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ಕೊಟ್ಟಿತ್ತು. 10 ದಿನಗಳ ಒಳಗಾಗಿ ನಿರ್ಣಯವನ್ನು ತೆಗೆದುಕೊಳ್ಳಲು ಹೇಳಿತ್ತು, ಈಗ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ದರ್ಶನ್‌ಗೆ ಮನೆಯೂಟವನ್ನು ನಿರಾಕರಿಸಿದ್ದು, ಕೊಲೆ ಆರೋಪಿಗೆ ಮನೆಯೂಟ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

parappana agrahara Jail Authorities Deny Actor Darshan Home Food

ಆಗಸ್ಟ್ 20ರಂದು ದರ್ಶನ್ ಮನೆಯೂಟ ಅರ್ಜಿಯ ವಿಚಾರಣೆ ನಡೆಯಲಿದೆ. ಜೈಲಾಧಿಕಾರಿಗಳು ಈಗಾಗಲೇ ದರ್ಶನ್‌ಗೆ ಮನೆಯೂಟ ಕೊಡದೇ ಇರಲು ನಿರ್ಧಾರ ಮಾಡಿದ್ದು, ಈ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ಕೊಡಲು ವರದಿಯನ್ನು ಸಿದ್ದಪಡಿಸಿಕೊಳ್ಳುತ್ತಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ 4 ಸಾವಿರಕ್ಕಿಂತ ಹೆಚ್ಚು ಜನರು ಬಂಧಿಯಾಗಿದ್ದಾರೆ. ಎಲ್ಲರೂ ಮನೆ ಊಟ ಕೇಳಿದರೆ ಜೈಲಿನ ಊಟ ಮಾಡುವವರು ಇರುವುದಿಲ್ಲ. ದರ್ಶನ್‌ಗೆ ಮನೆಯೂಟಕ್ಕೆ ಒಪ್ಪಿಗೆ ಕೊಟ್ಟರೆ ಉಳಿದ ಆರೋಪಿಗಳು, ಖೈದಿಗಳು ಕೂಡ ಮನೆಯೂಟ ಕೇಳಬಹುದು ಅದರಿಂದ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ಜೈಲಿನ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಲಿದ್ದಾರೆ.

ದರ್ಶನ್ ಅವರಿಗೆ ಜೈಲಿನಲ್ಲೇ ಉತ್ತಮ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂದು ಜೈಲಾಧಿಕಾರಿಗಳು ಕೋರ್ಟ್‌ಗೆ ವರದಿಯಲ್ಲಿ ಸಲ್ಲಿಸಲಿದ್ದಾರೆ. ದರ್ಶನ್‌ಗೆ ಮನೆ ಊಟ ತಿನ್ನುವ ಭಾಗ್ಯ ಸಿಗುವುದು ಬಹುತೇಕ ಅನುಮಾನವಾಗಿದೆ. ಜಾಮೀನು ಪಡೆದು ಹೊರಬಂದ ಬಳಿಕವಷ್ಟೇ ಅವರು ಮನೆ ಊಟ ತಿನ್ನಲು ಅವಕಾಶ ಸಿಗಲಿದೆ.

ದರ್ಶನ್‌ ವಿರುದ್ಧ ಮತ್ತೊಂದು ಸಾಕ್ಷಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ರೇಣುಕಾಸ್ವಮಿ ರಕ್ತದ ಕಲೆಗಳು ದರ್ಶನ್‌ ಬಟ್ಟೆಗಳ ಇರುವುದು ದೃಢಪಟ್ಟಿದೆ. ಇದರಿಂದ ದರ್ಶನ್‌ಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ. ದರ್ಶನ್ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಶರ್ಟ್ ಅನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+