ತಂದೆ ಸ್ಥಾನ ತಾಯಿ ತುಂಬಲು ಆಗಲ್ಲ: ನಟಿ ಭಾವನಾ ಮಾತು ಒಪಲ್ಲ ಅಂದಿದ್ದೇಕೆ ಯಮುನಾ ಶ್ರೀನಿಧಿ?
ನಟಿ ಭಾವನಾ ರಾಮಣ್ಣ ಅವರು ಇತ್ತೀಚೆಗೆ ಐವಿಎಫ್ ಚಿಕಿತ್ಸೆ ವಿಧಾನದ ಮೂಲಕ ಅವಳಿ ಮಕ್ಕಳಿಗೆ ಗರ್ಭಿಣಿಯಾಗಿರುವ ವಿಚಾರ ಹೇಳಿಕೊಂಡಿದ್ದರು. ಈಗ ನಾನು ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ಮದುವೆಯಾಗದೆ ಮಕ್ಕಳನ್ನು ಹೆರುತ್ತಿದ್ದೇನೆ. ಅಲ್ಲದೆ ನಾನು ತಂದೆಯಿಲ್ಲದೆ ಮಕ್ಕಳನ್ನು ಬೆಳೆಸುತ್ತೇನೆ ಎಂದು ದಿಟ್ಟತನದ ಮಾತುಗಳನ್ನು ಆಡಿದ್ದರು. ಇನ್ನು ಮದುವೆಯಾದರೆ ನಟಿಯರು ಸಿನಿಮಾಗಳಿಂದ ದೂರ ಸರಿಯುತ್ತಾರೆ ಎಂದು ಉದಾಹರಣೆಯೂ ನೀಡಿದ್ದರು. ನಟಿ ಭಾವನಾ ಅವರ ಹೇಳಿಕೆಗಳನ್ನು ಖ್ಯಾತ ನಟಿ ಯಮುನಾ ಶ್ರೀನಿಧಿ (Yamuna Srinidhi) ನಿರಾಕರಿಸಿದ್ದಾರೆ. ಗಂಡಸರು ಇಲ್ಲ ಅಂದ್ರೆ ಹೆಂಗಸರು ಇರಲು ಸಾಧ್ಯವೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ʼನಾನು ಮದುವೆಯಾಗಿ ಮಕ್ಕಳಾಗದವರು ಮಾತ್ರ ಐವಿಎಫ್ ಮೂಲಕ ಮಗು ಪಡೆಯಬಹುದು ಎಂದು ಭಾವಿಸಿದ್ದೆ. ಆದರೆ ಕಾನೂನಿನ ಮೂಲಕ ಮದುವೆ ಆಗದೆಯೂ ಮಕ್ಕಳನ್ನು ಪಡೆಯಬಹುದು ಎಂದು ಭಾವನಾ ಅವರ ವಿಚಾರದಿಂದಲೇ ತಿಳಿದಿದ್ದು ಎಂದು ಬಾಸ್ ಟಿವಿ ಯುಟ್ಯೂಬ್ ಚಾನಲ್ ಜೊತೆಗೆ ಯುಮುನಾ ಮಾತನಾಡಿದ್ದಾರೆ. ನನ್ನ ಪ್ರಕಾರ ಯಾವುದೇ ಆದರೂ ಪ್ರಾಕೃತಿಕವಾಗಿ ನಡೆದಾಗಲೇ ಅದು ಸಹಜವಾದದ್ದು, ಆದರೆ ಕೃತಕವಾಗಿ ನಡೆಯುವುದು ನಾನು ಒಪ್ಪಲ್ಲʼ ಎಂದಿದ್ದಾರೆ.

ʼಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದಿಂದ ಒಳ್ಳೆಯ ಬೆಂಬಲ ಸಿಗುತ್ತೆ. ಎಲ್ಲರೂ ಒಂದು ಮಗುವನ್ನ ಬೆಳೆಸಲು ಒಟ್ಟಿಗೆ ಬರುತ್ತಾರೆ. ಆ ಬೆಂಬಲ ನನಗೂ ಇತ್ತು. ನನಗೆ ಎಷ್ಟೇ ಬೆಂಬಲ ಸಿಕ್ಕರೂ ತಂದೆಯಾಗಿ ನನ್ನ ಪತಿ ಮಕ್ಕಳಿಗೆ ತುಂಬಿದ ಸ್ಥಾನ ಬೇರೆ ಯಾರಿಂದಲೂ ಈ ಬ್ರಹ್ಮಾಂಡದಲ್ಲೇ ಸಾಧ್ಯವಿಲ್ಲ. ಅದನ್ನ ಕೇವಲ ತಂದೆ ಮಾತ್ರ ಕೊಡಲು ಸಾಧ್ಯʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳಿಗೆ ಇಬ್ಬರ ಪ್ರೀತಿ ಮುಖ್ಯ
ʼತಾಯಿಯ ಮಮತೆ ಬೇರೆ ಯಾರಿಂದಲೂ ಕೊಡೋಕೆ ಆಗಲ್ಲ. ಅಷ್ಟೇ ಸತ್ಯ ತಂದೆ ಕೊಡುವ ಸ್ಥಾನ ಬೇರೆಯೇ ಇದೆ. ಅದನ್ನ ತಾಯಿಯೂ ಕೊಡಲು ಸಾಧ್ಯವಿಲ್ಲ. ತಂದೆ ಯಾವತ್ತಿದ್ರೂ ತಂದೇನೇ, ತಾಯಿ ತಾಯೀನೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಪಂಚವೆಲ್ಲ ಒಂದು ತೂಕ ಆದ್ರೆ, ತಾಯಿ-ತಂದೆ ಸಮಾನವಾಗಿ ಇನ್ನೊಂದು ತೂಕ. ಹಾಗಾಗಿ ಮಕ್ಕಳಿಗೆ ಇಬ್ಬರ ಪ್ರೀತಿ ಕೂಡ ಮುಖ್ಯ ಎಂದು ಯಮುನಾ ಹೇಳಿದ್ದಾರೆ. ಸಿಂಗಲ್ ಪೇರೆಂಟಿಂಗ್ ಅಂತ ತುಂಬಾ ಕಷ್ಟಪಡುತ್ತಾರೆ. ಮಕ್ಕಳನ್ನ ಒಬ್ಬರೇ ಬೆಳೆಸುವುದು ತುಂಬಾ ಕಷ್ಟ. ಮಾನವರಾಗಿ ಹುಟ್ಟಿ ನಮಗೆ ರೀತಿ, ನೀತಿ ಇರುತ್ತೆ. ಅದಕ್ಕೆ ಒಗ್ಗಿ ಬದುಕುವುದೇ ಒಳ್ಳೆಯದು ಎನ್ನುವುದು ನನ್ನ ಗಾಢವಾದ ನಂಬಿಕೆʼ ಎಂದಿದ್ದಾರೆ.
ಮದುವೆ ಬಳಿಕವೇ ನನ್ನ ಎಲ್ಲ ಸಾಧನೆ
ಮದುವೆಯಾದ ಮೇಲೆ ನಟಿಯರು ಸೈಡ್‌ಲೈನ್ ಆಗುತ್ತಾರೆ ಎಂದು ನಟಿ ಭಾವನಾ ಸಂದರ್ಶನಗಳಲ್ಲಿ ಹೇಳಿದ್ದರು. ಇದನ್ನು ಕೂಡ ಯಮುನಾ ಅವರು ವಿರೋಧಿಸಿದ್ದಾರೆ. ʼಈ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಈಗ ನನ್ನನ್ನೇ ಉದಾಹರಣೆಗೆ ತೆಗೆದುಕೊಂಡರೆ, ನಾನು ಮಾಡಿದ ಎಲ್ಲ ಸಾಧನೆಯನ್ನು ಮದುವೆ ನಂತರವೇ ಮಾಡಿದ್ದು. ಒಳ್ಳೆಯ ಪಾತ್ರಗಳು ಸಿಕ್ಕಿವೆ. ಎಲ್ಲವೂ ಮದುವೆಯಾದ ನಂತರವೇ ಆಗಿದ್ದು. ಹಾಗಾಗಿ ಮದುವೆಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮಲ್ಲಿ ನಿಜವಾಗಿ ಪ್ರತಿಭೆ ಇದ್ದರೆ, ಒಳ್ಳೆಯದೇ ಆಗುತ್ತೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮದುವೆಯಾದ ಮೇಲೇ ಹಲವಾರು ಸಾಧನೆ ಮಾಡಿದ್ದಾರೆ. ಗಂಡಸರು ಇಲ್ಲ ಅಂದ್ರೆ ಹೆಂಗಸರು ಇರಲು ಸಾಧ್ಯವೇ ಇಲ್ಲʼ ಎಂದು ಅಭಿಪ್ರಾಯಪಟ್ಟಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications