Master Anand: ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ?: ಯಶಸ್ವಿನಿ ಹೀಗಂದಿದ್ಯಾಕೆ?
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಎಂದರೆ ಕನ್ನಡಿಗರಿಗೆ ತುಸು ಜಾಸ್ತಿನೇ ಪ್ರೀತಿ. ಈಗ ಅದೇ ಪ್ರೀತಿಯನ್ನು ಅವರ ಪತ್ನಿ ಯಶಸ್ವಿನಿ ಮಾಸ್ಟರ್ ಆನಂದ್ ಹಾಗೂ ಮಗಳು ವಂಶಿಕಾ ಅಂಜನಿ ಕಶ್ಯಪ್‌ಗೂ ನೀಡುತ್ತಿದ್ದಾರೆ. ಕಿರುತೆರೆಯ ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಯಶಸ್ವಿನಿ ಹಾಗೂ ವಂಶಿಕಾ ಇದೀಗ ಕನ್ನಡಿಗರಿಗೆ ಚಿರಪರಿಚಿತರು.
ಈವರೆಗೂ ತಾವಾಯಿತು ತಮ್ಮ ಸಂಸಾರವಾಯಿತು ಎಂದುಕೊಂಡಿದ್ದ ಯಶಸ್ವಿನಿ ಕಳೆದ ಎರಡು ಮೂರು ವರ್ಷಗಳಿಂದ ಮನೋರಂಜನಾ ಕ್ಷೇತ್ರಕ್ಕೆ ಬಂದು ತಮ್ಮ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಿರುತೆರೆ ಶೋಗಳು, ಕ್ರಿಕೆಟ್, ನಿರೂಪಣೆಯಲ್ಲೂ ಗುರುತಿಸಿಕೊಳ್ಳುತ್ತಿರುವ ಯಶಸ್ವಿನಿ ಮಾಸ್ಟರ್ ಆನಂದ್ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟವ್ ಆಗಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ ಯಶಸ್ವಿನಿ ಮಾಸ್ಟರ್ ಆನಂದ್ ಇದೀಗ ತಮ್ಮದೇ ಆದ ಹೊಸ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು, ತಾವೇ ನಿರೂಪಕಿಯಾಗಿ ವಿಭಿನ್ನವಾಗಿ ಶೋ ನಡೆಸಿಕೊಂಡು ಹೋಗುತ್ತಿದ್ದಾರೆ. ಕನೆಕ್ಟ್ ಕನ್ನಡ(Konnect Kannada) ಎನ್ನುವ ಇವರ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷವಾದ ಅತಿಥಿಗಳನ್ನೇ ಕರೆಸುತ್ತಿದ್ದು, ಬಹಳ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ.
ಇದೀಗ ಯಶಸ್ವಿನಿ ಮಾಸ್ಟರ್ ಆನಂದ್ ಅವರ ಕನೆಕ್ಟ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಕಾಮಿಡಿ ಕಿಲಾಡಿಗಳು ನಯನ ಅತಿಥಿಯಾಗಿ ಬಂದಿದ್ದು, ಈ ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಆದರೆ ಈ ಪ್ರೋಮೋಗೆ ಯಶಸ್ವಿನಿ ಮಾಸ್ಟರ್ ನೀಡಿರುವ ಟೈಟಲ್ ಈಗ ಚರ್ಚೆಗೆ ಗ್ರಾಸವಾಗಿದೆ.

