Bigg Boss Kannada: ಬಿಗ್‌ಬಾಸ್‌ ಶೋ ಬಗ್ಗೆ ನಟಿ ಮೇಘಾ ಶೆಟ್ಟಿ ಪೋಸ್ಟ್‌, ಹೇಳಿದ್ದೇನು?

ಕನ್ನಡ ಬಿಗ್‌ಬಾಸ್‌ ಸೀಸನ್‌-12ರಲ್ಲಿ (Bigg Boss Kannada) ಜೊತೆ ಜೊತೆಯಲಿ ಸೀರಿಯಲ್‌ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಒಂದು ತಿಂಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಸಂಭಾವ್ಯ ಸ್ಪರ್ಧಿಗಳ ವೈರಲ್‌ ಲಿಸ್ಟ್‌ನಲ್ಲೂ ಮೇಘಾ ಶೆಟ್ಟಿ ಅವರ ಹೆಸರಿತ್ತು. ಹಾಗಾಗಿ ಈ ಸೀಸನ್‌ನಲ್ಲಿ ನಟಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್‌ ಎಂದೆಲ್ಲ ಹೇಳಲಾಗುತ್ತಿದೆ. ಇತ್ತ ಮೇಘಾ ಶೆಟ್ಟಿ ಕೂಡ ಬಿಗ್‌ಬಾಸ್‌ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡು ಮಹತ್ವದ ವಿಚಾರ ತಿಳಿಸಿದ್ದಾರೆ.

ಒಂದು ವಾರದಿಂದಲೂ ಬಿಗ್‌ಬಾಸ್‌ ಸ್ಪರ್ಧಿಗಳ ಪಟ್ಟಿಯಲ್ಲಿ ಮೇಘಾ ಶೆಟ್ಟಿ ಅವರ ಹೆಸರೇ ಹೆಚ್ಚಾಗಿ ಕೇಳಿಬರುತ್ತಿತ್ತು. ಕಳೆದ ಸೀಸನ್‌ ವೇಳೆಯೂ ಮೇಘಾ ಅವರ ಹೆಸರು ಸದ್ದು ಮಾಡಿತ್ತು. ಆದರೆ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಳ್ಳಲಿಲ್ಲ. ಆದರೆ ಈ ಬಾರಿ ಮೇಘಾ ಬಿಗ್‌ಬಾಸ್‌ ಸ್ಪರ್ಧಿಯಾಗಿರುವುದು ಬಹುತೇಕ ಪಕ್ಕಾ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಮೇಘಾ ಬಿಗ್‌ಬಾಸ್‌ ಬಗ್ಗೆ ಮಾತನಾಡಿದ್ದಾರೆ.

megha-shetty-breaks-silence-on-bigg-boss-kannada-season-12-rumors

ಕಿರುತೆರೆ ನಟಿಯಾಗಿ ಕಾಲಿಟ್ಟ ಮೇಘಾ ಶೆಟ್ಟಿ 2019ರಲ್ಲಿ ಪ್ರಸಾರವಾದ 'ಜೊತೆ ಜೊತೆಯಲಿ' ಸೀರಿಯಲ್‌ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಂಗಳೂರು ಮೂಲದ ಮೇಘಾ ಅವರು ಕಿರುತೆರೆಯಲ್ಲಿ ಮಾತ್ರವಲ್ಲದೆ ಇದೀಗ ಸ್ಯಾಂಡಲ್‌ವುಡ್‌ ನಾಯಕಿಯಾಗಿಯೂ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿದ್ದು, ಇದರ ನಡುವೆ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ತಾರೆ ಎಂದೂ ಹೇಳಲಾಗುತ್ತಿದೆ.

ಬಿಗ್‌ಬಾಸ್‌ಗೆ ಹೋಗ್ತಾರಾ ಮೇಘಾ?

ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡಿದ್ದರಿಂದ ಮೇಘಾ ಶೆಟ್ಟಿ ಕೊನೆಗೂ ಮೌನ ಮುರಿದಿದ್ದಾರೆ. ನಾನು ಬಿಗ್‌ಬಾಸ್‌ಗೆ ಹೋಗ್ತಿಲ್ಲ ಗಾಯ್ಸ್‌... ಬಿಗ್‌ಬಾಸ್‌ಗೆ ಹೋಗ್ತೀನಿ ಅಂತ ಸುದ್ದಿ ಹರಡುವುದನ್ನ ದಯವಿಟ್ಟು ನಿಲ್ಲಿಸಿ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮೇಘಾ ಶೆಟ್ಟಿ ಕ್ಲಾರಿಟಿ ಕೊಟ್ಟಿದ್ದಾರೆ. ಅಲ್ಲಿಗೆ ಮೇಘಾ ಶೆಟ್ಟಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ ಸುಳ್ಳಾಗಿದೆ.

ತ್ರಿಬಲ್ ರೈಡಿಂಗ್, ದಿಲ್ ಪಸಂದ್, ಕೈವ ಸಿನಿಮಾಗಳ ಯಶಸ್ಸಿನ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಮೇಘಾ ನಟಿಸುತ್ತಿದ್ದಾರೆ. ಚೀತಾ ಹಾಗೂ ಗ್ರಾಮಾಯಣ ಸಿನಿಮಾಗಳಲ್ಲಿ ಮೇಘಾ ನಟಿಸುತ್ತಿದ್ದಾರೆ. ಇದರ ಜೊತೆಗೆ ಮುದ್ದು ಸೊಸೆ ಧಾರಾವಾಹಿಯನ್ನ ಸಹ ನಿರ್ಮಾಣ ಮಾಡುತ್ತಿದ್ದಾರೆ. ಈಗ ಅವರು ತಮ್ಮ ಕೆಲಸದಲ್ಲಿ ಫುಲ್‌ ಬ್ಯುಸಿ ಇರುವ ಕಾರಣ ಬಿಗ್‌ಬಾಸ್‌ಗೆ ಹೋಗದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಮನೆಯಲ್ಲಿ ಮೇಘಾ ಶೆಟ್ಟಿ ಬರ್ತಾರೆ ಎಂದು ಕಾಯುತ್ತಿದ್ದವರಿಗೆ ಅವರೇ ನಿರಾಸೆ ಮಾಡಿದ್ದಾರೆ.

ಪಟ್ಟಿಯಲ್ಲಿ ಯಾರೆಲ್ಲರ ಹೆಸರಿದೆ?

ಸ್ವಾತಿ, ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ದೀಪಿಕಾ ಗೌಡ, ಧನುಷ್ ಗೌಡ, ಅಮೃತಾ ರಾಮಮೂರ್ತಿ, ಶ್ವೇತಾ ಪ್ರಸಾದ್, ವರ್ಷಾ ಕಾವೇರಿ, ಪಾಯಲ್ ಚೆಂಗಪ್ಪ, ಡಾ ಬ್ರೋ ಗಗನ್‌, ಅರವಿಂದ್ ರತನ್, ಅರ್ಚನಾ ಜೋಯಿಸ್, ವಿಜಯ್ ಸೂರ್ಯ, ಗಗನಾ, ಸ್ಪಂದನ ಸೋಮಣ್ಣಸೇರಿದಂತೆ ಹಲವರ ಹೆಸರು ಸದ್ಯ ಚರ್ಚೆಯಲ್ಲಿದೆ. ಇವರೆಲ್ಲ ಯಾರೆಲ್ಲ ಈ ಸೀಸನ್‌ನ ಸ್ಪರ್ಧಿಗಳಾಗ್ತಾರೆ ಎಂಬ ಪ್ರಶ್ನೆಗೆ ಇನ್ನು ಒಂದೇ ವಾರದಲ್ಲಿ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+