ನಟ ದರ್ಶನ್ ಬಂಧನದ ಬಗ್ಗೆ ಮೀನಾ ತೂಗುದೀಪ ಪ್ರತಿಕ್ರಿಯೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸಿ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಜೈಲಿನಿಂದ ಹೊರ ಬಂದಿದ್ದಾರೆ. ಆದರೂ ಕೂಡ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ.
ಹೌದು.. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಜೈಲಿಗೆ ಹೋಗಿ ಬಂದಾಗಿನಿಂದಲೂ ಕಾನೂನು ಸಂಕಷ್ಟಗಳಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ. ದರ್ಶನ್ ಮತ್ತು ಅವರ ಗ್ಯಾಂಗ್‌ಗೆ ಹೈಕೋರ್ಟ್ ನೀಡಿದ ಜಾಮೀನು ಅರ್ಜಿ ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ

ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಮೊನ್ನೆಯಷ್ಟೇ ವಿಚಾರಣೆ ನಡೆದಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದೆ. ಹೀಗಾಗಿ ದರ್ಶನ್ ಅವರಿಗೆ ಮತ್ತೆ ಜೈಲಿಗೆ ಹೋಗುವ ಭೀತಿ ಎದುರಾಗಿದೆ. ಆದರೆ ದರ್ಶನ್ ಕುಟುಂಬಸ್ಥರಿಗೆ ಈ ಬಗ್ಗೆ ಯಾವುದೇ ಭಯ ಇಲ್ಲ. ಯಾಕೆಂದರೆ ದರ್ಶನ್ ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ಕುಟುಂಬಸ್ಥರಿಗಿದೆ. ಅಲ್ಲದೆ ದರ್ಶನ್ ಅವರ ಅಭಿಮಾನಿಗಳಿಗೂ ತಮ್ಮ ನೆಚ್ಚಿನ ನಟ ಡಿ-ಬಾಸ್ ಮೇಲೆ ಅಪಾರವಾದ ನಂಬಿಕೆ ಇದೆ. ಹೀಗಾಗಿ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತಿದೆ.
ಇನ್ನೂ ದರ್ಶನ್ ಮತ್ತೆ ಜೈಲಿಗೆ ಹೋಗುವ ಸುದ್ದಿಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೀನಾ ತೂಗುದೀಪ, 'ಮಗ ಆರೋಗ್ಯವಾಗಿದ್ದಾನೆ. ಅವರು ಈಗ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ನನಗೆ ಆ ದೇವರ ಮೇಲೆ ನಂಬಿಕೆ ಇದೆ. ಆ ದೇವರು ನನ್ನ ಮಗನನ್ನು ಕಾಪಾಡುತ್ತಾನೆ. ನನ್ನ ಮಗ ತಪ್ಪು ಮಾಡಿಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ. ಆ ದೇವರ ಮೇಲಿರುವ ನಂಬಿಕೆ, ಅಭಿಮಾನಿಗಳ ಪ್ರೀತಿ ನನ್ನ ಮಗನನ್ನು ಸದಾ ಕಾಪಾಡುತ್ತದೆ' ಎಂದಿದ್ದಾರೆ.
'ಮಗ ಅರೆಸ್ಟ್ ಆಗಲ್ಲ. ನೀವೇ ನೋಡುವಂತೆ ಅವರು ಶೂಟಿಂಗ್ ಅಲ್ಲಿ ಬ್ಯೂಸಿ ಆಗಿದ್ದಾರೆ. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದಾನೆ. ಬಂಧನದ ಸುಳ್ಳು ಸುದ್ದಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದಿದ್ದಾರೆ.
ಇನ್ನೂ ದರ್ಶನ್ ಪ್ರಸ್ತುತ ಡೆವಿಲ್ ಸಿನಿಮಾ ಶೂಟಿಂಗ್ ಅಲ್ಲಿ ಬ್ಯೂಸಿ ಆಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಶೂಟಿಂಗ್ ಮುಗಿಸಿ ವಾಪಾಸ್ ಆಗಿದ್ದಾರೆ. ಪತ್ನಿ ಹಾಗೂ ಮಗನ ಜೊತೆಗೆ ದರ್ಶನ್ ರಾಜಸ್ಥಾನಕ್ಕೆ ಡೆವಿಲ್ ಶೂಟಿಂಗ್‌ಗಾಗಿ ತೆರಳಿದ್ದರು. ಇದೀಗ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.
ಷರತ್ತು ಬದ್ಧ ಜಾಮೀನು ಪಡೆದು ದರ್ಶನ್ ಜೈಲಿನಿಂದ ಹೊರ ಬಂದಿದ್ದಾರೆ. ಬಳಿಕ ದೇಶದಾದ್ಯಂತ ಪ್ರವಾಸ ಮಾಡುವ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ ಮತ್ತೆ ಜೈಪುರಕ್ಕೆ ಹೋಗಬೇಕಾದ ಸಮಯ ಬಂದರು ಬರಬಹುದು.
ಒಟ್ಟಿನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು ಇದೇ ವೇಗದಲ್ಲಿ ಶೂಟಿಂಗ್ ನಡೆದರೆ ಇದೇ ವರ್ಷದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಜೊತೆಗೆ ದರ್ಶನ್ ಬಂಧನದ ಬಗ್ಗೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ನಿರ್ಭೀತರಾಗಿದ್ದಾರೆ.












Click it and Unblock the Notifications