ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ!
ನಟ ಚಿರಂಜೀವಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದ್ದು, ಜಗತ್ತಿನಾದ್ಯಂತ ಮೆಗಾಸ್ಟಾರ್ ಹವಾ ಇದೆ. ಈ ಮೊದಲು ಸಂಪೂರ್ಣ ಸಿನಿಮಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿದ್ದ ನಟನಿಗೆ ರಾಜಕೀಯ ಕೈಬೀಸಿ ಕರೆದಿತ್ತು. ಹೀಗೆ ಮೆಗಾಸ್ಟಾರ್ ಚಿರಂಜೀವಿ ಅವರು ಸಿನಿಮಾ ಬಿಟ್ಟಾಕಿ ಫುಲ್ ಟೈಂ ರಾಜಕಾರಣಿ ಆಗಲು ಹೋಗಿದ್ದರು. ಆದರೆ ರಾಜಕೀಯ ಅವರ ಕೈಹಿಡಿಯಲೇ ಇಲ್ಲ. ಹೀಗಾಗಿ ಮತ್ತೆ ಸಿನಿಮಾ ರಂಗದಲ್ಲಿ ಚಿರಂಜೀವಿ ಬ್ಯುಸಿಯಾದರು. ಆದರೂ, ಕಳೆದ 1 ವರ್ಷದಿಂದ ಅವರ ಮುಂದಿನ ಸಿನ್ಮಾ ಬಗ್ಗೆ ಅಪ್‌ಡೇಟ್ ಇರಲಿಲ್ಲ. ಆದ್ರೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ.
68ರ ಹರಯದ ನಟ ಚಿರಂಜೀವಿ ತಮ್ಮ ಅಭಿಮಾನಿಗಳಿಗೆ ನೂರಾರು ಸಿನಿಮಾಗಳ ಮೂಲಕ ಮನರಂಜನೆ ನೀಡಿದ್ದಾರೆ. 1978ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ಈ ನಟ ಮುಂದೆ, 2009ರ ತನಕ ಬಿಡುವು ಇಲ್ಲದಂತೆ ಸಿನಿಮಾ ಕ್ಷೇತ್ರಕ್ಕೆ ಕಲಾ ಸೇವೆ ಸಲ್ಲಿಸಿದ್ದರು. ಆದರೆ ಈ ಸಮಯದಲ್ಲೇ ಒಂದು ಬಿಗ್ ಬ್ರೇಕ್ ಪಡೆದು, 2013 ರಲ್ಲಿ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದರು ಮೆಗಾಸ್ಟಾರ್ ಚಿರಂಜೀವಿ ಅವರು. ಇದೀಗ ಈ ನಟನ ಮತ್ತೊಂದು ಸಿನಿಮಾಗೆ ಕೌಂಟ್‌ಡೌನ್ ಶುರುವಾಗಿದೆ. ಚಿರಂಜೀವಿ ಮುಂದಿನ ಸಿನಿಮಾ ಕೂಡ ಕನ್ಫರ್ಮ್ ಆಗಿದೆ.

