ನಾಗಚೈತನ್ಯ-ಶೋಭಿತಾ ಲವ್‌ಸ್ಟೋರಿಗೆ ಕರ್ನಾಟಕದ ಈ ಜಾಗ ಸಾಕ್ಷಿ, ಮೊದಲ ಟ್ರಿಪ್ ಕೂಡ ಇಲ್ಲೇ
ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಅವರು ಇತ್ತೀಚೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಈ ತಾರಾಜೋಡಿಯ ಲವ್ ಸ್ಟೋರಿ ಕೂಡ ಗಮನಸೆಳೆದಿದೆ. ಇಷ್ಟಕ್ಕೂ ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗಪ್ಪಾ? ಅನ್ನೋದು ಕೂಡ ಹಲವರಿಗೆ ಗೊತ್ತೇ ಇಲ್ಲ. ಇದನ್ನು ಖುದ್ದು ನಟಿ ಶೋಭಿತಾ ಹಾಗೂ ನಾಗ್ ಅವರೇ ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ಶೋಭಿತಾ ದಂಪತಿ ಅವರು ತಮ್ಮ ಲವ್ ಜರ್ನಿಯನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಈ ಜೋಡಿಯ ಲವ್‌ಸ್ಟೋರಿಗೆ ನಮ್ಮ ಕರ್ನಾಟಕದ ಒಂದು ಜಾಗ ಕೂಡ ಸಾಕ್ಷಿಯಾಗಿರುವ ಬಗ್ಗೆ ಅವರು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಚಾರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಸಂದರ್ಶನದಲ್ಲಿ ತಮ್ಮ ಮೊದಲ ಭೇಟಿಯ ಬಗ್ಗೆಯೂ ಗುಟ್ಟು ರಟ್ಟು ಮಾಡಿದ್ದಾರೆ. ಇನ್ನು ನಾಗಚೈತನ್ಯ ಅವರು ಶೋಭಿತಾ ಅವರ ಮೊದಲ ಭೇಟಿಗಾಗಿ ಮುಂಬೈಗೆ ಹಾರಿದ್ದರು ಎಂದು ನಟಿ ನೆನೆಪು ಮಾಡಿಕೊಂಡರು. ನೆನಪಿಸಿಕೊಂಡರು. ಜೊತೆಗೆ ತಮ್ಮ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದರ ಬಗ್ಗೆಯೂ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ನಮ್ಮಿಬ್ಬರ ಮೊದಲ ಭೇಟಿಯು ಒಂದು ರೀತಿ ಆಕರ್ಷಕವಾದ ಸನ್ನಿವೇಶ ಎಂದು ಶೋಭಿತಾ ಹೇಳಿದ್ದಾರೆ. ನಾನು ಸಾಮಾನ್ಯವಾಗಿ ಚಾಟಿಂಗ್ ಮಾಡುವವನಲ್ಲ. ಸೋಶಿಯಲ್ ಮೀಡಿಯಾಗಳಲ್ಲೂ ಹೆಚ್ಚಾಗಿ ಮಾತನಾಡುವವನಲ್ಲ ಎಂದು ನಾಗಚೈತನ್ಯಾ ಹೇಳಿಕೊಂಡಿದ್ದಾರೆ. ಒಂದು ವಾರದ ನಂತರ ನಾವಿಬ್ಬರೂ ಮುಂಬೈನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಆಗ ನಾನು ಕೆಂಪು ಡ್ರೆಸ್‌ನಲ್ಲಿದ್ದರೆ, ನಾಗಚೈತನ್ಯ ನೀಲಿ ಸೂಟ್‌ನಲ್ಲಿದ್ದರು ಎಂದು ಶೋಭಿತಾ ಹೇಳಿಕೊಂಡಿದ್ದಾರೆ.
ಇನ್ನು ನಾಗಚೈತನ್ಯ ಹಾಗೂ ಶೋಭಿತಾ ಅವರು ಒಟ್ಟಾಗಿ ಮೊದಲ ಬಾರಿಗೆ ಹೋಗಿದ್ದ ಪ್ರವಾಸದ ಸ್ಥಳವನ್ನು ಸಹ ರಿವೀಲ್ ಮಾಡಿದ್ದಾರೆ. ಇಷ್ಟಕ್ಕೂ ಇವರು ಮೊದಲ ಟ್ರಿಪ್ ಮಾಡಿದ್ದು ನಮ್ಮ ಕರ್ನಾಟಕದ ಹೆಸರಾಂತ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಎಂಬ ಅಚ್ಚರಿಯ ವಿಚಾರವನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಇಲ್ಲಿಗೆ ನಾಗಚೈತನ್ಯ ಸ್ನೇಹಿತರೊಂದಿಗೆ ಪ್ರವಾಸ ಹೋಗಿದ್ದೆವು. ನಾನು ಬೀಸುವ ಗಾಳಿಪಟವಾಗಿದ್ದೆ, ನಮ್ಮಿಬ್ಬರ ಮನಸ್ಥಿತಿಗಳೇ ನಮಗೆ ಪರಸ್ಪರ ಆಸಕ್ತಿ ಮತ್ತು ಕುತೂಹಲವನ್ನುಂಟು ಮಾಡಿದವು ಎಂದು ಶೋಭಿತಾ ಹೇಳಿದ್ದಾರೆ.
ನಾಗಚೈತನ್ಯ ಅವರೊಂದಿಗಿನ ಪ್ರಯಾಣದ ಕುರಿತು ಮಾತನಾಡಿದ ಶೋಭಿತಾ ಇದು ಬಹಳ ಮುದ್ದಾಗಿದೆ ಎಂದಿದ್ದಾರೆ. ಇದು ಎರಡು ಹೃದಯಗಳು ಪ್ರೀತಿಯಲ್ಲಿ ಬೀಳುವ ಸಂದರ್ಭವಲ್ಲ, ಇದು ಜೀವನದ ಒಂದೇ ಆಸೆಗಳಿಂದ ಎರಡು ಲೋಹಗಳನ್ನು ಬೆಸೆಯುವಂತಿದೆ. ನಾವು ಆ ವಿಷಯಗಳ ಬಗ್ಗೆ ನಿರ್ಬಂಧಗಳಿಲ್ಲದೆ ಮಾತನಾಡಲು ಸಾಧ್ಯವಾಯಿತು ಎಂದೂ ಅವರ ಹೊಸ ಜೀವನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾದ ಅಕ್ಕಿನೇನಿ ನಾಗಾರ್ಜುನ್ ಅವರ ಪುತ್ರನಾಗಿರುವ ನಾಗಚೈತನ್ಯ ಅವರು ನಟಿ ಶೋಭಿತಾರನ್ನ ಆಗಸ್ಟ್ 8ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಡಿಸೆಂಬರ್ 4ರಂದು ಹೈದರಾಬಾದ್‌ನಲ್ಲಿರೋ ತಮ್ಮದೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಅವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಇವರ ವಿವಾಹ ನೆರವೇರಿತ್ತು.












Click it and Unblock the Notifications