ಮೊದಲು ಈ ಪ್ರೋಮೋದಲ್ಲಿ ಅಂತಹದ್ದೇನಿದೆ ಎಂದು ನೋಡುವುದಾದರೆ, ನಯನ ಮೊದಲಿಗೆ ನಿಮ್ಮ ಯಜಮಾನರು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದು ಎಂದಿದ್ದಾರೆ. ಇದಕ್ಕೆ ಯಶಸ್ವಿನಿ ಮಾಸ್ಟರ್ ಆನಂದ್, ನೀನು ಪ್ರೀತಿ ಮಾಡ್ತಿದ್ದೇ ತಾನೇ ಎಂದು ಹೇಳಿ ಸ್ವಲ್ಪ ವಿರಾಮ ಕೊಟ್ಟಿದ್ದು, ನಯನ ಯಾರನ್ನಾ ಎಂದು ಕೇಳಿದ್ದಾರೆ, ಇದಕ್ಕೆ ಯಶಸ್ವಿನಿ, ಶರತ್ ಎಂದು ಹೇಳಿದ್ದಾರೆ.
ಮತ್ತೆ ನಯನ ಮಾತನಾಡಿದ್ದು, ಈ ಲವ್ ಮಾಡಬೇಕಾದರೆ ಚೆನ್ನಾಗಿ ಮಾತನಾಡುತ್ತಾರೆ. ನೀನು ಯಾಕೆ ಫೋನ್ ಮಾಡಲ್ಲ, ನೀನು ಯಾಕೆ ಮೆಸೇಜ್ ಮಾಡಲ್ಲ. ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ ಅಂತೆಲ್ಲಾ ಹೇಳುತ್ತಿರುತ್ತಾರೆ. ಮದುವೆಯಾದ ಮೇಲೆ ಯಾಕೆ ಆ ಪ್ರೀತಿ ಇರಲ್ಲ ನಿಮಗೆ ಎಂದು ಪ್ರಶ್ನಿಸಿರುವ ನಯನ, ಜೀವನದಲ್ಲಿ ಮುಜುಗರ ಆಗುವಂತದ್ದು ಏನು ಮಾಡಿದ್ದೇನೆ. ನೀವು ಏನೇನೋ ಮಾತನಾಡಬೇಡಿ ನನಗೆ ನಾಚಿಕೆ ಆಗುತ್ತದೆ ಎಂದು ಇಬ್ಬರು ಜೋರಾಗಿ ನಕ್ಕಿದ್ದಾರೆ. ಬಳಿಕ ನಯನ ತಮ್ಮದೇ ಸ್ಟೈಲ್‌ನಲ್ಲಿ ಯಶಸ್ವಿನಿ ಮಾಸ್ಟರ್ ಆನಂದ್ ಯೂಟ್ಯೂಬ್ ಚಾನೆಲ್‌ನ ಬಗ್ಗೆ ಮಾತನಾಡಿದ್ದಾರೆ.

ಇಷ್ಟೆಲ್ಲಾ ಮಾತನಾಡಿ ಬರಿ ನಗುವೇ ತುಂಬಿರುವ ಈ ಪ್ರೋಮೋಗೆ ಯಶಸ್ವಿನಿ ಮಾಸ್ಟರ್ ಆನಂದ್ ಕೊಟ್ಟಿರುವ ಟೈಟಲ್ ಅಪ್ರಸುತ್ತವಾಗಿದೆ ಎನ್ನುವಂತಿದೆ. ಕಾಮಿಡಿ ಕಿಲಾಡಿಗಳು ನಯನಾ ಸಂದರ್ಶನದ ವಿಡಿಯೋ ಪ್ರೋಮೋಗೆ, ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಎಂದು ಟೈಟಲ್ ನೀಡಲಾಗಿದೆ.
ಈ ಟೈಟಲ್ ನೋಡಿದವರು ವಿಡಿಯೋ ಕ್ಲಿಕ್ ಮಾಡಿ ಪ್ರೋಮೋ ನೋಡಿ ಈ ವಿಡಿಯೋಗೆ ಇಂದೆಥಹ ಟೈಟಲ್ ಯಶಸ್ವಿನಿ ಮಾಸ್ಟರ್ ಆನಂದ್ ಅವರೇ ಅಂತಾ ಎಂದುಕೊಳ್ಳುತ್ತಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗುತ್ತಿದ್ದು, ಅತಿಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ.












Click it and Unblock the Notifications