ತ್ರಿವಿಕ್ರಮ್ ಮೇಘಾ ಶೆಟ್ಟಿ ನಡುವೆ ಕಿರಿಕ್: ಪೋಟೋ ಕ್ಲಿಕ್ಕಿಸಿದ್ದಕ್ಕೆ ಕ್ಲಾಸ್ ತೆಗೆದುಕೊಂಡ ನಟಿ
ಬಿಗ್‌ಬಾಸ್ ಮುಗಿದ ಬಳಿಕ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ ಎಂದು ಅಭಿಮಾನಿಗಳಿಗೆ ಇದ್ದ ಬೇಸರವನ್ನು ಇದೀಗ ತ್ರಿವಿಕ್ರಮ್ ದೂರ ಮಾಡಿದ್ದಾರೆ. ಕಲರ್ಸ್ ಕನ್ನಡದಲ್ಲಿ 'ಮುದ್ದು ಸೊಸೆ' ಸೀರಿಯಲ್‌ನಲ್ಲಿ ತ್ರಿವಿಕ್ರಮ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್‌ನ ನಟಿಯಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದ ಮತ್ತು ಬೇರೆ ಬೇರೆ ಸೀರಿಯಲ್ ನಲ್ಲಿ ನಟಿಸಿದ ಪ್ರತೀಮಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಸೀರಿಯಲ್‌ಗೆ ಸಂಬಂಧಿಸಿದಂತೆ ಒಂದು ಅಪ್ಡೇಟ್ ಅನ್ನು ತ್ರಿವಿಕ್ರಮ್ ಕೊಟ್ಟಿದ್ದಾರೆ. ಅಲ್ಲದೆ ಇದರಲ್ಲಾದ ಒಂದು ಕಹಿ ಘಟನೆಯನ್ನು ವಿವರಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತ್ರಿವಿಕ್ರಮ್‌ಗೆ ಹೀಗಾಯ್ತಾ ಅಂತ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಹೌದು 'ಜೊತೆ ಜೊತೆ' ಸೀರಿಯಲ್‌ನ ನಟಿಯಾಗಿದ್ದ ಮೇಘಾ ಶೆಟ್ಟಿ ಮತ್ತು ತ್ರಿವಿಕ್ರಮ್ ನಡುವೆ ಸಮಸ್ಯೆ ಆಗಿದೆ. ಮೇಘಾ ಶೆಟ್ಟಿ ತ್ರಿವಿಕ್ರಮ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಇವರಿಬ್ಬರ ನಡುವೆ ಕಿರಿಕ್ ಆಗೋಕೆ ಕಾರಣ ಏನು?

'ಜೊತೆ ಜೊತೆ' ಸೀರಿಯಲ್‌ನಲ್ಲಿ ಅಮ್ಮು ಪಾತ್ರ ಮಾಡಿದ ಮೇಘಾ ಶೆಟ್ಟಿ ಎಲ್ಲರಿಗೂ ಗೊತ್ತು. 'ಜೊತೆ ಜೊತೆ' ಧಾರವಾಹಿ ಬಹು ವರ್ಷಗಳ ಕಾಲ ಪ್ರಸಾರ ಆಗಿತ್ತು ಮತ್ತು ಈ ಧಾರವಾಹಿ ಜನ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ವಿಶೇಷವಾಗಿ ಎಲ್ಲರಿಗೂ ಇಷ್ಟವಾಗಿದ್ದು ಇದರಲ್ಲಿ ಬಂದ ನಾಯಕ ಮತ್ತು ನಾಯಕಿ. ಸೀರಿಯಲ್ ಮುಗಿದ ಬಳಿಕ ಮೇಘಾ ಶೆಟ್ಟಿ ಕಣ್ಮರೆಯಾಗಿದ್ದರು.
ಇದೀಗ ಮೇಘಾ ಶೆಟ್ಟಿ ಒಂದು ಸಾಹಸಕ್ಕೆ ಕೈ ಹಾಕುವುದರ ಜೊತೆಗೆ ಒಂದೊಳ್ಳೆ ಹವಾ ಕ್ರಿಯೇಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ತ್ರಿವಿಕ್ರಮ್ ಹಾಗೂ ಮೇಘಾ ಶೆಟ್ಟಿ ನಡುವೆ ಕಿರಿಕ್ ಆಗಿದೆ. ಶೂಟಿಂಗ್ ಸ್ಪಾಟ್‌ನಲ್ಲಿ ಮೇಘಾ ಶೆಟ್ಟಿ ತ್ರಿವಿಕ್ರಮ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೌದು ಈಗಾಗಲೇ ಕನ್ನಡದಲ್ಲಿ 'ಮುದ್ದು ಸೊಸೆ' ಸೀರಿಯಲ್ ಪ್ರಸಾರ ಆಗುತ್ತಿದೆ. ಇದು ರೀಮೇಕ್ ಸೀರಿಯಲ್ ಆಗಿದ್ದರೂ ಕೂಡ ಕನ್ನಡದಲ್ಲಿ ಹಿಟ್ ಆಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಚಿಕ್ಕ ವಯಸ್ಸಿನಲ್ಲಿ ಓದಬೇಕು ಅನ್ನೋ ಮಹದಾಸೆ ಇಟ್ಟುಕೊಂಡಿರುವ ಹುಡುಗಿಯನ್ನ ಆ ಊರಿನ ಗೌಡನ ಮಗ ಮದುವೆಯಾಗುವಂತಹ ಸ್ಟೋರಿ ಈ ಧಾರವಾಹಿಯಲ್ಲಿ ಇದೆ. ಈ ಸೀರಿಯಲ್‌ಗೆ ಬಂಡವಾಳ ಹೂಡಿರುವುದು ಮೇಘಾ ಶೆಟ್ಟಿ. ಈ ಸೀರಿಯಲ್‌ನ ಪ್ರಡ್ಯೂಸರ್ ಆಗಿರುವುದು ಜೊತೆ ಜೊತೆ ಸೀರಿಯಲ್‌ನ ನಾಯಕ ನಟಿ ಅನು. ಅನು ಇಲ್ಲಿಯವರೆಗೆ ನಟಿ ಆಗಿದ್ದರು. ಮೊದಲು ಬಾರಿಗೆ ಪ್ರಡ್ಯೂಸರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ನಮ್ಮ ಕನ್ನಡ ಇಂಡಸ್ಟ್ರೀಯಲ್ಲಿ ಹುಡುಗಿ ಪ್ರಡ್ಯೂಸರ್ ಆಗಿರುವುದು ತುಂಬಾ ಕಡಿಮೆ. ಅವರು ಮಾಡಿದ್ದು ಒಂದೇ ಸೀರಿಯಲ್. ನಂತರ ಒಂದು ಸಿನಿಮಾ ಮಾಡಿದ್ದಾರೆ. ಇದೀಗ ನಟನೆ ಬಿಟ್ಟು ಫಿನಾನ್ಶಿಯಲ್ ಆಗಿ ನಿರ್ಮಾಪಕಿ ಆಗಿ ಕೆಲಸ ಮಾಡುತ್ತಿರುವುದು ತುಂಬಾ ಜನಕ್ಕೆ ಶಾಕ್ ಆಗಿದೆ. ಮೇಘಾ ಶೆಟ್ಟಿ ಇಷ್ಟೊಂದು ಹಣ ಮಾಡಿದ್ದಾರಾ ಎಂದು ಜನ ಪ್ರಶ್ನೆ ಮಾಡುವಂತಾಗಿದೆ. ನಟಿ ಆಗಿದ್ದವರು ಈಗ ಒಂದು ಸೀರಿಯಲ್ ಅನ್ನು ನಿರ್ಮಾಣ ಮಾಡುವಷ್ಟು ಜವಬ್ದಾರಿ ತೆಗೆದುಕೊಂಡಿದ್ದಾರೆ.
ಮೇಘಾ ಶೆಟ್ಟಿ ಮುದ್ದು ಸೊಸೆ ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಸ್ಪಾಟ್‌ಗೆ ಹೋಗಿದ್ದಾರೆ. ಈ ಸೀರಿಯಲ್‌ನಲ್ಲಿ ಒಂದು ಚಿಕ್ಕ ಪಾತ್ರವನ್ನು ಅವರಿಗೆ ನೀಡಲಾಗಿತ್ತು. ಈ ವೇಳೆ ತ್ರಿವಿಕ್ರಮ್ ಅವರು ಮೇಘಾ ಶೆಟ್ಟಿಯೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಾರೆ. ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿ ವೈರಲ್ ಆಗಿತ್ತು. ಇದನ್ನು ನೋಡಿದ ಮೇಘಾ ಶೆಟ್ಟಿಗೆ ಕೋಪ ಬಂದಿದೆ.
ಈಗ ತ್ರಿವಿಕ್ರಮ್ ಅವರಿಗೆ ಕೆಲಸ ಕೊಟ್ಟಿರುವುದೇ ಮೇಘಾ ಶೆಟ್ಟಿ. ಹೀಗಿರಬೇಕಾದರೆ ತ್ರಿವಿಕ್ರಮ್ ಅವರು ಮೇಘಾ ಶೆಟ್ಟಿಗೆ ಸಲಾಮ್ ಹೊಡೆಯಲೇ ಬೇಕು. ಯಾಕೆಂದರೆ ಅವಕಾಶವೇ ಇಲ್ಲದೆ ಮನೆಯಲ್ಲಿ ಇದ್ದವರಿಗೆ ಅವಕಾಶ ನೀಡಿದ್ದಾರೆ ಅಂದರೆ ಸಹಜವಾಗಿ ಅವರು ತ್ರಿವಿಕ್ರಮ್‌ಗೆ ಬಾಸ್. ಈ ಸಂದರ್ಭದಲ್ಲಿ ತ್ರಿವಿಕ್ರಮ್ ಅವರು ಮೇಘಾ ಶೆಟ್ಟಿಯೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಾರೆ. ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿ ವೈರಲ್ ಆಗುತ್ತದೆ. ಇದನ್ನು ನೋಡಿದ ಮೇಘಾ ಶೆಟ್ಟಿಗೆ ಕೋಪ ಬರುತ್ತದೆ.
ನಾವಿನ್ನೂ ಸೀರಿಯಲ್ ಶೂಟಿಂಗ್ ಹಂತದಲ್ಲಿ ಇದ್ದೇವೆ. ಇನ್ನೂ ಸೀರಿಯಲ್ ತೆರೆಗೆ ಬಂದಿಲ್ಲ. ನಿರ್ದೇಶಕರು ಯಾರು, ನಟಿ ಯಾರು, ಹೀರೋ ಯಾರು? ಯಾವುದೇ ಗುಟ್ಟು ಬಿಟ್ಟುಕೊಡಬಾರದು. ಶೂಟಿಂಗ್ ಶೆಟ್‌ಗೆ ನಾನು ಬಂದಾಗ ನೀವು ಫೋಟೋ ತೆಗೆದು ಸೋಶಿಯಲ್ ಮೀಡಿಯದಲ್ಲಿ ಹಾಕಿದ್ದು ಯಾಕೆ? ತೆರೆಗೂ ಮುನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಸರಿಯೇ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ ಮೇಘಾ ಶೆಟ್ಟಿ. ಅಷ್ಟಕ್ಕೆ ಸುಮ್ಮನಾಗದೇ ದುಡ್ಡು ಖರ್ಚಾದರೂ ಪರವಾಗಿಲ್ಲ ಆ ಚಿಕ್ಕ ಪಾತ್ರವನ್ನು ರೀ ಶೂಟ್ ಮಾಡಿ ಎಂದು ರೀಶೂಟ್ ಮಾಡಿಸಿದ್ದಾರೆ ಮೇಘಾ ಶೆಟ್ಟಿ. ಮೇಘಾ ಶೆಟ್ಟಿ ನಾನ್ ಮಾಡಿದ ಎಡವಟ್ಟಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡ್ರು ಎಂದು ತ್ರಿವಿಕ್ರಮ್ ಹೇಳಿಕೊಂಡಿದ್ದಾರೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್‌ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications