ಮೇಘನಾ ರಾಜ್ ವಿಜಯ್ ರಾಘವೇಂದ್ರ 2ನೇ ಮದುವೆ ಗಾಸಿಪ್ ಬಗ್ಗೆ ಮೇಘನಾ ಗರಂ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಟಿ ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ಎರಡನೇ ಮದುವೆಯ ಊಹಾಪೋಹ ಸುದ್ದಿಗಳಿಗೆ ಇದೀಗ ತೆರೆ ಬಿದ್ದಿದೆ. ಕೊನೆಗೂ ನಟಿ ಮೇಘನಾ ರಾಜ್ ಮೌನ ಮುರಿದಿದ್ದಾರೆ. ಜೊತೆಗೆ ಎರಡನೇ ಮದುವೆ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಮೇಲೆ ಪತ್ನಿ ಮೇಘನಾ ರಾಜ್ ಅವರು ಅಕ್ಷರಶ: ಕಿನ್ನತೆಗೆ ಜಾರಿದ್ದರು. ಈ ಘಟನೆಯ ಬಳಿಕ ಕೊಂಚ ರಿಲ್ಯಾಕ್ಸ್ ಮೂಡ್‌ಗೆ ಬರುವುದಕ್ಕೂ ಅವರಿಗೆ ಸಮಯ ಬೇಕಾಯ್ತು. ಈ ಘಟನೆ ನಂತರ ತುಂಬಾ ನೋವಿನ ದಿನಗಳನ್ನು ಮೇಘನಾ ರಾಜ್ ಅವರು ಕಳೆದರು. ದಿನ ಕಳೆದ ಹಾಗೆ ಈಗ ಅವರು ಸ್ವಲ್ಪ ಆಕ್ಟಿವ್ ಆಗಿದ್ದಾರೆ. ಆದರೂ ಕೂಡ ಅವರ ಮನಸ್ಸಿನಿಂದ ಚಿರಂಜೀವಿ ಸರ್ಜಾ ಅವರು ದೂರ ಆಗಿಲ್ಲ.

ಇನ್ನೂ ಈ ನಡುವೆ ನಟ ವಿಜಯರಾಘವೇಂದ್ರ ಅವರು ಕೂಡ ತಮ್ಮ ಪತ್ನಿಯನ್ನು ಕಳೆದುಕೊಂಡರು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅವರ ಮಡದಿಯನ್ನು ವಿಜಯ್ ಕಳೆದುಕೊಂಡು ಒಂಟಿಯಾಗಿದ್ದಾರೆ. ವಿಜಯರಾಘವೇಂದ್ರ ಬಾಳಲ್ಲಿ ಇದೊಂದು ದೊಡ್ಡ ದುರಂತ. ಪತ್ನಿ ಸ್ಪಂದನಾ ಅವರು ವಿದೇಶ ಪ್ರವಾಸಕ್ಕೆ ಹೋದಾಗ ಅನಾರೋಗ್ಯದಿಂದ ಅಕಾಲಿಕವಾಗಿ ಪ್ರಾಣ ಬಿಡುತ್ತಾರೆ.
ಈ ಘಟನೆ ಸಂಭವಿಸಿ ಕೆಲ ದಿನಗಳ ನಂತರದಿಂದ ಒಂಟಿಯಾಗಿರುವ ನಟ ವಿಜಯರಾಘವೇಂದ್ರ ಹಾಗೂ ನಟಿ ಮೇಘನಾ ರಾಜ್ ಎರಡನೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ. ಇವರಿಬ್ಬರ ಮದುವೆಗೆ ಎರಡು ಕುಟುಂಬಗಳು ಒಪ್ಪಿವೆ. ಒಂದು ಸುತ್ತಿನ ಮಾತುಕತೆಗಳು ಕೂಡ ನಡೆದಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ಚರ್ಚೆಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ನಿಖರತೆ ಇಲ್ಲ.

