Nayanthara car: ನಟಿ ನಯನತಾರ ಹುಟ್ಟುಹಬ್ಬಕ್ಕೆ ಐಷಾರಾಮಿ ಕಾರು ಗಿಫ್ಟ್, ಬೆಲೆ ಎಷ್ಟು ಗೊತ್ತಾ?
ಸೆಲೆಬ್ರಿಟಿಗಳು ಅಂದ್ರೆ ಐಷಾರಾಮಿ ಜೀವನ ಅನ್ನೋದು ಇದ್ದೇ ಇರುತ್ತೆ. ಇದಕ್ಕೆ ಸಾಕ್ಷಿ ಎನ್ನುವಂತೆ ದುಬಾರಿ ಕಾರುಗಳ ಕಲೆಕ್ಷನ್ ಕೂಡ ಹೊಂದಿರುತ್ತಾರೆ. ಆಯುಧಪೂಜೆ ದಿನ ಆ ಕಾರುಗಳಿಗೆ ಪೂಜೆ ನೆರವೇರಿಸಿ, ಫೋಟೋಸ್ ಶೇರ್ ಮಾಡೋದು ಕೂಡ ಈಗ ಟ್ರೆಂಡ್ ಆಗಿದೆ. ಇನ್ನು ಟಾಪ್ ನಟಿಯರು ಕೂಡ ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇವರಲ್ಲಿ ಬಹುಭಾಷಾ ನಟಿ ನಯನತಾರ ಕೂಡ ಒಬ್ಬರು. ಸದ್ಯ ನಯನತಾರ ಅವರ ಹುಟ್ಟುಹಬ್ಬಕ್ಕೆ ಐಷಾರಾಮಿ ಕಾರನ್ನು ಗಿಫ್ಟ್ ಮಾಡಲಾಗಿದೆ. ಇದರ ಬೆಲೆ ಎಲ್ಲ ತಲೆತಿರುಗಿದೆ.
41ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಯನತಾರ ಅವರಿಗೆ ಐಷಾರಾಮಿ ರೋಲ್ಸ್‌ರಾಯ್ಸ್ ಕಾರನ್ನು ಗಿಫ್ಟ್ ಮಾಡಲಾಗಿದೆ. ಪತಿ ವಿಘ್ನೇಶ್ ಶಿವನ್ ಅವರು ಈ ಕಾರನ್ನು ತನ್ನ ಮುದ್ದಿನ ಮಡದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ನಯನತಾರ ಅವರ ಹುಟ್ಟುಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ. ಈ ಕಾರಿನೊಂದಿಗೆ ಇರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಪುತ್ರರಾದ ಉಯಿರ್ ಮತ್ತು ಉಲಾಗ್, ವಿಘ್ನೇಶ್ ಶಿವನ್ ಹಾಗೂ ನಯನತಾರ ಕಾರಿನ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಈ ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ ಕಾರಿನ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ ಅನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಐಷಾರಾಮಿ ಕಾರು ರೋಲ್ಸ್ ರಾಯ್ಸ್‌ನ ಲೇಟೆಸ್ಟ್ ಕಾರು ಎನ್ನಲಾಗಿದೆ. ಈ ಹಿಂದೆ ನಯನತಾರ ಅವರ 39ನೇ ಹುಟ್ಟುಹಬ್ಬಕ್ಕೆ ವಿಘ್ನೇಶ್ ಶಿವನ್ ಅವರು 3 ಕೋಟಿ ರೂಪಾಯಿ ಬೆಲೆ ಬಾಳುವ ಮೇಬ್ಯಾಕ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ವಿಘ್ನೇಶ್ ಶಿವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಕಾರು ಗಿಫ್ಟ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ನನ್ನ ಉಯಿರ್ ನಯನತಾರ. ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತೇನೆ, ಹುಚ್ಚನಂತೆ, ಆಳವಾಗಿ ನಿನ್ನನ್ನು ಪ್ರೀತಿಸುತ್ತೇನೆ. ನಿಮ್ಮ ಉಯಿರ್, ಉಲಾಗ್, ದೊಡ್ಡ ಉಯಿರ್ ನಿಮ್ಮ ಎಲ್ಲ ಪ್ರೀತಿಯ ಜನರಿಂದ ಅಗಾಧ ಹೃದಯ ಮತ್ತು ಪ್ರೀತಿ ತುಂಬಿದ ಜೀವನದಿಂದ ಧನ್ಯವಾದಗಳು. ಸರ್ವಶಕ್ತ ದೇವರು ಯಾವಾಗಲೂ ನಮಗೆ ಅತ್ಯುತ್ತಮ ಕ್ಷಣಗಳನ್ನು ಆಶೀರ್ವದಿಸಿದ್ದಕ್ಕಾಗಿ ಹೇರಳವಾದ ಪ್ರೀತಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
ವಿಘ್ನೇಶ್ ಶಿವನ್ ಅವರು 2022ರಲ್ಲಿ ನಯನತಾರಾ ಅವರನ್ನು ವಿವಾಹವಾದರು. ಬಾಡಿಗೆ ತಾಯ್ತನದ ಮೂಲಕ ಉಯಿರ್ ಮತ್ತು ಉಲಾಗ್ ಎನ್ನುವ ಅವಳಿ ಪುತ್ರರನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಯನತಾರ ಹಾಗೂ ಪತಿ ವಿಘ್ನೇಶ್ ಶಿವನ್ ಅವರು ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಸದ್ಯ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications