Mata Guruprasad: ಗುರುಪ್ರಸಾದ್ ಕೊನೆಯ ವಾಟ್ಸಾಪ್ ಚಾಟ್ ಯಾರ ಜೊತೆ ನಡೆದಿತ್ತು? ಮತ್ತೊಂದು ರಹಸ್ಯ ಬಯಲು..
ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬಗೆದಷ್ಟು ವಿಚಾರಗಳು ಗುರುಪ್ರಸಾದ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬೆಳಕಿಗೆ ಬರುತ್ತಿವೆ. ಕೊನೆಯದಾಗಿ ಗುರುಪ್ರಸಾದ್ 'ಎದ್ದೇಳು ಮಂಜುನಾಥ ಭಾಗ 2 ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಸಿನಿಮಾ ತೆರೆಗೆ ಬರುವ ಮುನ್ನವೇ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾದರೆ ಗುರುಪ್ರಸಾದ್ ಆತ್ಮಹತ್ಯೆಗೂ ಮುನ್ನ ಯಾರೊಂದಿಗೆ ಚಾಟ್ ಮಾಡಿದ್ದರು? ಅವರ ಕೊನೆಯ ವಾಟ್ಸಾಪ್ ಚಾಟ್ ಯಾರ ಜೊತೆ ನಡೆದಿತ್ತು?
ಗುರುಪ್ರಸಾದ್ ಸಂಬಂಧಿ ರವಿ ದೀಕ್ಷಿತ್ ಅವರು ಸುದ್ದಿಗಾರರೊಂದಿಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗುರುಪ್ರಸಾದ್ ಆತ್ಮಹತ್ಯೆಗೂ ಮುನ್ನ ಪ್ರೆಂಡ್ಸ್ ಫೋರಮ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದರು. 'ನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸದ್ಯ ವಿಶ್ರಾಂತಿ ಪಡೆಯುತ್ತಿದ್ದೇನೆ. ದೀಪಾವಳಿ ಹಬ್ಬದ ಬಳಿಕ ಸಿನಿಮಾ ಚಟುವಟಿಕೆ ಮುಂದುವರೆಸೋಣ' ಎಂದು ತಿಳಿಸಿದ್ದರು. ಆಗಸ್ಟ್ 26ರ ಸಂಜೆ ಈ ಬಗ್ಗೆ ವಾಟ್ಸಾಪ್ ಗ್ರೂಪ್ ನಲ್ಲಿ ಗುರುಪ್ರಸಾದ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಆಗಸ್ಟ್ 31ರಂದು ಮತ್ತೆ ಸಿನಿಮಾ ಬಗ್ಗೆ ಅಪ್ಡೇಟ್ ಕೊಡುವುದಾಗಿ ಗುರುಪ್ರಸಾದ್ ತಿಳಿಸಿದ್ದರು ಎಂದು ಸಂಬಂಧಿ ರವಿ ಧೀಕ್ಷಿತ್ ತಿಳಿಸಿದ್ದಾರೆ.

ನನಗೆ ಬಿಪಿ ಜಾಸ್ತಿ ಆಗಿದೆ ಎಂದಿದ್ದ ಗುರುಪ್ರಸಾದ್...
ಗುರಪ್ರಸಾದ್ ಅವರಿಗೆ ಆರೋಗ್ಯ ಸರಿಯಾಗಿರಲಿಲ್ಲ. ಕಳೆದ ಬಾರಿ ಎದ್ದೇಳು ಮಂಜುನಾಥ ಭಾಗ 2 ಸಿನಿಮಾ ಡಬ್ಬಿಂಗ್ ಮಾಡುವಾಗ ರವಿ ಅವರನ್ನು ನೋಡಿದ್ದರಂತೆ ರವಿ. ಆ ನಂತರ ರವಿ ಅವರಿಗೆ ಗುರುಪ್ರಸಾದ್ ಅವರು ಸಿಕ್ಕಿರಲಿಲ್ಲ. ಗುರುಪ್ರಸಾದ್ ಕೆಲಸದಲ್ಲಿ ಬ್ಯೂಸಿ ಆಗಿರಬೇಕು ಅಂತ ರವಿ ಕೂಡ ಸುಮ್ಮನಾಗಿದ್ದರು. ಕೆಲ ದಿನಗಳ ಬಳಿಕ ರವಿ ಅವರಿಗೆ ಕಾಲ್ ಮಾಡಿದ್ದ ಗುರುಪ್ರಸಾದ್, 'ನನಗೆ ಹುಷಾರಿಲ್ಲ. ಬಿಪಿ ಜಾಸ್ತಿ ಆಗುತ್ತಿದೆ. ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದೇನೆ' ಎಂದು ತಿಳಿಸಿದ್ದರು. 'ಸರಿ ನಿಮ್ಮ ಆರೋಗ್ಯ ನೋಡಿಕೊಳ್ಳಿ' ಎಂದು ಹೇಳಿ ಕಾಲ್ ಕಟ್ ಮಾಡಿದ್ದರು ರವಿ.
ಬಿಪಿ ಮತ್ತು ಚರ್ಮ ರೋಗದ ಸಮಸ್ಯೆ
ಗುರುಪ್ರಸಾದ್ ಬಿಪಿ ಹಾಗೂ ಚರ್ಮ ರೋಗದ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಹಲವಾರು ಮಾತ್ರೆಗಳನ್ನು ಸೇವಿಸುತ್ತಿದ್ದರು. ಅಲ್ಲದೆ ವಿಪರೀತ ಮದ್ಯಪಾನ ಹಾಗೂ ಧೂಮಪಾನದಿಂದಾಗಿ ಅವರ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಈ ಹಿಂದೆ ಮದುವೆ ಆಗಿ ವಿಚ್ಚೇದನ ಪಡೆದಿದ್ದ ಗುರುಪ್ರಸಾದ್ ನಂತರ ಎರಡನೇ ಮದುವೆ ಕೂಡ ಆಗಿದ್ದರು. ಆದರೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಗುರುಪ್ರಸಾದ್ ಎಲ್ಲಿಯೂ ಕೂಡ ಹೆಚ್ಚಾಗಿ ಹಂಚಿಕೊಂಡಿಲ್ಲ. ಆದರೆ ಇತ್ತೀಚೆಗೆ ತುಂಬಾ ಸಾಲಗಾರರ ಕಾಟ ಹಾಗೂ ಆರೋಗ್ಯ ಸಮಸ್ಯೆಯಿಂದಲೂ ರವಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ರವಿ ತಿಳಿದ್ದಾರೆ.
ಗುರುಪ್ರಸಾದ್ ಆತ್ಮಹತ್ಯೆಗೆ ಕಾರಣ...
ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಅವರ ಸಾವಿಗೆ ಸಾಲಗಾರರ ಕಾಟವೇ ಕಾರಣ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು ಎರಡನೇ ಮದುವೆ ಅವರ ಸಾವಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಅವರು ಎರಡನೇ ಮದುವೆ ಆಗಿದ್ದರೂ ಕೂಡ ಒಬ್ಬರೇ ಇದ್ದಿದ್ದು ಯಾಕೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.
ಬೆಂಗಳೂರು ಉತ್ತರ ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಆಗಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದ್ದಾರೆ.











Click it and Unblock the Notifications