ಚಿರಂಜೀವಿ ಮುಂದಿನ ಸಿನಿಮಾ ಯಾವುದು?
ಅಷ್ಟಕ್ಕೂ ಕಳೆದ ವರ್ಷ ಅಂದ್ರೆ 2023ರ ಸಂಕ್ರಾಂತಿಗೆ ತಮ್ಮ ಅಭಿಮಾನಿಗಳಿಗೆ ಚಿರಂಜೀವಿ, ಭರ್ಜರಿ ಗಿಫ್ಟ್ ನೀಡಿದ್ದರು. ವಾಲ್ಟೇರ್ ವೀರಯ್ಯ ಸಿನ್ಮಾ ಮೂಲಕ ಕಳೆದ ಸಂಕ್ರಾಂತಿ ಹಬ್ಬಕ್ಕೆ ಮನರಂಜನೆ ಬಾಡೂಟ ಬಡಿಸಿದ್ದ ಮೆಗಾಸ್ಟಾರ್ ಚಿರಂಜೀವಿ, ಈ ವರ್ಷ 'ವಿಶ್ವಂಭರ' ಟೈಟಲ್ ಟೀಸರ್ ಮೂಲಕ ಸುಗ್ಗಿ ಸಂಭ್ರಮವನ್ನು ಡಬಲ್ ಮಾಡಿದ್ದಾರೆ. ಚಿರು ನಟಿಸುತ್ತಿರುವ 156ನೇ ಸಿನಿಮಾದ ಟೈಟಲ್ ಟೀಸರ್ ಸಂಕ್ರಾಂತಿ ವಿಶೇಷವಾಗಿ ರಿಲೀಸ್ ಆಗಿ ಸದ್ದು ಕೂಡ ಮಾಡ್ತಿದೆ.
ಫ್ಯಾಂಟಸಿ ಸಿನಿಮಾದಲ್ಲಿ ಚಿರು ಅಬ್ಬರ
ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾ ಬಳಿಕ ಚಿರಂಜೀವಿ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ವಿಶ್ವಂಭರ' ಎಂಬ ಟೈಟಲ್ ಇಡಲಾಗಿದೆ. ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ಸ್ ಕೆಲಸ ಪರಿಣಾಮಕಾರಿ ಆಗಿದೆ. ಈ ಮೆಗಾ ಫ್ಯಾಂಟಸಿ ಸಾಹಸವನ್ನು ಬಿಂಬಿಸಾರ ಖ್ಯಾತಿಯ ವಸಿಷ್ಠ ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ದೇಶಿಸಿದ್ದಾರೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಸಿನಿಮಾಗೆ ಬಂಡವಾಳ ಹಾಕುತ್ತಿದ್ದು, ಚಿರಂಜೀವಿ ಸಿನಿ ಕರಿಯರ್‌ನಲ್ಲೇ ಅತ್ಯಂತ ದುಬಾರಿ ವೆಚ್ಚದ ಸಿನಿಮಾ ಇದಾಗಲಿದೆ ಎನ್ನುವ ಮಾಹಿತಿ ಕುತೂಹಲ ಹೆಚ್ಚು ಮಾಡಿದೆ.
ಮೆಗಾಸ್ಟಾರ್ ಸಿನಿಮಾ ತಂಡ ಹೇಗಿದೆ?
ವಿಶ್ವಂಭರ ಸಿನಿಮಾಗೆ ಎಂಎಂ ಕೀರವಾಣಿ ಮ್ಯೂಸಿಕ್ ಇರಲಿದ್ದು ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣ ಇದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ ಮತ್ತೆ ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಕೋಟಗಿರಿ ವೆಂಕಟೇಶ್ವರ ರಾವ್ ಮತ್ತು ಸಂತೋಷ್ ಕಾಮಿರೆಡ್ಡಿ ಈ ಚಿತ್ರಕ್ಕೆ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀ ಶಿವಶಕ್ತಿ ದತ್ತ & ಚಂದ್ರಬೋಸ್ ಚಿತ್ರಕ್ಕೆ ಗೀತ ರಚನೆ ಮಾಡುವರು.

ಇನ್ನುಳಿದಂತೆ ಶ್ರೀನಿವಾಸ್ ಗವಿರೆಡ್ಡಿ, ಗಂಟಾ ಶ್ರೀಧರ್, ನಿಮ್ಮಗಡ್ಡ ಶ್ರೀಕಾಂತ್ & ಸೇರಿದಂತೆ ಮಯೂಖ್ ಆದಿತ್ಯ ಅವರು ಚಿತ್ರಕಥೆ ಸಹಾಯಕರಾಗಿದ್ದಾರೆ. 2025 ರ ಸಂಕ್ರಾಂತಿಗೆ ಚಿತ್ರವನ್ನ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಣೆ ಮಾಡಿದ್ದಾರೆ. ಈ ಮೂಲಕ, ತೆಲುಗು ಸಿನಿಮಾ ರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳಿಗೆ ಬಿಗ್ ನ್ಯೂಸ್ ಸಿಕ್ಕಿದೆ.












Click it and Unblock the Notifications