ನಾಗವಲ್ಲಿ ಪಾತ್ರದಲ್ಲಿ ಸೌಂದರ್ಯ, ಆ ದಿನ ರಾತ್ರಿ ಗುರುಕಿರಣ್‌ಗೆ ಆದ ಭಯಾನಕ ಅನುಭವವೇನು?
ಬಹುಭಾಷಾ ನಟಿ ಸೌಂದರ್ಯ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ನಟನೆ ಇಂದಿಗೂ ಪ್ರೇಕ್ಷಕರ ತಲೆಯಿಂದ ದೂರಕ್ಕೆ ಸರಿಯಲೇ ಇಲ್ಲ. ಅದರಲ್ಲೂ ಅವರು ಆಪ್ತಮಿತ್ರ ಸಿನಿಮಾದಲ್ಲಿ ಮಾಡಿದ್ದ "ನಾಗವಲ್ಲಿ" ಪಾತ್ರ ಇಂದಿಗೂ ಭಯಾನಕ. ಇದರಲ್ಲಿ ಸೌಂದರ್ಯ ಅವರ ಅಭಿನಯ ಕಂಡು ಬೆಚ್ಚಿಬಿದ್ದವರೇ ಹೆಚ್ಚು. ಅಷ್ಟರಮಟ್ಟಿಗೆ ನಾಗವಲ್ಲಿ ಪಾತ್ರಕ್ಕೆ ಜೀವ ತುಂಬಿದ್ದರು. ಆದರೆ, ವಿಧಿಯಾಟವೆಂದರೆ ಈ ಸಿನಿಮಾ ಬಿಡುಗಡೆ ಹೊತ್ತಲ್ಲೇ ಅವರು ಅಸಹಜ ಸಾವನ್ನಪ್ಪಿದ್ದರು. ಈ ವೇಳೆ ಅವರ ನಾಗವಲ್ಲಿ ಪಾತ್ರದ ಬಗ್ಗೆ ಹಲವು ವದಂತಿಗಳು ಕೂಡ ಇದ್ದವು. ಇವರ ಸಾವಿನ ನಂತರವೂ ಭಯ ಹಲವರಲ್ಲಿ ಆವರಿಸಿತ್ತು. ಈ ಸಿನಿಮಾದ ಸಂಗೀತ ನಿರ್ದೇಶಕರಿಗೂ ಭಯಾನಕ ಅನುಭವವಾಗಿತ್ತು. ಅದೇನು ಎಂಬುದನ್ನು ಅವರೇ ಈಗ ರಿವೀಲ್ ಮಾಡಿದ್ದಾರೆ.
ಆಗೆಲ್ಲ ನಾಗವಲ್ಲಿ ಪಾತ್ರವನ್ನು ಪ್ರೇಕ್ಷಕರು ನಿಜವೆಂದೇ ನಂಬಿದ್ದರು. ಈ ಸಿನಿಮಾದ ಕೆಲ ಹಿನ್ನೆಲೆ ಸಂಗೀತ ಕೇಳಿದರೆ ಜನ ಈಗಲೂ ಬೆಚ್ಚಿಬೀಳುತ್ತಾರೆ. ಆಪ್ತಮಿತ್ರ ಸಿನಿಮಾದ ರಾ..ರಾ ಹಾಡು ತುಂಬಾ ಭಯ ಸೃಷ್ಟಿಸಿದ್ದ ಹಾಡುಗಳಲ್ಲಿ ಒಂದು. ಇಂದಿಗೂ ಆ ಹಾಡನ್ನ ರಾತ್ರಿ ವೇಳೆ ಕೇಳಲು ಜನ ಹಿಂಜರಿಯುತ್ತಾರೆ. ಆ ಸಿನಿಮಾವನ್ನು ಒಬ್ಬರೇ ಕೂತು ನೋಡಲು ಕೂಡ ಧೈರ್ಯ ಮಾಡುವುದಿಲ್ಲ. ಅಂತಹ ಭಯ ಸೃಷ್ಟಿಸಿತ್ತು ಈ ಸಿನಿಮಾ. ಈ ನಾಗವಲ್ಲಿ ಪಾತ್ರ ಮಾಡಿದ್ದ ಸೌಂದರ್ಯ ಅವರು ಬೆಂಗಳೂರಿನ ಜಕ್ಕೂರು ಬಳಿಕ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದಾದ ಬಳಿಕ ಒಂದು ದೊಡ್ಡ ವದಂತಿ ಎಲ್ಲೆಡೆ ಹರಡಿತ್ತು.

