ರೇ*ಪ್ ಮಾಡೋ ಶಕ್ತಿ ಇಲ್ಲ: 'ಯಾರನ್ನೂ ಬಿಡಲ್ವಂತೆ' ಎಂದವರಿಗೆ ಓಂ ಪ್ರಕಾಶ್ ರಾವ್ ಹೇಳಿದ್ದೇನು?
ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಓಂ ಪ್ರಕಾಶ್ ರಾವ್ ಅವರು ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ ಇವರ ಬಗ್ಗೆ ಕೆಲ ವದಂತಿಗಳು ಕೂಡ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಈ ಬಗ್ಗೆ ಅಚ್ಚರಿ ವಿಚಾರಗಳನ್ನು ಓಂ ಪ್ರಕಾಶ್ ಅವರೇ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಓಂ ಪ್ರಕಾಶ್ ರಾವ್ ಯಾರನ್ನೂ ಬಿಡಲ್ವಂತೆ" ಎಂಬ ರೂಮರ್ ಬಗ್ಗೆಯೂ ಮಾತನಾಡಿರುವ ಅವರು ನೇರವಾಗಿ ಉತ್ತರ ನೀಡಿದ್ದಾರೆ.
'ನನಗೆ ಮದುವೆ ಆಗಿದೆ, ಮಗು ಇತ್ತು. ಅವರನ್ನು ಓಂ ಪ್ರಕಾಶ್ ಬಿಟ್ಟುಬಿಟ್ಟ, ಅವನು ಸರಿಯಿಲ್ಲ ಅಂತಲೂ ವದಂತಿಗಳಿವೆ. ನಾನು ನಿಜಕ್ಕೂ ಒಳ್ಳೆಯವನಾ ಅಥವಾ ಕೆಟ್ಟವನಾ? ನನ್ನನ್ನ ನಾನು ಯಾವ ರೀತಿ ಜಡ್ಜ್ ಮಾಡಬೇಕು ಅಂತಾ ಗೊತ್ತಾಗ್ತಿಲ್ಲ. ಬಹುಶಃ ನನಗೆ ಅವರ ಜೊತೆ ಜೀವನ ಮಾಡೋ ಅವಕಾಶ ಸಿಗಲಿಲ್ವೇನೋ? ಅತವಾ ಅವರೇ ಒಳ್ಳೆಯವರು ಇರಬಹುದು, ನಾನೇ ಕೆಟ್ಟವನಾಗಿರಬಹುದು. ಅಥವಾ ನಾನೇ ಸರಿಯಿಲ್ಲ ಇಲ್ಲದೇನೂ ಇರಬಹುದು, ಇದೆಲ್ಲದಕ್ಕೂ ನೋ ಪ್ರಾಬ್ಲಂ' ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

'ಸಿನಿಮಾದಲ್ಲಿ ಕೆಲಸ ಮಾಡುವವರನ್ನ ಯಾರನ್ನೂ ಓಂ ಪ್ರಕಾಶ ಬಿಡಲ್ವಂತೆ ಎಂದೆಲ್ಲ ವದಂತಿ ಹಬ್ಬಿರುವ ಬಗ್ಗೆ ಮಾತನಾಡಿರುವ ಅವರು, ಓಂ ಪ್ರಕಾಶ್ ರಾವ್ ಯಾರನ್ನೂ ಬಿಡಲ್ವಂತೆ. ಎಲ್ಲರನ್ನೂ ಹತ್ತಿರ ಕರೆದುಕೊಂಡು ಏನಾದ್ರೂ ಮಾಡಿಬಿಡ್ತಾನೆ ಎಂದೆಲ್ಲ ಸುದ್ದಿ ಹಬ್ಬಿದೆ. ನಾನು ಆ ರೀತಿ ನಡೆದುಕೊಂಡರೆ ಅವರು ಸುಮ್ಮನೆ ಇರ್ತಾರಾ?' ಎಂದು ನ್ಯೂಸೋ ನ್ಯೂಸು ಸಂದರ್ಶನದಲ್ಲಿ ಕೇಳಿದ್ದಾರೆ.
'ನಾನು ಹಾಗೆಲ್ಲ ಮಾಡೋವಾಗ ಅವರೆಲ್ಲ ಏನ್ ಮಾಡುತ್ತಿರ್ತಾರೆ? ನಾನು ಏನೇ ಮಾಡಿದ್ರೂ ಸುಮ್ಮನೆ ಇರ್ತಾರಾ? ನನಗೆ ರೇ*ಪ್ ಮಾಡುವ ಶಕ್ತಿ ಅಂತೂ ಇಲ್ಲ. ಆ ರೀತಿ ಏನೂ ರೂಮರ್ ಇಲ್ಲ. ಆದರೆ ಯಾಕೆ ಆ ವ್ಯಕ್ತಿ ಹೀಗೆಲ್ಲ ಮಾತನಾಡುತ್ತಾರೆ ಅನ್ನೋದೆ ನನ್ನ ಬಗ್ಗೆ ಇರೋ ವದಂತಿ' ಎಂದು ಓಂಪ್ರಕಾಶ್ ರಾವ್ ಹೇಳಿದ್ದಾರೆ.
ಅವ್ರೇ ಇಷ್ಟ ಪಟ್ಟು ನನ್ ಜೊತೆ ಮತ್ತೆ ಸಿನಿಮಾ ಮಾಡ್ತಾರೆ
'ನನ್ನ ಸಿನಿಮಾಗಳಲ್ಲಿ ನಟಿಸಿರುವ ಹೀರೋಯಿನ್‌ಗಳು ಐದಾರು ಸಿನಿಮಾಗಳನ್ನ ನನ್ನ ಜೊತೆಯಲ್ಲೇ ಕೆಲಸ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡ್ತೀನಿ ಅಂತ ಅರ್ಥ ಮಾಡಿಕೊಳ್ಳಬೇಕು. ನಾನು ನಿಜವಾಗಿಯೂ ಸರಿಯಿಲ್ಲ ಅಂದಿದ್ರೆ ಅವರೆಲ್ಲ ಮೊದಲ ಸಿನಿಮಾದಲ್ಲೇ ಓಡಿ ಹೋಗುತ್ತಿದ್ರು. ಆದರೆ ನಾನು ಬೇರೆ ಸಿನಿಮಾ ಮಾಡೋಕೆ ಹೋದ್ರೆ, ಯಾಕೆ ನಾವು ನಿಮ್ಮ ಸಿನಿಮಾದಲ್ಲಿ ಸರಿಯಾಗಿ ನಟಿಸಿಲ್ವಾ, ಯಾಕೆ ಬೇರೆ ಹೀರೋಯಿನ್‌ಗಳನ್ನ ಹಾಕೋತೀರಾ? ಎಂದು ಬೈದಿದ್ದಾರೆ' ಎಂದು ಓಂ ಪ್ರಕಾಶ್ ರಾವ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications