ಲೇಡಿ ಡಾಕ್ಟರ್‌ಗೆ ಮೋಸ ಮಾಡಿದ್ರಾ ನಟ ಮಹೇಶ್ ಬಾಬು? ಪ್ರಿನ್ಸ್‌ಗೆ ದೊಡ್ಡ ಸಂಕಷ್ಟ!
ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು (Mahesh Babu) ಲೇಡಿ ಫ್ಯಾನ್ಸ್ ಹೆಚ್ಚಾಗಿ ಹೊಂದಿರುವ ನಟ. 50 ವರ್ಷದ ಸನಿಹದಲ್ಲಿರುವ ಈ ಹ್ಯಾಂಡ್‌ಸಮ್ ನಟನನ್ನ ಕಂಡರೆ ಈಗಿನ ಯುವತಿಯರು ಕೂಡ ಪ್ರಪೋಸ್ ಮಾಡ್ತೀವಿ ಅಂತಾರೆ. ಅಷ್ಟರಮಟ್ಟಿಗೆ ಕ್ರೇಜ್ ಉಳಿಸಿಕೊಂಡು ಬಂದಿದ್ದಾರೆ ಮಹೇಶ್ ಬಾಬು. ಟಾಲಿವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಅವರು ಸದ್ಯ SSMB29 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಹೊತ್ತಲ್ಲಿ ನಟನ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ನಟ ಮಹೇಶ್ ಬಾಬು ನನಗೆ ಮೋಸ ಮಾಡಿದ್ದಾರೆ ಎಂದು ಲೇಡಿ ಡಾಕ್ಟರ್ ಆರೋಪ ಮಾಡಿದ್ದಾರೆ.
ಹೌದು, ಮಹೇಶ್ ಬಾಬು ಅವರ ಸಿನಿಮಾಗಳಿಗೆ ಫ್ಯಾನ್ಸ್ ಕಾಯುತ್ತಾ ಕೂರುತ್ತಾರೆ. ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿರುವ ಮಹೇಶ್ ಬಾಬು ಅವರು ಮಡದಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯಾದ ಜೀವನಕ್ಕೆ ಸಾಕ್ಷಿಯಾಗಿದ್ದಾರೆ. ಮಹೇಶ್ ಬಾಬು ಅವರಂತಹ ಹ್ಯಾಂಡ್‌ಸಮ್ ಹುಡುಗ ನಮಗೆ ಸಿಗಬಾರದಾ? ಎಂದು ದೇವರಲ್ಲಿ ಪ್ರಾರ್ಥಿಸುವ ಯುವತಿಯರೂ ಇದ್ದಾರೆ. ಅಷ್ಟರಮಟ್ಟಿಗೆ ಮಹೇಶ್ ಬಾಬು ಅವರಿಗೆ ಕ್ರೇಜ್ ಇದೆ. ಇದೀಗ ವೈದ್ಯೆಯೊಬ್ಬರು ಮಹೇಶ್ ಬಾಬು ನನಗೆ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿರುವುದು ಸಂಚಲನ ಸೃಷ್ಟಿಸಿದೆ.

ಹೈದರಾಬಾದ್‌ನ ಓರ್ವ ವೈದ್ಯೆ ಮಹೇಶ್ ಬಾಬು ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವೈದ್ಯೆ ಸೇರಿದಂತೆ ಹಲವರು, ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಗಳು ಅನುಮತಿ ಪಡೆಯದ ಯೋಜನೆಗಳಿಗೆ ಜಾಹೀರಾತು ನೀಡಿ ಮೋಸ ಮಾಡಿವೆ ಎಂದು ಆರೋಪಿಸಿದ್ದಾರೆ. ಈ ಕಂಪನಿಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಮಹೇಶ್ ಬಾಬು ಅವರಿಗೂ ಇದರಿಂದ ಸಂಕಷ್ಟ ಎದುರಾಗಿದೆ. ರಿಯಲ್ ಎಸ್ಟೇಟ್ ವಂಚನೆ ಪ್ರಕರಣ ಸಂಬಂಧ ನಟ ಮಹೇಶ್ ಬಾಬು ಅವರಿಗೆ ಜಿಲ್ಲಾ ಗ್ರಾಹಕರ ಆಯೋಗದಿಂದ ಕಾನೂನು ನೋಟಿಸ್ ಕೂಡ ಜಾರಿಯಾಗಿದೆ.
ಏನಿದು ಪ್ರಕರಣ?
ಮಹೇಶ್ ಬಾಬು ಅವರು ಸಾಯಿ ಸೂರ್ಯ ಡೆವಲಪರ್ಸ್‌ನ ಗ್ರೀನ್ ಮೆಡೋಸ್ ಪ್ರಾಜೆಕ್ಟ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಅವರ ಜಾಹೀರಾತುಗಳಿಂದ ಪ್ರಭಾವಿತರಾದ ಗ್ರಾಹಕರು, ಬಲಾಪುರ ಗ್ರಾಮದಲ್ಲಿ ಪ್ಲಾಟ್‌ಗಳನ್ನು ಖರೀದಿಸಲು ಪ್ರತಿ ಪ್ಲಾಟ್‌ಗೆ ₹34.8 ಲಕ್ಷ ಪಾವತಿಸಿದ್ದರು. ಆದರೆ, ಈ ಯೋಜನೆಗಳು ಅನುಮತಿ ಪಡೆದಿರಲಿಲ್ಲ ಮತ್ತು ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂಬುದು ನಂತರ ಬಯಲಾಗಿದೆ. ಮಹೇಶ್ ಬಾಬು ಅವರು ಈ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಕಾರಣ, ಗ್ರಾಹಕರನ್ನು ತಪ್ಪು ದಾರಿಗೆ ಎಳೆದು ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ ಎಂಬ ಆರೋಪದಡಿ, ಅವರನ್ನು ಮೂರನೇ ಪ್ರತಿವಾದಿಯಾಗಿ ಪ್ರಕರಣದಲ್ಲಿ ಸೇರಿಸಲಾಗಿದೆ.
ವರದಿಗಳ ಪ್ರಕಾರ, ಮಹೇಶ್ ಬಾಬು ಅವರಿಗೆ ಈ ಕಂಪನಿಯಿಂದ ಒಟ್ಟು ₹5.9 ಕೋಟಿ ಹಣ ಪಾವತಿಯಾಗಿದೆ. ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ED) ಏಪ್ರಿಲ್ 2025ರಲ್ಲಿ ತನಿಖೆ ನಡೆಸಿತ್ತು. ಆರ್ಥಿಕ ವಂಚನೆ ಮತ್ತು ಹಣದ ಹೂಡಿಕೆ ಕುರಿತು ವಿಚಾರಣೆ ನಡೆಸಿತ್ತು. ಕಂಪನಿಯ ಮಾಲೀಕ ಸತೀಶ್ ಚಂದ್ರ ಗುಪ್ತಾ ವಿರುದ್ಧವೂ ತನಿಖೆ ನಡೆಯುತ್ತಿದೆ. ಈ ವಂಚನೆಯಲ್ಲಿ ಮಹೇಶ್ ಬಾಬು ನೇರವಾಗಿ ಭಾಗಿಯಾಗಿಲ್ಲ ಎಂದು ED ಸ್ಪಷ್ಟಪಡಿಸಿತ್ತು. ಆದರೆ ಗ್ರಾಹಕರ ಆಯೋಗ ನೋಟಿಸ್ ನೀಡುವ ಮೂಲಕ ಮತ್ತೆ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಬಾಬು ಮತ್ತು ಸಂಬಂಧಿತ ಕಂಪನಿಗಳಿಗೆ ಮುಂದಿನ ತಿಂಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮಹೇಶ್ ಬಾಬು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.












Click it and Unblock the Notifications