ಕೆಲವರು ಸೌಂದರ್ಯ ಅವರ ಸಾವಿಗೆ ನಾಗವಲ್ಲಿ ಪಾತ್ರವೇ ಕಾರಣ ಎಂಬ ಗಾಳಿಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಈ ಸಿನಿಮಾದ ನಾಯಕನಟರಾದ ಡಾ.ವಿಷ್ಣುವರ್ಧನ್ ಅವರು ನಿಧನರಾದಾಗಲೂ ಇದೇ ಮಾತು ಮತ್ತೆ ಕೇಳಿಬಂದಿತ್ತು. ಈ ಸಿನಿಮಾದಲ್ಲಿ ನಟಿಸಿದ ಕಾರಣಕ್ಕೆ ನಾಗವಲ್ಲಿಯೇ ಇವರ ಸಾವಿಗೆ ಕಾರಣವಾಗಿರಬಹುದು ಎಂದು ಎಲ್ಲೆಡೆ ಗಾಸಿಪ್ ಹಬ್ಬಿತ್ತು. ಈ ಸಾವುಗಳನ್ನು ಕಂಡು ಕರ್ನಾಟಕದ ಜನತೆ ಭಯ ಬಿದ್ದಿದ್ದು ಕೂಡ ನಿಜ. ಇನ್ನು ಈ ಸಿನಿಮಾಗೆ ಸಂಗೀತ ನಿರ್ದೇಶಿಸಿದ್ದ ಗುರುಕಿರಣ್ ಅವರಿಗೂ ಭಯಾನಕ ಅನುಭವ ಆಗಿತ್ತು. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸೌಂದರ್ಯ ಅವರು ನಾಗವಲ್ಲಿ ಪಾತ್ರದ ಶೂಟಿಂಗ್ ಮುಗಿಸಿದ್ದರು. ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗುವ ಹೊತ್ತಲ್ಲೇ ಅವರ ಹಠಾತ್ ಸಾವನ್ನಪ್ಪಿದ್ದರು. ಈ ಘಟನೆಯಿಂದ ಆಪ್ತಮಿತ್ರ ಚಿತ್ರತಂಡ ಕೂಡ ಹೆದರಿತ್ತು ಎನ್ನಲಾಗಿದೆ. ಇನ್ನು ಗುರುಕಿರಣ್ ಅವರು ಈ ಸಿನಿಮಾದ ಸಂಗೀತ ನಿರ್ದೇಶಕರಾಗಿದ್ದರಿಂದ ಎಡಿಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಸೌಂದರ್ಯ ಅವರ ಸಾವಿನ ನಂತರ ರಾತ್ರಿ ವೇಳೆ ಎಡಿಟಿಂಗ್ ಕೆಲಸಕ್ಕೆ ತುಂಬಾ ಸಮಸ್ಯೆಯಾಗಿತ್ತು. ಏನೋ ಒಂದು ರೀತಿಯ ಭಯ ಕಾಡಲಾರಾಂಭಿಸಿತು ಎಂದು ಗುರುಕಿರಣ್ ಹೇಳಿದ್ದಾರೆ.
ನಾಗವಲ್ಲಿಯಾಗಿ ಸೌಂದರ್ಯ ಅವರನ್ನು ನೋಡುವಾಗ ಒಂದು ರೀತಿಯ ಭಯಾನಕ ಅನುಭವ ಆಗುತ್ತಿತ್ತು. ಈ ಸಿನಿಮಾದ ಎಡಿಟಿಂಗ್ ವೇಳೆ ನಾಗವಲ್ಲಿಯ ನೋಟ ಕಂಡರೆ ತುಂಬಾ ಭಯವಾಗುತ್ತಿತ್ತು. ನಾನೂ ಕೂಡ ಭಯಪಟ್ಟಿದ್ದೆ. ಹಾಗಾಗಿ ರಾತ್ರಿ ವೇಳೆ ಈ ಸಿನಿಮಾ ಎಡಿಟಿಂಗ್ ಸಹವಾಸವೇ ಬೇಡ ಎಂದು ಮಾಡುತ್ತಿರಲಿಲ್ಲ. ಆದರೂ ಆ ಭಯದಿಂದ ಈಚೆ ಬರಲು ಸಾಧ್ಯವಾಗಲಿಲ್ಲ ಎಂದು ಗುರುಕಿರಣ್ ಅನುಭವ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಈ ಸಿನಿಮಾ ಕೂಡ ಭರ್ಜರಿ ಹಿಟ್ ಕಂಡಿತು. ಚಿತ್ರದ ಹಾಡುಗಳು ಕೂಡ ಎವರ್‌ಗ್ರೀನ್ ಆಗಿವೆ. ಆದರೂ ಸೌಂದರ್ಯ ಸಾವಿನ ಬಗ್ಗೆ ಕೇಳಿಬಂದಿದ್ದ ವದಂತಿ ನಿಜವೋ ಸುಳ್ಳೋ ಎಂಬುದಕ್ಕೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ನಟಿ ಸೌಂದರ್ಯ ಅವರು ಮೂಲತಃ ಬೆಂಗಳೂರಿನವರೇ ಆದರೂ ಆಳಿದ್ದು ದಕ್ಷಿಣ ಚಿತ್ರರಂಗವನ್ನ. ಅವರ ಅಭಿನಯಕ್ಕೆ ಮಾರುಹೋಗದೇ ಇರಲಿಲ್ಲ ಪ್ರೇಕ್ಷಕರು. ಎಂತಹ ಪಾತ್ರವನ್ನಾದರೂ ಸೊಗಸಾಗಿ ಅಭಿನಯಸುತ್ತಿದ್ದ ಅವರಿಗೆ ಅವಕಾಶಗಳು ಕೈತುಂಬಾ ಸಿಗುತ್ತಲೇ ಇದ್ದವು. ಹಲವು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಅವರು ಅಸಹಜ ಸಾವಿನಿಂದ ಎಲ್ಲರಿಗೂ ಆಘಾತ ನೀಡಿದರು.












Click it and Unblock the Notifications