ಇಂತಹ ಆಲೋಚನೆ ಮೇಘನಾ ರಾಜ್ ಅವರ ಮನಸ್ಸಿನಲ್ಲಿ ಇದಿಯಾ ಅಥವಾ ಇದು ಗಾಳಿ ಸುದ್ದಿನಾ ಎಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿ ನೇರವಾಗಿ ಮೇಘನಾ ರಾಜ್ ಅವರನ್ನೇ ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ ಅಸಲಿ ಸತ್ಯ ಏನು ಎನ್ನುವುದು ಗೊತ್ತಾಗಿದೆ.
ನೀವು ಎರಡನೇ ಮಾಡಿವೆ ಆಯ್ತೀರಾ ಎನ್ನುವ ಪ್ರಶ್ನೆಗೆ ಮೇಘನಾ ರಾಜ್ ನೇರವಾಗಿ ಉತ್ತರಿಸಿದ್ದಾರೆ. 'ನಾನು ಎರಡನೇ ಮದುವೆಯ ಬಗ್ಗೆ ಯೋಚನೆನೇ ಮಾಡಿಲ್ಲ. ಇದೆಲ್ಲ ರೂಮರ್ ಅಷ್ಟೇ. ಮೊಬೈಲ್ ತೆಗೆದರೆ ಅಂತಹ ಸ್ಟೋರಿಗಳನ್ನು ನೋಡುವುದು ತುಂಬಾ ಕಷ್ಟವಾಗಿದೆ. ನಾನು ಏನಾದ್ರು ಹೇಳಿದರೆ ಅದನ್ನು ತಿರುಚಿ ಮಾತನಾಡುತ್ತಾರೆ. ಹೀಗಾಗಿ ಅದರ ಬಗ್ಗೆ ನಾನು ಮಾತನಾಡಲ್ಲ. ನನ್ನ ಮದುವೆ ಬಗ್ಗೆ ಜನಾನೇ ತೀರ್ಮಾನ ಮಾಡುತ್ತಿದ್ದಾರೆ. ಹೀಗಾಗಿ ಮದುವೆ ಬಗ್ಗೆ ನಾನು ಮಾತನಾಡಲು ಇಷ್ಟ ಪಡುವುದಿಲ್ಲ. ಯಾಕೆಂದರೆ ನಾನು ಎರಡನೇ ಮದುವೆ ಬಗ್ಗೆ ಆಸಕ್ತಿ ಹೊಂದಿಲ್ಲ. ವಿಜಯರಾಘವೇಂದ್ರ ಅವರನ್ನು ನಾನು ಮದುವೆ ಆಗೋದು ಶುದ್ಧ ಸುಳ್ಳು ಸುದ್ದಿ. ನನಗೆ ಇಂತಹ ಸುದ್ದಿಗಳಿಂದ ತುಂಬಾ ನೋವಾಗಿದೆ' ಎಂದು ಮೇಘನಾರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
'ನನ್ನಲ್ಲಿ ಎರಡನೇ ಮದುವೆ ಬಗ್ಗೆ ಯೋಚನೆ ಬಂದಿದ್ದು ಸುಳ್ಳಲ್ಲ. ಒಂದು ಹೆಣ್ಣಾಗಿ ನನ್ನ ಮಗನನ್ನು ನೋಡಿದಾಗ ರಾಯನ್‌ಗೆ ಫಿಸಿಕಲ್ ಆಗಿ ಒಬ್ಬ ತಂದೆ ಫಿಗರ್ ಇದ್ದರೆ ಒಳ್ಳೆಯದು ಎಂದು ಕೆಲವೊಮ್ಮೆ ಅನಿಸುತ್ತದೆ ಎಂದಿದ್ದಾರೆ. ಅಪ್ಪ ಚಿರು ಅಂತ ರಾಯನ್‌ಗೆ ಗೊತ್ತು. ಅಪ್ಪನ ಹಾಡುಗಳನ್ನು ರಾಯನ್ ಕೇಳುತ್ತಲೇ ಇರುತ್ತಾನೆ. ಆದರೆ ಫಿಸಿಕಲ್ ಆಗಿ ಚಿರುನ ನೋಡಿಲ್ಲ. ಅಪ್ಪ ಇದಾರೆ ಅನ್ನೋದು ರಾಯನ್‌ಗೆ ಗೊತ್ತಿದೆ. ರಾಯನ್‌ಗೆ ಫಿಸಿಕಲ್ ಆಗಿ ಒಬ್ಬ ತಂದೆ ಫಿಗರ್ ಇದ್ದರೆ ಒಳ್ಳೆಯದು ಅಂತ ಅನಿಸುತ್ತದೆ. ಅದು ಅನಿಸಿದ್ದು ನಿಜ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದನ್ನೇ ಒಂದು ದೊಡ್ಡ ಸುದ್ದಿ ಮಾಡಿ ನನ್ನ ಹಾಗೂ ಇನ್ನೊಬ್ಬರ ಬಗ್ಗೆ ಮಾತನಾಡುವುದು ಸರಿ ಅಲ್ಲ' ಎಂದು ಮೇಘನಾ ರಾಜ್ ಹೇಳಿದ್ದಾರೆ.
