ಬಿಗ್‌ಬಾಸ್‌ ಮನೇಲಿ ಇದೆಲ್ಲ ಬೇಡ: ಅಶ್ವಿನಿ ಗೌಡಗೆ ಸುದೀಪ್‌ ಕೊಟ್ಟ ಎಚ್ಚರಿಕೆ ಏನು?

ಬಿಗ್‌ಬಾಸ್‌ ಕನ್ನಡ ಸೀಸನ್‌-12ರಲ್ಲಿ ಏಕವಚನ ಬಳಕೆ ಬಗ್ಗೆ ಕಿಚ್ಚ ಸುದೀಪ್‌ "ವಾರದ ಕತೆ ಕಿಚ್ಚನ ಜೊತೆ" ಎಪಿಸೋಡ್‌ನಲ್ಲಿ ಗರಂ ಆಗಿದ್ದಾರೆ. ಅದರಲ್ಲೂ ಅಶ್ವಿನಿ ಗೌಡ ಅವರ ಇತ್ತೀಚಿನ ನಡೆ ಬಗ್ಗೆ ಖಾರವಾಗಿ ಮಾತನಾಡಿರುವ ಸುದೀಪ್‌, ಬಿಗ್‌ಬಾಸ್‌ ಮನೆಯಲ್ಲಿ ವುಮೆನ್‌ ಕಾರ್ಡ್‌ ಬೇಡ ಎಂದು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತೀಚೆಗೆ ಗಿಲ್ಲಿ ಹಾಗೂ ರಘು ಅವರೊಂದಿಗೆ ಅಶ್ವಿನಿಗೌಡ ಗಲಾಟೆ ಮಾಡಿಕೊಂಡಿದ್ದರು. ಇದೇ ವಿಚಾರವನ್ನು ಸುದೀಪ್‌ ಬಳಿ ಅಶ್ವಿನಿ ಹೇಳಿಕೊಂಡಿದ್ದಾರೆ.

ನನ್ನ ಎಷ್ಟೂ ತೇಜೋವಧೆ ಮಾಡೋಕಾಗುತ್ತೋ ಅಷ್ಟೂ ಮಾಡ್ತಿದ್ದಾರೆ ಎಂದು ಅಶ್ವಿನಿಗೌಡ ಆರೋಪ ಮಾಡಿದ್ದಾರೆ. ಇದಕ್ಕೆ ಸಿಟ್ಟಾದ ಸುದೀಪ್‌, ನಿಮಗೆ ಎಲ್ಲರೂ ಹೋಗಿ, ಬನ್ನಿ ಎಂದು ಕರೆಸಿಕೊಳ್ಳಬೇಕು ಎನ್ನುವುದಾದರೆ ಪ್ರತಿ ಚಿಕ್ಕ ಮಗುವಿಗೂ ನೀವೂ ಹೋಗಿ ಬನ್ನಿ ಅನ್ನೋದನ್ನ ಕಲಿಯಬೇಕು ಎಂದು ಕೌಂಟರ್‌ ಕೊಟ್ಟಿದ್ದಾರೆ.

No Women Card in Bigg Boss Kannada 12 Hous Sudeep Warns Ashwini Gowda

ಮಾತು ಎತ್ತಿದ್ರೆ ನೀವು ಯಾವ ಹುಡುಗಿಗೂ ಹೀಗೆ ಮಾತನಾಡಬೇಡಿ ಅಂತೀರಲ್ಲ? ಇಲ್ಲಿ ಯಾರು ಏನು ಮಾತಾಡಿದ್ದಾರೆ? ಎಂದು ಗರಂ ಆಗಿದ್ದಾರೆ. ಇಲ್ಲಿ ಯಾರೆಲ್ಲ ಅಶ್ವಿನಿ ಅವರ ಕೈಯಲ್ಲಿ ನಿಮ್ಮ ಗೌರವ ಕೊಟ್ಟು ಕೂತಿದ್ದೀರಿ ಕೈ ಎತ್ತಿ ಎಂದು ಉಳಿದ ಮಹಿಳಾ ಸ್ಪರ್ಧಿಗಳಿಗೆ ಸುದೀಪ್‌ ಕೇಳಿದ್ದಾರೆ. ಅಶ್ವಿನಿ ಅವರೇ ಈ ಮನೆಯಲ್ಲಿ ವುಮೆನ್‌ ಕಾರ್ಡ್‌ ಪ್ಲೇ ಮಾಡೋದು ಬೇಡ ಎಂದು ಸುದೀಪ್‌ ಎಚ್ಚರಿಸಿದ್ದಾರೆ. ಅಶ್ವಿನಿ ಅವರಿಗೆ ಈ ವಾರದ ಕಳಪೆ ನೀಡಲಾಗಿದೆ.

ಮಿಮಿಕ್ರಿ ಮಾಡಿದ ರೇಗಿಸಿದ ಗಿಲ್ಲಿ

ಟಾಸ್ಕ್‌ ವೇಳೆ ಗಿಲ್ಲಿ ಅಶ್ವಿನಿ ಅವರಂತೆ ಕೂಗಾಡಿ ಮಿಮಿಕ್ರಿ ಮಾಡಿದ್ದಾರೆ. ನೀವೇನಾದ್ರೂ ನನಗಿಂತ ಚಿಕ್ಕವರಾಗಿದ್ರೆ ನಿಮ್ಮನ್ನ ಅಶ್ವಿನಿ ಅಂತಲೇ ನಾನು ಕರೀತಿದ್ದೆ. ಏನ್ರೀ ಇವಾಗ? ಏನ್ರೀ ಮಾಡ್ತೀರ? ಸೋ...ಸು ಫ್ರಂ ಸೋ ಎಂದು ಕಾಮಿಡಿ ಮಾಡಿದ್ದಾರೆ. ಎದುರಲ್ಲೇ ಇದ್ದ ಅಶ್ವಿನಿ ಅವರು ಗಿಲ್ಲಿ ಮಾತಿಗೆ ಕೆಂಡವಾಗಿದ್ದು, ಉಳಿದ ಸ್ಪರ್ಧಿಗಳು ನಗೆಗಡಲಲ್ಲಿ ತೇಲಾಡಿದ್ದಾರೆ. ಮಾತೆ, ರಾಜಮಾತೆ...ನೀನು ಇವತ್ತು ಸತ್ತೆ ಎಂದು ಗಿಲ್ಲಿ ಕಾಲೆಳೆದಿದ್ದಾರೆ.

ಇತ್ತೀಚೆಗೆ ರಘು ಹಾಗೂ ಅಶ್ವಿನಿ ಅವರ ನಡುವೆ ದೊಡ್ಡ ಗಲಾಟೆ ಆಗಿತ್ತು. ಬಳಿಕ ಇದು ಏಕವಚನದಲ್ಲಿ ಮಾತನಾಡುವವರೆಗೆ ತಲುಪಿತ್ತು. ಬಳಿಕ ಕಣ್ಣೀರಿಟ್ಟಿದ್ದ ಅಶ್ವಿನಿ ಗೌಡ ಅವರು ಬಿಗ್‌ಬಾಸ್‌ ಮನೆಯಿಂದ ಹೊರಹೋಗುವುದಾಗಿ ಹೇಳಿದ್ದರು. ಇಲ್ಲಿ ಮಾನ ಮರ್ಯಾದೆ ಮುಖ್ಯ ಎಂದು ಕೂಗಾಡಿದ್ದರು. ರಘು ಕೂಡ ಅಶ್ವಿನಿ ಮೇಲೆ ಕೋಪದಿಂದ ಮಾತನಾಡಿದ್ದರು. ಮರ್ಯಾದೆ, ಗೌರವದ ವಿಚಾರವಾಗಿಯೇ ಅಶ್ವಿನಿ ಪದೇ ಪದೇ ಬಿಗ್‌ಬಾಸ್‌ ಮನೆಯಲ್ಲಿ ಜಗಳಕ್ಕಿಳಿಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+