ಅಷ್ಟಕ್ಕೂ ಮೇಘನಾರಾಜ್ ಹಾಗೂ ವಿಜಯರಾಘವೇಂದ್ರ ಅವರ ಹೆಸರು ತಳುಕು ಹಾಕಿಕೊಳ್ಳಲು ಒಂದು ಕಾರಣ ಇದೆ. ಇವರಿಬ್ಬರು ತುಂಬಾ ಮೃದು ಸ್ವಭಾವದವರು. ಜೊತೆಗೆ ಇವರು ತಮ್ಮ ಬಾಳ ಸಂಗಾತಿಯನ್ನು ತುಂಬಾನೇ ಪ್ರೀತಿ ಮಾಡುತ್ತಿದ್ದರು. ವಿಜಯರಾಘವೇಂದ್ರ ತಮ್ಮ ಪತ್ನಿ ಸಂಜನಾ ಅವರನ್ನ ದೇವರಂತೆ ಪೂಜೆ ಮಾಡುತ್ತಾರೆ. ಮೇಘನಾ ರಾಜ್ ಕೂಡ ಚಿರಂಜೀವಿ ಸರ್ಜಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಇವರಿಬ್ಬರ ಸ್ವಭಾವ ಒಂದೇ ರೀತಿ ಕಂಡುಬಂದಿದ್ದರಿಂದ ಮದುವೆ ಸುದ್ದಿ ಹರಿದಾಡತೊಡಗಿತು.
ಇವರಿಬ್ಬರಿಗೂ ಹೊಸ ಬಾಳು ಅನಿವಾರ್ಯ. ಆದರೆ ಅವರು ಹೊಸ ಜೀವನ ಕಟ್ಟಿಕೊಳ್ಳಲು ಸಮಯ ಬೇಕು. ಯಾರೊಂದಿಗೆ ಬಾಳಬೇಕು ಅನ್ನೋದನ್ನು ಅವರೇ ನಿರ್ಧಾರ ಮಾಡಬೇಕು. ಅವರ ಈ ದುಖ:ದ ಸಮಯದಲ್ಲಿ ಎರಡನೇ ಮದುವೆ ವಿಚಾರ ಪದೇ ಪದೇ ಚುಚ್ಚು ಮಾತುಗಳಲ್ಲಿ ಕೇಳುತ್ತಿರುವುದು ಅವರ ಮನಸ್ಸಿಗೆ ನೋವು ಮಾಡಿದೆ. ಭವಿಷ್ಯದಲ್ಲಿ ಅವರ ಜೀವನ ಹೇಗಿರಬೇಕು ಅನ್ನೋದನ್ನ ಅವರೇ ನಿರ್ಧಾರ ಮಾಡಬೇಕು.
ಅವರ ವೈಯಕ್ತಿಕ ವಿಚಾರಗಳನ್ನು ಗಾಳಿಗೆ ತೂರಿ ದುಖ:ದ ಸಂದರ್ಭದಲ್ಲಿ ಮನಸ್ಸಿಗೆ ನೋವು ಉಂಟು ಮಾಡುವ ಪ್ರತಿಯೊಬ್ಬರೂ ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ಅವರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ.












Click it and Unblock the Notifications